ಗಿರಿಜನರ ಹಕ್ಕುಗಳ ಹೋರಾಟಗಾರ ಕ್ಷೀರ ಸಾಗರ್‌ ನಿಧನ

ಎಚ್‌.ಡಿ.ಕೋಟೆ: ಪಕ್ಷಿ ತಜ್ಞ, ಅಂಕಣಕಾರ ಎಚ್.ಡಿ.ಕೋಟೆಯ ಕ್ಷೀರ ಸಾಗರ್ (70) ಬೆಂಗಳೂರಿನ ಕಿದ್ವಾಯಿ ಆಸ್ಪತ್ರೆಯಲ್ಲಿ ಬುಧವಾರ ಮುಂಜಾನೆ ನಿಧನರಾದರು.

ಪತ್ನಿ ಲಕ್ಷ್ಮಿ ಅವರನ್ನು ಅಗಲಿದ್ದಾರೆ. ತಾಲ್ಲೂಕಿನ ವಡ್ಡರಗುಡಿಯಲ್ಲಿರುವ ತೋಟದಲ್ಲಿ ಇಂದು ಮಧ್ಯಾಹ್ನ ಅಂತ್ಯಕ್ರಿಯೆ ನಡೆಯಲಿದೆ.

ಕ್ಷೀರ ಸಾಗರ್‌ ಅವರ ಹುಟ್ಟೂರು ಗೌಡಗೆರೆ. ಮರಾಠಿ ಮೂಲದವರು. ನಂತರ ಇವರು ಎಚ್‌.ಡಿ.ಕೋಟೆಯಲ್ಲಿ ನೆಲೆಸಿ ಗಿರಿಜನರ ಹಕ್ಕುಗಳಿಗಾಗಿ ಹೋರಾಟಗಾರರಾಗಿದ್ದರು. ಗಿರಿಜನರ ಕಲ್ಯಾಣಕ್ಕಾಗಿ ರೂಪುಗೊಂಡಿದ್ದ ಪ್ರೆಡಿನಾ ವಿಕಾಸ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸಿದ್ದರು. ಜೊತೆಗೆ ದಲಿತರು, ರೈತರ ಪರವಾಗಿ ಚಳವಳಿಗಳಲ್ಲಿ ಸಕ್ರಿಯರಾಗಿದ್ದರು.

× Chat with us