ನಾನೂ ಸಿಎಂ ಸ್ಥಾನದ ಆಕಾಂಕ್ಷಿಯೇ: ತನ್ವೀರ್ ಸೇಠ್‌

ಮೈಸೂರು: ಮುಖ್ಯಮಂತ್ರಿಯಾಗುವ ಅರ್ಹತೆ ನನಗೂ ಇದೆ. ಸಮರ್ಥ, ಪೈಪೋಟಿ ನೀಡುವವರಲ್ಲಿ ಒಬ್ಬನಾಗಿದ್ದೇನೆ. ಹಾಗೆಂದ ಮಾತ್ರಕ್ಕೆ ಅದನ್ನು ಹಿಂಬಾಲಕರಿಂದ ಹೇಳಿಸುವುದಿಲ್ಲ. ನಮ್ಮ ಗುರಿ ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರಬೇಕೇ ಹೊರತು ಮುಖ್ಯಮಂತ್ರಿ ಹುದ್ದೆಯ ಗುರಿಯಲ್ಲ ಎಂದು ಶಾಸಕ ತನ್ವೀರ್‌ಸೇಠ್, ಮಾಜಿ ಸಿಎಂ ಸಿದ್ದರಾಮಯ್ಯ ಅವರ ಹೆಸರನ್ನು ಪ್ರಸ್ತಾಪಿಸದೇ ಟೀಕಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಲ್ಪಸಂಖ್ಯಾತ ವರ್ಗಕ್ಕೆ ಸಿಎಂ ಸ್ಥಾನವನ್ನು ಕೊಡಬೇಕೆಂದು ಹೈಕಮಾಂಡ್ ಮೇಲೆ ಒತ್ತಡ ಹೇರುವಿರಾ ಎನ್ನುವ ಪ್ರಶ್ನೆಗೆ, ʻಅಲ್ಪಸಂಖ್ಯಾತರಿಗೆ ಕೊಡಬೇಕು ಎನ್ನುವ ವಿಚಾರ ಮುಖ್ಯವಲ್ಲ. ಸಿಎಂ ಸ್ಥಾನಕ್ಕೆ ಯಾರ್ಯಾರು ಅರ್ಹರಿದ್ದಾರೆ ಎಂಬುದನ್ನು ಗುರುತಿಸಬೇಕಿದೆ. ಮುಖ್ಯಮಂತ್ರಿ ಸ್ಥಾನದ ಆಸೆ ಇಟ್ಟುಕೊಳ್ಳುವುದರಲ್ಲಿ ತಪ್ಪೇನೂ ಇಲ್ಲ. ಸಮರ್ಥವಾಗಿ ನಿಭಾಯಿಸುವ ಶಕ್ತಿ ಕೂಡ ಇದೆʼ ಎಂದು ಹೇಳಿದರು.

ಯಾರೇ ಆಗಿದ್ದರೂ ಪಕ್ಷಕ್ಕೆ ಹಿನ್ನಡೆಾಂಗುವ ರೀತಿುಂಲ್ಲಿ ವರ್ತಿಸಿದರೆ ಅದು ಪಕ್ಷವಿರೋಧಿ ಚಟುವಟಿಕೆಾಂಗುತ್ತದೆ. ಪಕ್ಷವನ್ನು ರಾಜ್ಯದ ಉದ್ದಗಲಕ್ಕೂ ಸಂಘಟಿಸಬೇಕಾಗಿದೆ. ಕಾಂರ್ುಕರ್ತರ ಕಷ್ಟ-ಸುಖಗಳು, ಸಮಸ್ಯೆಗಳಿಗೆ ನಾವು ಸ್ಪಂದಿಸಿ ಕೆಲಸ ಮಾಡಿ ಪಕ್ಷವನ್ನು ಅಧಿಕಾರಕ್ಕೇ ತರಬೇಕು ಎಂದು ತಿಳಿಸಿದರು.

ಕಾಂಗ್ರೆಸ್‌ನಲ್ಲಿ ಶಿಸ್ತು ಎನ್ನುವುದು ಇದೆ. ಪಕ್ಷದ ವಿರುದ್ಧ ಹಾಗೂ ವ್ಯಕ್ತಿ ಪೂಜೆ ಪ್ರತಿಷ್ಠೆ ವಾಡುವುದನ್ನು ಬಿಟ್ಟು ಪಕ್ಷ ಮತ್ತು ಸಿದ್ಧಾಂತಕ್ಕೆ ವಾನ್ಯತೆ ಕೊಡಬೇಕಾಗಿದೆ. ಪಕ್ಷ ಯಾರನ್ನು ಶಾಸಕಾಂಗ ಪಕ್ಷದ ನಾಯಕರನ್ನಾಗಿ ಆಯ್ಕೆ ಮಾಡುತ್ತದೋ ಅಂತಹವರನ್ನು ಬೆಂಬಲಿಸುವ ಸಂಪ್ರದಾಯ ನಮ್ಮದಾಗಿದೆ. ಭಾವಿ ಮುಖ್ಯಮಂತ್ರಿ ವಿಚಾರ ಎನ್ನುವ ಚರ್ಚೆ ಮಾಡದಂತೆ ಈಗಾಗಲೇ ಎಲ್ಲ ನಾಯಕರು ತಂತಮ್ಮ ಬೆಂಬಲಿಗರಿಗೆ ಸೂಚನೆ ಕೊಟ್ಟಿದ್ದಾರೆ. ರಾಜ್ಯ ಉಸ್ತುವಾರಿಗಳ ಮಾತನ್ನು ಪಾಲಿಸದವರ ವಿರುದ್ಧ ಕ್ರಮ ಹೈಕಮಾಂಡ್ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ರಾಜ್ಯದಲ್ಲಿ ಇತ್ತೀಚಿನ ವರ್ಷಗಳಲ್ಲಿ ಏಕ ಪಕ್ಷ ಅಧಿಕಾರಕ್ಕೆ ಬರಲು ಸಾಧ್ಯವಾಗದಂತಾಗಿದೆ. ಮುಂದಿನ ಚುನಾವಣೆಗಳಲ್ಲಿ ಸಾಮೂಹಿಕ ನಾಯಕತ್ವದಡಿ ಹೋಗಬೇಕಾಗಿದೆ. ಕಾಂಗ್ರೆಸ್‌ನಲ್ಲಿ ಮೊದಲಿನಿಂದಲೂ ಕೆಪಿಸಿಸಿ ಅಧ್ಯಕ್ಷರೇ ಸಿಎಂ ಆಗಬೇಕಿತ್ತು. ಆದರೆ, ಡಾ.ಜಿ.ಪರಮೇಶ್ವರ್ ಚುನಾವಣೆಯಲ್ಲಿ ಪರಾಭವಗೊಂಡರು. ಸೋತಿದ್ದರಿಂದಾಗಿ ಮತ್ತೊಬ್ಬರನ್ನು ಆಯ್ಕೆ ಮಾಡಬೇಕಾಯಿತು ಎಂದು ಹೇಳಿದರು.

ನಾನೇ ನೊಂದಿದ್ದೇನೆ, ಮತ್ತೊಬ್ಬರ ನೋವನ್ನು ಕೇಳಿ ಪರಿಹರಿಸಲು ನನ್ನಿಂದ ಸಾಧ್ಯವಾಗಲ್ಲ. ನನ್ನ ನೋವನ್ನು ನಾನೇ ಹೇಳಿಕೊಂಡಿದ್ದೇನೆ ಹೊರತು ಬೇರೆಯವರ ನೋವು ಕೇಳಿಲ್ಲ. ಡಾ.ಜಿ.ಪರಮೇಶ್ವರ್ ಅವರೊಂದಿಗೆ ಪಕ್ಷ ಸಂಘಟನೆ ಸೇರಿ ಹಲವಾರು ವಿಚಾರಗಳನ್ನು ಮುಕ್ತವಾಗಿ ಚರ್ಚೆ ಮಾಡಿದ್ದೇನೆ ಹೊರತು ಬೇರೇನೂ ವಿಚಾರ ಇಲ್ಲ ಎಂದರು.

× Chat with us