ನೀರಾವರಿ ಯೋಜನೆಗಳಿಗಾಗಿ ಹೋರಾಟ: ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ

ಬೆಂಗಳೂರು: ಕರ್ನಾಟಕದಲ್ಲಿ ನೀರಾವರಿ ಯೋಜನೆಗಳಿಗಾಗಿ ಹೋರಾಟ ನಡೆಸಲಾಗುವುದು ಎಂದು ಮಾಜಿ ಪ್ರಧಾನ ಮಂತ್ರಿ ಎಚ್‌.ಡಿ ದೇವೇಗೌಡ ಹೇಳಿದ್ದಾರೆ.

ಈ ಯೋಜನೆಗಳಿಗೆ ಸಂಬಂಧಿಸಿದಂತೆ ನೆರೆ ರಾಜ್ಯಗಳೊಂದಿಗಿನ ವಿವಾದ ಬಗೆಹರಿಸಿಕೊಳ್ಳುತ್ತೇವೆಂದು ಸಿಎಂ ಹೇಳಿದ್ದಾರೆ. ಈ ಬಗ್ಗೆ ಸುಪ್ರೀಂ ಕೋರ್ಟ್​ನಲ್ಲಿ 3 ರಾಜ್ಯಗಳು ಅರ್ಜಿ ಸಲ್ಲಿಸಿವೆ. ಈ ಬಗ್ಗೆ ಶರದ್ ಪವಾರ್, ಜೆಡಿಎಸ್ ಮುಖಂಡರ ಜತೆ ಚರ್ಚಿಸುವೆ. ಆಲಮಟ್ಟಿ ವಿಚಾರ ಇಂದು ನಿನ್ನೆಯದಲ್ಲ. ಆಲಮಟ್ಟಿಯಿಂದ ಪಾದಯಾತ್ರೆಗೆ ಜೆಡಿಎಸ್​ ನಿರ್ಧರಿಸಿದೆ ಎಂದು ತಿಳಿಸಿದ್ದಾರೆ.

ಮೇಕೆದಾಟು ವಿಚಾರವಾಗಿ ಇನ್ನೊಂದು ತಂಡ ಬರಬೇಕು. ರಾಜ್ಯದ 3 ನೀರಾವರಿ ಯೋಜನೆಗಳು ಹೀಗೆಯೇ ಆಗಿದೆ. ಮಹದಾಯಿ ನಮ್ಮಲ್ಲೇ ಶುರುವಾಗಿ ಮಹಾರಾಷ್ಟ್ರದಲ್ಲೂ ಇದೆ. 3 ಯೋಜನೆ ಬಗ್ಗೆ ಸುಮ್ಮನೆ ಕೂತರೆ ಆಗಲ್ಲವೆಂದು ನಿರ್ಧಾರ ಮಾಡಲಾಗಿದೆ. ನಾನೂ ಕೂಡ ಸಾಂಕೇತಿಕವಾಗಿ ಒಂದು ದಿನ ಹೋಗುತ್ತೇನೆ. ನಮಗೆ ಯಾರ ಮೇಲೂ ದ್ವೇಷವಿಲ್ಲ ಎಂದಿದ್ದಾರೆ.

ತಾಲಿಬಾನಿಗಳ ಕಪಿಮುಷ್ಠಿಯಲ್ಲಿರುವ ಅಫ್ಘಾನಿಸ್ತಾನದ ಬಗ್ಗೆ ದೇವೇಗೌಡರು, ಅಮೆರಿಕ ಅಧ್ಯಕ್ಷರು ಮುಂದಾಲೋಚನೆ ಮಾಡಬೇಕಾಗಿತ್ತು. ಸೇನೆ ಕರೆಸಿಕೊಂಡರೆ ಏನಾಗುತ್ತೆ ಎಂದು ಯೋಚಿಸಬೇಕಿತ್ತು ಎಂದು ಮಾತನಾಡಿದ್ದಾರೆ.

ಡೊನಾಲ್ಡ್ ಟ್ರಂಪ್​​ಗೂ ಜೋ ಬೈಡೆನ್​ಗೂ ವ್ಯತ್ಯಾಸವಿದೆ. ಅಮೆರಿಕ ಸೈನಿಕರು 20 ವರ್ಷಗಳ ಕಾಲ ಹೋರಾಡಿದ್ದಾರೆ. ಹೋರಾಟಕ್ಕೆ 3 ಟ್ರಿಲಿಯನ್​ ಡಾಲರ್ ಹಣ ವ್ಯಯವಾಗಿದೆ. ಅಫ್ಗಾನ್‌ಗೆ ನಾವ್ಯಾಕೆ ಸಪೋರ್ಟ್ ಮಾಡಬೇಕೆಂದು ನಿರ್ಧಾರ ಮಾಡಿ, ಅಫ್ಗಾನ್‌ನಿಂದ ಅಮೆರಿಕ ತನ್ನ ಸೇನೆ ವಾಪಸ್ ಕರೆಸಿಕೊಂಡಿದೆ. ರಷ್ಯಾ, ಚೀನಾ, ಪಾಕಿಸ್ತಾನ, ಟರ್ಕಿ ಜೊತೆ ನಿಂತವರು ಯಾರು? ತಾಲಿಬಾನಿಗಳು​ ಹೊಸಬರಲ್ಲ, ನಾನು ಪ್ರಧಾನಿ ಆಗಿದ್ದಾಗಲೂ ಆ ಸಂಘಟನೆ ಇತ್ತು. ನನ್ನ ಅವಧಿಯಲ್ಲಿ ಅಫ್ಗಾನಿಸ್ತಾನದಲ್ಲಿ ರಬ್ಬಾನಿ ಅಂತ ಅಧ್ಯಕ್ಷರಿದ್ದರು. 2001ರವರೆಗೆ ಅಧ್ಯಕ್ಷ ರಬ್ಬಾನಿ ಹತೋಟಿಗೆ ತೆಗೆದುಕೊಂಡಿದ್ದ. ನಂತರ ಅಮೆರಿಕ ದೇಶದ ಸೈನಿಕರು ಚುರುಕಾಗಿ ಕೆಲಸಮಾಡಿದ್ದರು. ಅಫ್ಗಾನಿಸ್ತಾನದ ದೊಡ್ಡ ಬೆಟ್ಟ ಗುಡ್ಡಗಳು ಇರುವಂತಹ ಪ್ರದೇಶ ಎಂದಿದ್ದಾರೆ.

× Chat with us