ಹಾಸನ ಜಿಲ್ಲೆ ಸುತ್ತಮುತ್ತಲಿನ ಹಲವೆಡೆ ಕಂಪಿಸಿದ ಭೂಮಿ

ಹಾಸನ : ಹಾಸನ ಸುತ್ತಮುತ್ತಲಿನ ಹಲವೆಡೆ ಇಂದು ಬೆಳ್ಳಂಬೆಳ್ಳಿಗ್ಗೆ ಭೂಮಿ ಕಂಪಿಸಿದೆ. ನಿದ್ರೆಯಿಂದ ಮಲಗಿದ್ದೆ ಜನರು ಮನೆಯಿಂದ ಹೊರ ಬಂದಿದ್ದಾರೆ.

ಹಾಸನ ಹೊಳೆನರಸೀಪುರ ಅರಕಲಗೂಡು ತಾಲೂಕಿನ ಹಲವೆಡೆ ಭೂಮಿ ಕಂಪಿಸಿದ ಘಟನೆ ನಡೆದಿದ್ದು, ಅರಕಲಗೂಡು ತಾಲೂಕಿನ ಬೆಳವಾಡಿ ಕಾರಹಳ್ಳಿ ಹನೆಮರನಹಳ್ಳಿ ಗಳಲ್ಲಿ ಬೆಳಿಗ್ಗೆ ಸುಮಾರು 4:30 ಕ್ಕೆ ಭೂಮಿ ಕಂಪನವಾಗಿದೆ. ಹಾಸನ ತಾಲೂಕಿನ ಮಳೆ ಮಲ್ಲೆ ದೇವರಪುರ, ಕಾರ್ಲೆ ಅಂಕನಹಳ್ಳಿ ಗ್ರಾಮದ ಸುತ್ತಮುತ್ತಲು ಭೂಮಿ ಕಂಪಿಸಿದ್ದು, ಜನರಲ್ಲಿ ಭಯದ ವಾತಾವರಣ ಸೃಷ್ಟಿಯಾಗಿದೆ.