ಗುಂಡ್ಲುಪೇಟೆ: ಎಸಿಬಿ ಬಲೆಗೆ ಬಿದ್ದಿದ ತೋಟಗಾರಿಕೆ ಇಲಾಖೆ ಅಧಿಕಾರಿ ಅಮಾನತು

ಗುಂಡ್ಲುಪೇಟೆ: ಲಂಚ ಪಡೆಯುವಾಗ ಭ್ರಷ್ಟಾಚಾರ ನಿಗ್ರಹ ದಳ(ಎಸಿಬಿ) ಬಲೆಗೆ ಸಿಕ್ಕಿ ಬಿದ್ದಿದ ಗುಂಡ್ಲುಪೇಟೆ ತೋಟಗಾರಿಕೆ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಬಿ.ಎಂ.ಶಿವಲಿಂಗಪ್ಪ ಅವರನ್ನು ಅಮಾನತು ಅಮಾನತಗೊಳಿಸಿ ಆದೇಶ ಹೊರಡಿಸಲಾಗಿದೆ.

ತೋಟಗಾರಿಕೆ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಟಿ.ವಿ.ಸುನಂದಮ್ಮ ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ.

ಫೆಬ್ರುವರಿ 5 ರಂದು ಮಂಜುನಾಥ ಎಂಬುವರಿಂದ 50 ಸಾವಿರ ಲಂಚ ಪಡೆಯುವಾಗ ಆರೋಪಿ ಅಧಿಕಾರಿ ಶಿವಲಿಂಗಪ್ಪ ಎಸಿಬಿ ಪೊಲೀಸರಿಗೆ ಸಿಕ್ಕಿ ಬಿದ್ದಿದ್ದರು.ನಂತರ ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿತ್ತು.

ಸಾಕ್ಷ್ಯ ನಾಶಪಡಿಸುವ ಸಂಭವ ಇರುವುದರಿಂದ ಆರೋಪಿ ಅಧಿಕಾರಿಯನ್ನು ಪ್ರಸ್ತುತ ಸ್ಥಳದಲ್ಲೇ ಮುಂದುವರೆಸಬಾರದು ಎಂದು ಎಸಿಬಿ ಹೆಚ್ಚುವರಿ ಪೊಲೀಸ್ ಮಹಾ ನಿದೇಶಕರು ಸರ್ಕಾರಕ್ಕೆ ಮನವಿ ಮಾಡಿದ್ದರು.

× Chat with us