ಬಾಗಲಕೋಟೆ : ಜಮಖಂಡಿ ತಾಲ್ಲೂಕಿನ ಹುಲ್ಯಾಳ ಗ್ರಾಮದ ಪ್ರೌಢ ಶಾಲೆಯಲ್ಲಿ ಪರೀಕ್ಷೆ ಬರೆಯುವ ವೇಳೆ ವಿದ್ಯಾರ್ಥಿಯೊಬ್ಬನಿಗೆ ಹೃದಯಾಘಾತ ಸಂಭವಿಸಿ ಸಾವಿಗೀಡಾಗಿರುವ ಘಟನೆ ನಡೆದಿದೆ. ಜಮಖಂಡಿ ತಾಲ್ಲೂಕಿನ ಇನಾಂ ಹಂಚಿನಾಳ ಪುನರ್ವಸತಿ ಕೇಂದ್ರದ ನಿವಾಸಿಯಾದ ವಿದ್ಯಾರ್ಥಿ ರಾಹುಲ್ ವಿಠ್ಠಲ ಕೋಲಕಾರ (15) ಸಾವನ್ನಪ್ಪಿರುವ ದುರ್ದೈವಿ.
ರಾಹುಲ್ ವಿಠ್ಠಲ ಹುಲ್ಯಾಳ ಗ್ರಾಮದ ಶ್ರೀ ಗುರು ಶಂಭುಲಿಂಗೇಶ್ವರ ಮಾಧ್ಯಮಿಕ ಶಾಲೆಯಲ್ಲಿ 9ನೇ ತರಗತಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ, ಶಾಲೆಯಲ್ಲಿ ಆತನಿಗೆ ಅರ್ಧ ವಾರ್ಷಿಕ ಪರೀಕ್ಷೆಯನ್ನು ಬರೆಯುವ ಸಮಯದಲ್ಲಿ ಎದೆ ನೋವು ಕಾಣಿಸಿಕೊಂಡಿದೆ. ಅಲ್ಲಿರುವ ಶಿಕ್ಷಕರು ವಿದ್ಯಾರ್ಥಿ ಪಾಲಕರಿಗೆ ಮಾಹಿತಿ ನೀಡಿದ್ದಾರೆ.
ವಿದ್ಯಾರ್ಥಿ ರಾಹುಲ್ ವಿಠ್ಠಲ ಕೋಲಕಾರನನ್ನು ಹೆಚ್ಚಿನ ಚಿಕಿತ್ಸೆಗಾಗಿ ಜಮಖಂಡಿ ನಗರದ ಖಾಸಗಿ ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯದಲ್ಲಿ ಸಾವನ್ನಪ್ಪಿದ್ದಾಗಿ ತಿಳಿದು ಬಂದಿದೆ. ಇನ್ನು ಸಾವಿಗೀಡಾಗಿರುವ ವಿದ್ಯಾರ್ಥಿಗೆ ಹೃದಯಸಂಬಂಧಿ ಕಾಯಿಲೆ ಇತ್ತು ಎಂದು ಹೇಳಲಾಗ್ತಿದೆ.
ಪ್ರಾಧಿಕಾರಕ್ಕೆ ಪತ್ರ ಬರೆಯುವ ಅಧಿಕಾರವಿದೆ, ನಿರ್ಧಾರ ಕೈಗೊಳ್ಳುವ ಅಧಿಕಾರವಿಲ್ಲ: ಬಿಳಿಮಲೆ • ಸಂದರ್ಶನ: ರಡ್ಡಿ ಕೋಟಿ ಕನ್ನಡದ ಸಮಸ್ಯೆಗಳು ಬೆಟ್ಟದ…
ಜ.15ರಂದು ಮೈಸೂರಿನಲ್ಲಿ ಗೃಹ ಆರೋಗ್ಯ ಯೋಜನೆ ಜಾರಿ ಎಚ್. ಎಸ್. ದಿನೇಶ್‌ಕುಮಾರ್ ಮೈಸೂರು: ಆಧುನಿಕ ಜೀವನ ಶೈಲಿ ಸೇರಿದಂತೆ ಅನೇಕ…
2 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಯೋಜನೆ; ಹುಲಿ ಸಂರಕ್ಷಿತಾರಣ್ಯ ಮಾದರಿಯಲ್ಲಿ ನಿರ್ಮಿಸಲು ಚಿಂತನೆ ನವೀನ್ ಡಿಸೋಜ ಮಡಿಕೇರಿ: ಅರಣ್ಯದಂಚಿನಲ್ಲಿ ನಡೆಯುತ್ತಿರುವ…
ಫಲಿಸದ ಪ್ರಾರ್ಥನೆ: ಗಂಭೀರವಾಗಿ ಗಾಯಗೊಂಡಿದ್ದ ಕೊಡಗು ಮೂಲದ ಯೋಧ ಕೊನೆಯುಸಿರು ಮಡಿಕೇರಿ: ಜಮ್ಮು ಕಾಶ್ಮೀರದಲ್ಲಿ ನಡೆದ ಸೇನಾ ವಾಹನ ಅಪಘಾತದಲ್ಲಿ…
ಬೆಂಗಳೂರು: ಬಿಜೆಪಿಯವರು ತಮ್ಮ ವಿರುದ್ಧ ಹಾರಾಡಿ, ಚೀರಾಡಿ, ಬಟ್ಟೆ ಹರಿದುಕೊಂಡರೂ ತಾವು ತಲೆಕೆಡಿಸಿಕೊಳ್ಳುವುದಿಲ್ಲ ಯಾರಿಗೇ ದೂರು ನೀಡಿದರೂ ಹೆದರುವುದಿಲ್ಲ ಎಂದು…
ಬೆಂಗಳೂರು: ಅತ್ಯಂತ ವಿಶಿಷ್ಟವಾದ ಹವ್ಯಕ ಭಾಷೆ ಉಳಿಯಬೇಕು, ಈ ಭಾಷೆ ಉಳಿಯುವ ನಿಟ್ಟಿನಲ್ಲಿ ನಾನು ನಿಮ್ಮೊಂದಿಗೆ ಇರುತ್ತೇನೆ ಎಂದು ಕೇಂದ್ರದ…