ಕೊಡಗಿಗೆ ಒಂದೂವರೆ ಕೋಟಿ ವೆಚ್ಚದ ಆಕ್ಸಿಜನ್ ಪ್ಲಾಂಟ್ ಮಂಜೂರು: ಪ್ರತಾಪಸಿಂಹ

ಕೊಡಗು: ಜಿಲ್ಲೆಯಲ್ಲಿ ಆಕ್ಸಿಜನ್‌ ಪ್ಲಾಂಟ್‌ ರೂಪಿಸಲು ಒಂದೂವರೆ ಕೋಟಿ ರೂ. ಮಂಜೂರಾಗಿದೆ ಎಂದು ಸಂಸದ ಪ್ರತಾಪಸಿಂಹ ಹೇಳಿದರು.

ನಗರದಲ್ಲಿ ಮಂಗಳವಾರ ಮಾತನಾಡಿದ ಅವರು, ಪ್ರತಿ ನಿಮಿಷಕ್ಕೆ 1,000 ಲೀಟರ್ ಆಕ್ಸಿಜನ್ ಉತ್ಪಾದನೆ ಸಾಮಾರ್ಥ್ಯ‌ ಇರುವ ಪ್ಲಾಂಟ್‌ ನಿರ್ಮಿಸಲಾಗುವುದು. ಕೋವಿಡ್‌ ಮೂರನೇ ಅಲೆ ಸಂದರ್ಭದಲ್ಲಿ ಆಮ್ಲಜನಕ ಕೊರತೆಯಾಗದಂತೆ ಮುನ್ನೆಚ್ಚರಿಗಾಗಿ ಈ ಕ್ರಮವಹಿಸಲಾಗಿದೆ ಎಂದು ತಿಳಿಸಿದರು.

ಪ್ಲಾಂಟ್‌ಗಾಗಿ ಮಡಿಕೇರಿ ಜಿಲ್ಲಾಸ್ಪತ್ರೆ ಆವರಣದಲ್ಲಿ ಜಾಗ ಗುರುತಿಸಲಾಗಿದೆ. ಈಗಾಗಲೇ 13,000 ಲೀಟರ್‌ ಸಾಮಾರ್ಥ್ಯದ ಆಕ್ಸಿಜನ್ ಟ್ಯಾಂಕ್ ಇದೆ. ಆದರೆ, ಬಳ್ಳಾರಿಯಿಂದ ತಂದು ಆಕ್ಸಿಜನ್ ತುಂಬಲಾಗುತ್ತಿದೆ. ಆತಂಕದ ವಾತಾವರಣ ದೂರ ಮಾಡುವ ನಿಟ್ಟಿನಲ್ಲಿ ಪ್ಲಾಂಟ್ ನಿರ್ಮಿಸಲು ಯೋಜಿಸಲಾಗಿದೆ ಎಂದರು.

ಶಾಸಕರಾದ ಬೋಪಯ್ಯ, ಅಪ್ಪಚ್ಚುರಂಜನ್, ಸುನಿಲ್ ಸುಬ್ರಮಣಿ ಪ್ರಯತ್ನದಿಂದ ಪ್ಲಾಂಟ್‌ ಮಂಜೂರಾಗಿದೆ. ಬೆಡ್ ಸಾಮಾರ್ಥ್ಯ ಹೆಚ್ಚಿಸಲೂ ಅಗತ್ಯ ಕ್ರಮ ಎಂದು ಮಾತನಾಡಿದರು.

× Chat with us