ಮೋಹನ್‌ ಭಾಗವತ್‌ರೇ ನೀವೆ ಪುನರ್ಜನ್ಮ ಪಡೆಯಬಹುದಲ್ಲ?- ಎಚ್‌.ಸಿ.ಮಹದೇವಪ್ಪ

ಮೈಸೂರು: ಜೀವಶಾಸ್ತ್ರ ಮತ್ತು ವೈದ್ಯಕೀಯ ಶಾಸ್ತ್ರವನ್ನು ಓದಿದ ನಮಗೆಲ್ಲಾ ಆರ್‌ಎಸ್‌ಎಸ್‌ ಮುಖ್ಯಸ್ಥ ಮೋಹನ್ ಭಾಗವತ್ ಅವರು ಹೇಳುತ್ತಿರುವ ಪುನರ್ಜನ್ಮದ ಕುರಿತಂತೆ ನಿಜಕ್ಕೂ ತಿಳಿದಿಲ್ಲ ಎಂದು ಮಾಜಿ ಸಚಿವ ಡಾ. ಎಚ್.ಸಿ.ಮಹದೇವಪ್ಪ ಹೇಳಿದರು.

ಭಾಗವತ್‌ ಹೇಳಿಕೆ ಸಾಮಾಜಿಕ ಮಾಧ್ಯಮದಲ್ಲಿ ಪ್ರತಿಕ್ರಿಯಿಸಿರುವ ಅವರು, ʻಈ ಹಿನ್ನಲೆಯಲ್ಲಿ ಈ ವಿಷಯ ಹೇಗೆ ಸಾಧ್ಯವಾಗುತ್ತದೆ ಎಂಬುದರ ಬಗ್ಗೆ ನನ್ನೊಳಗೆ ದಿಗ್ಭ್ರಮೆ ಮೂಡಿದ್ದು ಸ್ವತಃ ಮೋಹನ್ ಭಾಗವತ್ ಅವರೇ ಒಮ್ಮೆ ಪುನರ್ಜನ್ಮ ತಾಳಿ ನನ್ನೆದುರಿಗೆ ಬಂದರೆ ಅವರ ಈ ಜ್ವಲಂತ ಅನುಭವದ ಸಹಾಯದಿಂದ ಪುನರ್ಜನ್ಮದ ಬಗ್ಗೆ ನಾನೂ ಕೂಡಾ ಒಂದಷ್ಟು ಸಂಗತಿಗಳನ್ನು ತಿಳಿದುಕೊಳ್ಳುತ್ತೇನೆ. ಈ ಕುರಿತಾಗಿ ನನಗೆ ಬಹಳಷ್ಟು ಕುತೂಹಲವೂ ಇರುವುದರಿಂದ ಮೋಹನ್ ಭಾಗವತ್ ಅವರು ಈ ನಿಟ್ಟಿನಲ್ಲಿ ಪುನರ್ಜನ್ಮದ ಪಡೆದು ಬರುವ ಕುರಿತು ಯೋಚಿಸಲಿʼ ಎಂದು ತಿಳಿಸಿದ್ದಾರೆ.

× Chat with us