BREAKING NEWS

ಭಾರತದ ಪಾನಿಪುರಿಗೆ ಮನಸೋತ ಗೂಗಲ್‌: ಡೂಡಲ್‌ ಮೂಲಕ ಗೌರವ ಸಲ್ಲಿಕೆ

ನವದೆಹಲಿ: ಟೆಕ್​ ದೈತ್ಯ ಕಂಪನಿ ಗೂಗಲ್ ಭಾರತದ ಪಾನಿಪುರಿಗೆ ಮನಸೋತಿದ್ದು, ಡೂಡಲ್ ಮೂಲಕ ಪಾನಿಪುರಿಗೆ ವಿಶೇಷ ಗೌರವ ಸಲ್ಲಿಸಿದೆ.

ಆಲೂಗಡ್ಡೆ, ಕ್ಯಾರೆಟ್​ ಹಾಗೂ ಮಸಾಲೆ ನೀರಿನಿಂದ ತುಂಬಿದ ಗರಿಗಿರಿಯಾದ ಪುರಿ ದಕ್ಷಿಣ ಏಷ್ಯಾದ ಬೀದಿಬದಿಯ ಜನಪ್ರಿಯ ಖಾದ್ಯ. ಇಂದು ಜನಪ್ರಿಯ ಖಾದ್ಯವಾದ ಪಾನಿಪುರಿ ದಿನವಾಗಿದ್ದು. ಈ ಹಿನ್ನೆಲೆಯಲ್ಲಿ ಗೂಗಲ್ ಗೌರವ ಸಲ್ಲಿಸಿದೆ.

2015ರ ಜುಲೈ 12ರಂದು ಮಧ್ಯಪ್ರದೇಶದ ಇಂದೋರ್‌ನ ರೆಸ್ಟೋರೆಂಟ್‌ವೊಂದು ತನ್ನ ಗ್ರಾಹಕರಿಗಾಗಿ 51 ವಿವಿಧ ರೀತಿಯ ಪಾನಿಪುರಿಗಳನ್ನು ತಯಾರಿಸಿತು. ಅಲ್ಲಿ ತಯಾರಿಸಲಾಗಿದ್ದ ಅಷ್ಟೂ ಪಾನಿಪುರಿಗಳು ಅತ್ಯಂತ ರುಚಿಕರವಾಗಿದ್ದರಿಂದ ಗೋಲ್ಡನ್​ಬುಕ್​ ಆಫ್​ ವರ್ಲ್ಡ್​ ರೆಕಾರ್ಡ್​ನಲ್ಲಿ ಸ್ಥಾನ ನೀಡಲಾಗಿತ್ತು. ಅಂದಿನಿಂದ ಜುಲೈ 12 ಅನ್ನು ‘ಪಾನಿಪುರಿ ದಿನ’ ಎಂದು ಕರೆಯಲಾಗುತ್ತಿದೆ. ಇದೀಗ ಎಂಟು ವರ್ಷಗಳ ನಂತರ ಗೂಗಲ್ ಪಾನಿಪುರಿ ದಿನಾಚರಿಸುತ್ತಿದ್ದು, ಪಾನಿಪುರಿ ಗೇಮ್ ರಚಿಸಿದೆ.

ಗೂಗಲ್​ ಡೂಡಲ್​ ಪಾನಿಪುರಿ ಗೇಮ್​ ಆಡುವುದು ಹೇಗೆ…?

  • WWW.Google.Com ಸರ್ಚ್‌ ಮಾಡಿ.
  • ನಂತರ ಕಂಪ್ಯೂಟರ್‌ ಅಥವಾ ಮೊಬೈಲ್‌ ಮೇಲೆ ಗೇಮ್‌ ಗೋಚರವಾಗುತ್ತದೆ
  • ಬಳಿಕ ಗೇಮ್‌ ಮೇಲೆ ಕ್ಲಿಕ್‌ ಮಾಡಿ
  • ಆಗ Timed ಹಾಗೂ Relaxed ಎಂಬ ಆಪ್ಶನ್‌ ಸಿಗುತ್ತವೆ, ಯಾವುದಾದರೂ ಒಂದನ್ನು ಆಯ್ಕೆ ಮಾಡಿ
  • ಬಳಿಕ ಪಾನಿ ಪುರಿ ಜೋಡಿಸುತ್ತ ಗೇಮ್‌ ಆಡಿ
andolanait

