ರಾಜಕಾಲುವೆ ಮೇಲೆ ನನ್ನ ಆಸ್ತಿಇದ್ದರೆ ಗವರ್ನರ್‌ಗೆ ಬರೆದುಕೊಡುವೆ: ಸಾರಾ

ಮೈಸೂರು:ದಟ್ಟಗಳ್ಳಿಯ ಸಾರಾ ಕನ್ವೆನ್ಷನ್‌ ಹಾಲ್‌ ರಾಜಕಾಲುವೆ ಮೇಲಿದೆ ಎನ್ನುವ ರೋಹಿಣಿ ಸಿಂಧೂರಿ ಅವರ ಆರೋಪಗಳ ವಿರುದ್ಧ ಇಂದು ಶಾಸಕ ಸಾರಾ ಮಹೇಶ್‌ ಅವರು ಪ್ರತಿಭಟನೆ ನಡೆಸಿದರು.

ಸಾರಾ ಕನ್ವೆನ್ಷನ್‌ ಹಾಲ್‌ ಅಷ್ಟೇ ಅಲ್ಲ ನನ್ನ ಯಾವುದೇ ಆಸ್ತಿಯು ಸರ್ಕಾರಿ ಜಾಗ ಅಥವಾ ರಾಜ ಕಾಲುವೆ ಮೇಲೆ ನಿರ್ಮಾಣವಾಗಿದೆ ಎನ್ನುವುದಾದರೆ ಈ ಕೂಡಲೇ ನನ್ನ ಅಷ್ಟೂ ಆಸ್ತಿಗಳನ್ನು ರಾಜ್ಯಪಾಲರ ಹೆಸರಿಗೆ ಬರೆದುಕೊಡುತ್ತೇನೆ ಎಂದು ಸಾರಾ ಅವರು ಪ್ರಾದೇಶಿಕ ಆಯುಕ್ತ ಜಿ.ಸಿ. ಪ್ರಕಾಶ್‌ ಅವರಿಗೆ ಮನವಿ ನೀಡಿದರು.

ರೋಹಿಣಿ ಸಿಂಧೂರಿ ಅವರು ಮಾಡುತ್ತಿರುವ ಆರೋಪಗಳಿಗೆ ಸೂಕ್ತ ಸಾಕ್ಷಿಗಳಿದ್ದರೆ ತಂದು ತೋರಿಸಲಿ. ಇಲ್ಲವಾದರೆ ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಪ್ರಾದೇಶಿಕ ಆಯುಕ್ತರನ್ನು ಸಾರಾ ಒತ್ತಾಯಿಸಿದರು.

× Chat with us