BREAKING NEWS

ಕಳೆದುಹೋದ ಮೊಬೈಲ್‌ ಪತ್ತೆಗಾಗಿ ಕರ್ನಾಟಕ ಸರ್ಕಾರದಿಂದ ಹೊಸ ಆ್ಯಪ್ ಬಿಡುಗಡೆ

ಬೆಂಗಳೂರು : ನಮ್ಮ ಜೊತೆ ದಿನದ 24 ಗಂಟೆಗಳ ಕಾಲ ಇರುವ ಸ್ಮಾರ್ಟ್​ಫೋನ್ ದಿಢೀರ್ ಕಳೆದು ಹೋದರೆ ಆಗ ಆಗುವ ಟೆನ್ಶನ್ ಅಷ್ಟಿಟ್ಟಲ್ಲ. ಕೇವಲ ದುಬಾರಿ ಬೆಲೆ ವಸ್ತು ಎನ್ನುವುದಕ್ಕಿಂತಲೂ ಅದರಲ್ಲಿರುವ ಸಂಪರ್ಕ ಸಂಖ್ಯೆಗಳು, ಒಡನಾಡಿಗಳ ಜೊತೆಗಿರುವ ಫೋಟೋಗಳು ಮತ್ತು ಖಾಸಗಿ ಮಾಹಿತಿಗಳು ಸೋರಿಕೆಯಾಗುವ ಭಯ ಸಾಕಷ್ಟು ಕಾಡುತ್ತಿರುತ್ತದೆ. ಮೊಬೈಲ್ ಕಳವಾದಾಗ ಅತ್ಯಂತ ಮುಖ್ಯ ಮಾಹಿತಿಗಳು (ಡೇಟಾ) ಸೋರಿಕೆಯಾಗುವ ಸಂಭವ ಹೆಚ್ಚಾಗಿರುತ್ತದೆ.

https://x.com/BlrCityPolice/status/1704733016915165414?s=20

ಆದರೆ, ಇನ್ಮುಂದೆ ನಿಮ್ಮ ಸ್ಮಾರ್ಟ್​ಫೋನ್ ಕಳೆದುಹೋದರೆ ಅಥವಾ ಕಳ್ಳತನವಾದರೆ ಮೊಬೈಲ್‌ ಅನ್ನು ಬ್ಲಾಕ್‌ ಮಾಡಲು ಕರ್ನಾಟಕ ಪೊಲೀಸ್‌ ಇಲಾಖೆ ಆರಂಭಿಸಿರುವ ಕರ್ನಾಟಕ ರಾಜ್ಯ ಪೊಲೀಸ್‌ ಆ್ಯಪ್ ಸಹಾಯ ಮಾಡಲಿದೆ. ನಿಮ್ಮ ಬಳಿ ಇನ್ನೊಂದು ಮೊಬೈಲ್‌ ಇದ್ದರೆ ಅಥವಾ ಮನೆಯವರದ್ದು, ಸ್ನೇಹಿತರ ಮೊಬೈಲ್‌ನಲ್ಲಿ ಈ ಆ್ಯಪ್ ಅನ್ನು ಇನ್​ಸ್ಟಾಲ್ ಮಾಡಿ ಬ್ಲಾಕ್‌ ಮಾಡಿ ದೂರು ದಾಖಲಿಸಬಹುದು.

ಈ ಬಗ್ಗೆ ಬೆಂಗಳೂರು ನಗರ ಪೊಲೀಸರು ತಮ್ಮ ಎಕ್ಸ್ (ಟ್ವಿಟ್ಟರ್) ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ಜೊತೆಗೆ ಯಾವರೀತಿ ನೋಂದಣಿ ಮಾಡಬೇಕು ಎಂಬ ಬಗ್ಗೆ ವಿವರವಾಗಿ ತಿಳಿಸಿದ್ದಾರೆ.

ಬೆಂಗಳೂರು ನಗರ ಪೊಲೀಸರು ಹಂಚಿಕೊಂಡಿರುವ ಟ್ವೀಟ್ ಇಲ್ಲಿದೆ:

  • ಮೊದಲಿಗೆ ನಿಮ್ಮ ಸ್ಮಾರ್ಟ್​ಫೋನ್​ನಲ್ಲಿರುವ ಗೂಗಲ್‌ ