ಮೈಸೂರು| ಟ್ವಿಟರ್‌ನಲ್ಲಿ ಟ್ರೋಲ್‌ ಆದ ಗ್ರಾಪಂ ಕಾರ್ಯದರ್ಶಿ!

ಮೈಸೂರು: ʻಸ್ವಾಮಿ ತ್ವʼ ಯೋಜನೆಯಡಿ ಡ್ರೋನ್‌ ಸರ್ವೇ ವೇಳೆ ಗ್ರಾಮ ಪಂಚಾಯಿತಿ ಕಾರ್ಯದರ್ಶಿಯೊಬ್ಬರು ತಮ್ಮ ಅತಿಮಾನುಷ ನಡೆಯ ಫೋಟೊವೊಂದು ಟ್ವಿಟರ್‌ನಲ್ಲಿ ಟ್ರೋಲ್‌ ಆಗಿದ್ದಾರೆ.

ಹೌದು! ಮೈಸೂರಿನ ಗುಂಗ್ರಲ್‌ ಛತ್ರದ ಗ್ರಾಪಂ ಕಾರ್ಯದರ್ಶಿಯೊಬ್ಬರು (ಮಹಿಳೆ) ಡ್ರೋನ್‌ ಸರ್ವೇಯಲ್ಲಿ ಪಾಲ್ಗೊಂಡಿದ್ದರು. ಈ ವೇಳೆ ಅವರಿಗೆ ನೌಕರ ಕೊಡೆ ಹಿಡಿದಿದ್ದ. ಈ ಮಹಿಳೆ ಮಾಸ್ಕ್‌ ಕೂಡ ಧರಿಸಿಲ್ಲ. ಈ ಚಿತ್ರ ಟ್ವಿಟರ್‌ನಲ್ಲಿ ವೈರಲ್‌ ಆಗಿದೆ. ಕೋವಿಡ್‌ ಸಂದರ್ಭದಲ್ಲಿ ಮಾಸ್ಕ್‌ ಧರಿಸದಿರುವ ಬಗ್ಗೆಯೂ ಟೀಕೆಗಳು ವ್ಯಕ್ತವಾಗಿವೆ.

ಈ ಚಿತ್ರಕ್ಕೆ ಪ್ರತಿಕ್ರಿಯಿಸಿರುವ ಜ್ಯೋತಿ ಆತ್ಮ ಅವರು, ʻತಮ್ಮ್ ಕೆಳ ಮಟ್ಟದ ವ್ಯಕ್ತಿಗಳನ್ನು ಈ ಅಧಿಕಾರಿಗಳು ನೋಡೋ ರೀತಿ. ಕಾರ್ಯದರ್ಶಿ ಬದಲು ಫಿಲ್ಮ್ ಆಕ್ಟರ್ ಆಗಬೇಕಿತ್ತು. ಒಬ್ಬ ಪಿಡಿಒ ನೋಡ್ರಪ್ಪ ಅವರ ಶೋಕಿನ ಮಾಸ್ಕ್ ಇಲ್ಲ ಅವರ ಕೈಲಿ ಛತ್ರಿ ಇಡಿಯೊಕು ಶಕ್ತಿ ಇಲ್ಲ ಪಾಪ, ಇವರು ಬ್ರಿಟಿಷ್ ಆಡಳಿತಾಧಿಕಾರಿ ಇಂಥವರನ್ನು ಹೇಳೋರು ಇಲ್ಲ ಕೇಳೋರು ಇಲ್ಲ. ತನ್ನ ತಾನು ರಕ್ಷಣೆ ಮಾಡಿಕೊಳ್ಳೋಕೆ ಛತ್ರಿ ಇಡ್ಕೊಳೋಕ್ಕೆ ಅಗದಿರೋರು ಇನ್ನು ಪೆನ್ ಇಡ್ಕೊಂಡು ಗ್ರಾಮ್ ಪಂಚಾಯತಿ ಉದ್ದಾರ ಮಾಡ್ತಾರೆ ಇದೆ ನಮ್ಮ ವ್ಯವಸ್ಥೆʼ ಎಂದು ಟೀಕಿಸಿದ್ದಾರೆ.

ʻಇಂತವರು ಎಷ್ಟೇ ವಿದ್ಯಾವಂತರು ಆದರೂ ವ್ಯಕ್ತಿತ್ವದ ಅವಿದ್ಯಾವಂತರು…ನಾಗರೀಕ ಸಮಾಜದ ಅನಾಗರಿಕರು..ʼ ಎಂದು ಮತ್ತೊಬ್ಬರು ತರಾಟೆಗೆ ತೆಗೆದುಕೊಂಡಿದ್ದಾರೆ.

ʻಕೆಲ ಸಂದರ್ಭದಲ್ಲಿ ಕೆಲವು ಚಿತ್ರಗಳು ನಮ್ಮನ್ನು ದಾರಿತಪ್ಪಿಸುತ್ತಿವೆ… ವಾಸ್ತವವಾಗಿ ನಾವು ಗ್ರಾಮೀಣ ಪ್ರದೇಶದಲ್ಲಿ ಸ್ವಾಮಿ ತ್ವ ಕಾರ್ಡ್‌ ನೀಡುವ ಡ್ರೋನ್ ಏರಿಯಲ್ ಸಮೀಕ್ಷೆಯನ್ನು ಮಾಡುತ್ತಿದ್ದೇವೆ… ಈ ಡ್ರೋನ್‌ಗಳನ್ನು ನೆರಳಿನಲ್ಲಿ ಯಾವಾಗಲೂ ಬಳಸಬೇಕಾಗುತ್ತದೆ. ಆ ಕಾರಣದಿಂದಾಗಿ ಛತ್ರಿಗಳನ್ನು ಬಳಸಲಾಗಿದೆ. ಈ ಹಿನ್ನೆಲೆಯಲ್ಲಿ ಚಿತ್ರವೇ ಸ್ಪಷ್ಟನೆ ನೀಡಲಿದೆʼ ಎಂದು ಕೃಷ್ಣಕುಮಾರ್‌ ಸಿ.ಆರ್.‌ ಸ್ಪಷ್ಟಪಡಿಸಿದ್ದಾರೆ‌.

ʻಮಾನ್ಯ ಕೆ.ಎಸ್.ಈಶ್ವರಪ್ಪನವರಿಗೆ ಟ್ಯಾಗ್ ಮಾಡಿ ಮೇಡಮ್ ಹೈಟೆಕ್ ಪಿಡಿಓನ ಅವರೂ ಸ್ವಲ್ಪ ನೋಡಲಿ ಗ್ರಾಮ ಪಂಚಾಯತಿಗಳನ್ನು ಹೈಟೆಕ್ ಮಾಡಬೇಕಿದೆ ಅಧಿಕಾರಿಗಳನಲ್ಲʼ ಎಂದು ಮತ್ತೊಬ್ಬರು ಟ್ವಿಟಿಗರು ಕುಟುಕಿದ್ದಾರೆ.

ಚಿತ್ರದಲ್ಲಿರುವವರು ಗ್ರಾಪಂ ಕಾರ್ಯದರ್ಶಿಯಾಗಿದ್ದು, ಟ್ವಿಟರ್‌ನಲ್ಲಿ ಕೆಲವರು ಪಿಡಿಒ ಎಂದು ಭಾವಿಸಿ ಟ್ವೀಟ್‌ ಮಾಡಿದ್ದಾರೆ.

× Chat with us