Recent Posts

ಮ.ಬೆಟ್ಟ | ಅಪರಿಚಿತ ವಾಹನ ಡಿಕ್ಕಿ : ಜಿಂಕೆ ಸಾವು

ಹನೂರು : ಮಹದೇಶ್ವರ ಬೆಟ್ಟ ರಸ್ತೆಯಲ್ಲಿ ನಡೆದ ಹಿಟ್ ಅಂಡ್ ರನ್ ಪ್ರಕರಣದಲ್ಲಿ ಜಿಂಕೆಯೊಂದು ರಸ್ತೆಯಲ್ಲಿಯೇ ಮೃತಪಟ್ಟಿರುವ ಘಟನೆ ಭಾನುವಾರ…

27 mins ago

ಹನೂರು | ಚಿನ್ನ ನಿಕ್ಷೇಪದ ಶಂಕೆ ; ಗುಡ್ಡವನ್ನೇ ಅಗೆದ ಕಿಡಿಗೇಡಿಗಳು

ಹನೂರು : ತಾಲ್ಲೂಕಿನ ದೊಡ್ಡಾಲತ್ತೂರು, ಅಜ್ಜೀಪುರ ಸುತ್ತಮುತ್ತಲೂ ಜಿಎಸ್‌ಐ ಅಧಿಕಾರಿಗಳು ಚಿನ್ನದ ನಿಕ್ಷೇಪ ಇರುವ ಬಗ್ಗೆ ಅಧ್ಯಯನಕ್ಕೆ ಮುಂದಾಗುತ್ತಿದ್ದಂತೆ ಚಿನ್ನದಾಸೆಗಾಗಿ…

39 mins ago

ಅರಮನೆ ಅಂಗಳದಲ್ಲಿ ಫಲಪುಷ್ಪ ಪ್ರದರ್ಶನ ಆರಂಭ : ವರ್ಣರಂಜಿತ ಚಾಲನೆ

ಮೈಸೂರು : ಕ್ರಿಸ್‌ಮಸ್ ಮತ್ತು ಹೊಸ ವರ್ಷದ ಸಂಭ್ರಮಕ್ಕೆ ಮುನ್ನುಡಿಯಾಗಿ ಅರಮನೆ ಫಲಪುಷ್ಪ ಪ್ರದರ್ಶನ ಭಾನುವಾರದಿಂದ ವರ್ಣರಂಜಿತವಾಗಿ ಆರಂಭಗೊಂಡಿದೆ. ಮೈಸೂರು…

43 mins ago

ಜೋಹಾನ್ಸ್‌ಬರ್ಗ್‌ನಲ್ಲಿ ಗುಂಡಿನ ದಾಳಿ : 10 ಮಂದಿ ಸಾವು, 10 ಜನರಿಗೆ ಗಾಯ

ಜೋಹಾನ್ಸ್‌ಬರ್ಗ್ : ದಕ್ಷಿಣ ಆಫ್ರಿಕಾದ ಜೋಹಾನ್ಸ್‌ಬರ್ಗ್‌ನ ಪಶ್ಚಿಮದಲ್ಲಿರುವ ಬೆಕರ್ಸ್‌ಡಾಲ್ ಪಟ್ಟಣದಲ್ಲಿ ಸಾಮೂಹಿಕ ಗುಂಡಿನ ದಾಳಿ ನಡೆದಿದೆ. ಈ ಸಾಮೂಹಿಕ ಗುಂಡಿನ…

47 mins ago

ಎಚ್.ಡಿ.ಕೋಟೆ | ಪಟ್ಟಣಕ್ಕೆ ಬಂದ ಚಿರತೆ : ಮೇಕೆ ಬಲಿ ; ಜನರಲ್ಲಿ ಆತಂಕ

ಎಚ್.ಡಿ.ಕೋಟೆ : ಹುಲಿ ದಾಳಿಯಿಂದ ತತ್ತರಿಸಿರುವ ತಾಲ್ಲೂಕಿನ ಜನತೆಗೆ ಇದೀಗ ಚಿರತೆ ದಾಳಿಯು ನಿದ್ದೆಗೆಡಿಸಿದೆ. ಪಟ್ಟಣದ ವಾರ್ಡ್‌ ನಂಬರ್‌ 21ರ…

1 hour ago

ಗಂಗವಾಡಿ ಬಳಿ ಚಿರತೆ ದಾಳಿ : ಮೂರು ಕರು ಸಾವು

ಚಾಮರಾಜನಗರ : ತಾಲ್ಲೂಕಿನ ಗಂಗವಾಡಿ ಗ್ರಾಮದ ಬಳಿ ಶನಿವಾರ ರಾತ್ರಿ ಜಮೀನಿನಲ್ಲಿ ಕಟ್ಟಿ ಹಾಕಿದ್ದ ಕರುಗಳ ಮೇಲೆ ಚಿರತೆ ದಾಳಿ…

2 hours ago