ಕೊಡಗು: 162 ಮಂದಿ ನೆರೆ ಸಂತ್ರಸ್ತರಿಗೆ ಮನೆ ಹಸ್ತಾಂತರ

ಮಡಿಕೇರಿ: 2018ರ ನೆರೆ ಹಾವಳಿಯಿಂದಾಗಿ ನಿರಾಶ್ರಿತರಾದವರಿಗೆ ಶುಕ್ರವಾರ ಮತ್ತೊಂದು ಕಂತಿನಲ್ಲಿ ಮನೆ ವಿತರಣೆ ನಡೆಯಲಿದ್ದು, 162 ಮಂದಿ ಆಶ್ರಯ ಪಡೆಯಲಿದ್ದಾರೆ.

ವಿರಾಜಪೇಟೆ ತಾಲ್ಲೂಕಿನ ಬಿಳಿಗೇರಿ ಮತ್ತು ಮಡಿಕೇರಿ ತಾಲ್ಲೂಕಿನ ಗಾಳಿಬೀಡಿನಲ್ಲಿ ನಿರ್ಮಾಣವಾದ ಮನೆಗಳನ್ನು ಜಿಲ್ಲಾ ಉಸ್ತುವಾರಿ ಸಚಿವ ವಿ. ಸೋಮಣ್ಣ ಫಲಾನುಭವಿಗಳಿಗೆ ಹಸ್ತಾಂತರಿಸಲಿದ್ದಾರೆ.

ಕೆ. ನಿಡುಗಣೆ ಗ್ರಾಮದಲ್ಲೂ ಮನೆಗಳ ನಿರ್ಮಾಣ ಕಾರ್ಯ ಬಿರುಸಿನಿಂದ ಸಾಗಿದೆ.

× Chat with us