ಇನ್ಮುಂದೆ ಗ್ರಾಪಂ ಅಧ್ಯಕ್ಷ, ಉಪಾಧ್ಯಕ್ಷರ ಅವಧಿ ಎರಡೂವರೆ ವರ್ಷ!

ಬೆಂಗಳೂರು: ಇನ್ಮುಂದೆ ಗ್ರಾಮ ಪಂಚಾಯಿತಿ ಅಧ್ಯಕ್ಷರು, ಉಪಾಧ್ಯಕ್ಷರ ಅವಧಿ 5 ವರ್ಷ ಅಲ್ಲ. ಗ್ರಾಪಂ ಅಧ್ಯಕ್ಷರು, ಉಪಾಧ್ಯಕ್ಷರ ಅಧಿಕಾರವಧಿಯನ್ನು 30 ತಿಂಗಳಿಗೆ ಮೊಟಕುಗೊಳಿಸಿದ್ದು, ಈ ಸಂಬಂಧ ರಾಜ್ಯ ಪತ್ರ ಹೊರಡಿಸಲಾಗಿದೆ.
2015ರಲ್ಲಿ ಗ್ರಾಪಂ‌ ಅಧ್ಯಕ್ಷ, ಉಪಾಧ್ಯಕ್ಷರ ಅವಧಿಯನ್ನು 5 ವರ್ಷಗಳಿಗೆ ನಿಗದಿಪಡಿಸಲಾಗಿತ್ತು. ಈಗ ಅಧಿಕಾರವಧಿಯನ್ನು ಎರಡೂವರೆ ವರ್ಷಕ್ಕೆ ನಿಗದಿಪಡಿಸಲಾಗಿದೆ. ಇದರಿಂದ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಕಣ್ಣಿಟ್ಟಿದ್ದವರಿಗೆ ನಿರಾಸೆಯಾಗಿದೆ.
ಅಧ್ಯಕ್ಷ, ಉಪಾಧ್ಯಕ್ಷ ಹುದ್ದೆಗಳ ಸಂಖ್ಯೆಯ ಸರಿ ಸುಮಾರು‌ 1/3ರ ಹುದ್ದೆಗಳನ್ನು ಹಿಂದುಳಿದ ವರ್ಗದವರಿಗೆ ಮೀಸಲಿಡತಕ್ಕದ್ದು ಎಂದು ಕೂಡ ರಾಜ್ಯ ಪತ್ರದಲ್ಲಿ ಉಲ್ಲೇಖಿಸಲಾಗಿದೆ.
× Chat with us