ವೈದ್ಯನಾಗಿರುವ ಹೆಚ್ ಡಿ ರೇವಣ್ಣ ಮಗ ಡಾ. ಸೂರಜ್ ಅವರ ಆಸ್ತಿ 65 ಕೋಟಿ ರೂ

ಹಾಸನ: ವೃತ್ತಿಯಲ್ಲಿ ವೈದ್ಯನಾಗಿರುವ ಸೂರಜ್ ಅವರು ಕೇವಲ 33 ನೇ ವಯಸ್ಸಿಗೆ ಕೋಟಿಗಟ್ಟಲೆ ಆಸ್ತಿ ಸಂಪಾದಿಸಿದ್ದಾರೆ. ನಾಮಪತ್ರದೊಂದಿಗೆ ಅವರಿಂದು ಸಲ್ಲಿಸಿರುವ ಆಸ್ತಿ ಕುರಿತ ಅಫಿಡವಿಟ್ ಪ್ರಕಾರ ಸುಮಾರು ರೂ. 65 ಕೋಟಿಗಳಿಗೂ ಹೆಚ್ಚು ಆಸ್ತಿಗೆ ಒಡೆಯನಾಗಿದ್ದಾರೆ.

ಅವರ ಹೆಸರಲ್ಲಿ ರೂ. 3.53 ಕೋಟಿ ಚರಾಸ್ತಿ ಮತ್ತು ರೂ. 61.68 ಕೋಟಿ ಮೌಲ್ಯದ ಸ್ಥಿರಾಸ್ತಿ ಇದೆ. ಗಮನಿಸಬೇಕಾದ ಸಂಗತಿಯೇನೆಂದರೆ, ಡಾ ಸೂರಜ್ ತಮ್ಮ ತಾತ-ಅಜ್ಜಿ, ಅತ್ತೆಯಂದಿರು, ಹಾಗೂ ತಂದೆ-ತಾಯಿಗಳಿಂದ ಸುಮಾರು 15 ಕೋಟಿ ರೂ. ಸಾಲ ಪಡೆದಿದ್ದಾರೆ. ಅವರಲ್ಲಿ ಸುಮಾರು 46 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಹಾಗೂ 18 ಕೆಜಿ ಬೆಳ್ಳಿಯಿದೆ.

2015ರಲ್ಲಿ ಜನರಲ್ ಸರ್ಜರಿಯಲ್ಲಿ ಎಮ್ಎಸ್ ವ್ಯಾಸಂಗವನ್ನು ಪೂರ್ತಿಗೊಳಿಸಿದ ಡಾ ಸೂರಜ್ 36 ಆಕಳು ಮತ್ತು 8 ದನಗಳನ್ನು ಸಹ ಹೊಂದಿದ್ದಾರೆ.

ತಮ್ಮ ಪತ್ನಿಯ ಹೆಸರಲ್ಲಿರುವ ಆಸ್ತಿಯನ್ನು ಸೂರಜ್ ಬಹಿರಂಗಪಡಿಸಿಲ್ಲ.

× Chat with us