ಕನಿಷ್ಠ ಬೆಂಬಲ ಬೆಲೆ ಇಳಿಸಲ್ಲ ಅಂತ ಬರೆದುಕೊಡ್ತೀವಿ: ಕೇಂದ್ರದ ಹೊಸ ಪ್ರಸ್ತಾವನೆ

ಸೋಣಿಪತ್​: ದೇಶಾದ್ಯಂತ ರೈತರ ಹೋರಾಟದ ಕೂಗು ಜೋರಾಗುತ್ತಿದ್ದಂತೆಯೇ ಇತ್ತ ಅಮಿತ್​ ಶಾ ಅವರು ರೈತರ ಜೊತೆ ಸಭೆ ಕೈಗೊಂಡರು. ಆದರೂ ಅದು ವಿಫಲವಾಯಿತು.

ಇದಾದ ಬೆನ್ನಿಗೇ ರೈತರ ಕೂಗಿಗೆ ಸ್ಪಂದಿಸಿರುವ ಸರ್ಕಾರವು ಕನಿಷ್ಠ ಬೆಂಬಲ ಬೆಲೆ ಇಳಿಕೆ ಮಾಡುವುದಿಲ್ಲ ಎಂದು ನಾವು ಲಿಖಿತವಾಗಿ ಬರೆದುಕೊಡುತ್ತೇವೆ ಕೃಷಿ ಕಾಯ್ದೆಯಲ್ಲಿ ತಿದ್ದುಪಡಿ ಮಾಡುತ್ತೇವೆ ಎಂದು ಹೊಸ ಪ್ರಸ್ತಾವನೆ ಸಲ್ಲಿಸಿದೆ.

ಕೇಂದ್ರ ಸಲ್ಲಿಸಿರುವ ಹೊಸ ಪ್ರಸ್ತಾವನೆಯನ್ನು ರೈತ ಮುಖಂಡರು ಪರಿಶೀಲನೆ ನಡೆಸುತ್ತಿದ್ದಾರೆ.

ಕನಿಷ್ಠ ಬೆಂಬಲ ಬೆಲೆ ಸೇರಿದಂತೆ ತಿದ್ದುಪಡಿ ಕಾಯ್ದೆಯಲ್ಲಿ ಇನ್ನಷ್ಟು ಬದಲಾವಣೆ ಮಾಡಲಾಗಿದೆ ಎಂದು ಮೂಲಗಳು ಹೇಳಿವೆ.

× Chat with us