ಮೀಸಲಾತಿ ಸಮುದಾಯಗಳ ಒತ್ತಾಯ ಬೆನ್ನಲೇ ತ್ರಿಸದಸ್ಯ ಸಮಿತಿ ರಚಿಸಿದ ಸರ್ಕಾರ! 

ಮೈಸೂರು: ಪಂಚಮಸಾಲಿ, ವೀರಶೈವ, ಒಕ್ಕಲಿಗ, ಕುರುಬ, ವಾಲ್ಮೀಕಿ ಸೇರಿ ನಾನಾ ಸಮುದಾಯಗಳು ಮೀಸಲಾತಿಗೆ ಆಗ್ರಹಿಸುತ್ತಿರುವ ಹೊತ್ತಿನಲ್ಲಿ ರಾಜ್ಯ ಸರ್ಕಾರ ಮೀಸಲಾತಿ ಕುರಿತಂತೆ ನಿವೃತ್ತ ನ್ಯಾಯಾಧೀಶರ ಅಧ್ಯಕ್ಷತೆಯಲ್ಲಿ ತ್ರಿಸದಸ್ಯರನ್ನೊಳಗೊಂಡ ಒಂದು ಉನ್ನತ ಸಮಿತಿ ರಚಿಸಿದೆ.
ಪಂಚಮಸಾಲಿ ಸಮುದಾಯದ ೨ಎ ಪ್ರವಗದಲ್ಲಿ ಮೀಸಲಾತಿ ಮನವಿಗೆ ಬಗ್ಗೆ ಈಗಾಗಲೇ ಹಿಂದುಳಿದ ಆಯೋಗಕ್ಕೆ ಪರಿಶೀಲಿಸಲು ಸರ್ಕಾರ ಕೋರಿದೆ. ಈ ನಡುವೆ ವಾಲ್ಮೀಕಿ ಸಮುದಾಯ ಎಸ್‌ಟಿ ಮೀಸಲಾತಿ ಹೆಚ್ಚಳಕ್ಕೆ ಕೋರಿರುವ ಕುರಿತು ನ್ಯಾ.ನಾಗಮೋಹನ್‌ದಾಸ್‌ ಅವರು ವರದಿ ನೀಡಿದ್ದಾರೆ. ಕುರುಬ ಸಮುದಾಯವೂ ಸಹ ಎಸ್‌ಟಿ ಸೇರಿಸುವಂತೆ ಕೋರಿದ್ದು, ವೀರಶೈವ ಲಿಂಗಾಯತ ಮತ್ತು ಒಕ್ಕಲಿಗ ಸಮುದಾಯದವರು ಕೇಂದ್ರ ಸರ್ಕಾರದ ಒಬಿಸಿ ಪಟ್ಟಿಯಲ್ಲಿ ಸೇರಿಸಲು ಕೋರಿದ್ದಾರೆ. ಅಂತೆಯೇ ಹಲವು ಸಮುದಾಯದವರೂ ಸಹ ಮೀಸಲಾತಿಗೆ ಒತ್ತಾಯಿಸಿದ್ದಾರೆ.
ಇದೆಲ್ಲವನ್ನೂ ಗಮನಿಸಿರುವ ರಾಜ್ಯ ಸರ್ಕಾರ ಹೈ ಕೋರ್ಟ್‌ ನಿವೃತ್ತ ನ್ಯಾಯಾಧೀಶ ಸುಭಾಷ್‌ ಅಡಿ ಅಧ್ಯಕ್ಷತೆಯಲ್ಲಿ ತ್ರಿಸದಸ್ರನ್ನೊಳಗೊಂಡ ಒಂದು ಉನ್ನತ ಮಟ್ಟದ ಸಮಿಯನ್ನು ರಚನೆಗೆ ಸಂಪುಟ ಸಭೆಯಲ್ಲಿ ಅನುಮೋದನೆ ಸಹ ದೊರೆತಿದೆ.  ಅದರಂತೆ ರಾಜ್ಯ ಸರ್ಕಾರದ ಮಾಜಿ ಮುಖ್ಯ ಕಾರ್ಯದರ್ಶಿ ಕೆ.ರತ್ನಪ್ರಭ, ಮಹಾರಾಣಿ ಕಲಾ ಕಾಲೇಜು ಸಹ ಪ್ರಾಧ್ಯಾಪಕ ಡಾ.ಬಿ.ವಿ.ವಸಂತಕುಮಾರ್‌ ಅವರನ್ನು ಸದಸ್ಯರನ್ನಾಗಿ ನೇಮಿಸಿ ಸಮಾಜ ಕಲ್ಯಾಣ ಇಲಾಖೆ ಉಪ ಕಾರ್ಯದರ್ಶಿ ಆದೇಶ ಹೊರಡಿಸಿದ್ದಾರೆ.
× Chat with us