ಹಾಸನ: ಮ್ಯಾನ್​ಹೋಲ್​ಗೆ ಪೌರಕಾರ್ಮಿಕರನ್ನು ಇಳಿಸಿ ಸ್ವಚ್ಛತೆ; ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಆಗ್ರಹ

ಹಾಸನ: ಮ್ಯಾನ್​ಹೋಲ್​ಗೆ ಪೌರ ಕಾರ್ಮಿಕರನ್ನು ಇಳಿಸಿ ಕ್ಲೀನಿಂಗ್ ಮಾಡಿಸಿದ ಅಮಾನವೀಯ ಘಟನೆ ಹಾಸನ ಜಿಲ್ಲೆ ಹೊಳೆನರಸೀಪುರದಲ್ಲಿ ನಡೆದಿದೆ. ಒಳಚರಂಡಿ ಚೇಂಬರ್​ಗೆ ಪೌರಕಾರ್ಮಿಕರನ್ನು ಇಳಿಸಿ​ ಸ್ವಚ್ಛತೆ ಮಾಡಿಸಲಾಗಿದೆ. ಮ್ಯಾನ್​ಹೋಲ್​ಗೆ ಇಳಿಸದಂತೆ ನಿರ್ಬಂಧವಿದ್ದರೂ ನಿರ್ಲಕ್ಷ್ಯ ವಹಿಸಲಾಗಿದೆ. ಹೊಳೆನರಸೀಪುರ ಪಟ್ಟಣ ಪಂಚಾಯತ್ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಆಕ್ರೋಶ ವ್ಯಕ್ತವಾಗಿದೆ.

ಇಲ್ಲಿನ 17ನೇ ವಾರ್ಡ್​ನಲ್ಲಿ ಮ್ಯಾನ್​ಹೋಲ್​ ಅನ್ನು ಸಿಬ್ಬಂದಿ ಸ್ವಚ್ಛಗೊಳಿಸಿದ್ದಾರೆ. ಸಕ್ಕಿಂಗ್​ ಯಂತ್ರವಿದ್ದರೂ ಬಳಸದೆ ಅಧಿಕಾರಿಗಳಿಂದ ನಿರ್ಲಕ್ಷ್ಯ ವಹಿಸಲಾಗಿದೆ. ಪಟ್ಟಣ ಪಂಚಾಯಿತಿ ಅಧಿಕಾರಿಗಳ ವಿರುದ್ಧ ಜನರ ಆಕ್ರೋಶ ಕೇಳಿಬಂದಿದೆ. ಬೇಜವಾಬ್ದಾರಿಯುತ ಅಧಿಕಾರಿಗಳ ವಿರುದ್ದ ಕ್ರಮಕ್ಕೆ ಆಗ್ರಹ ಕೇಳಿಬಂದಿದೆ.

× Chat with us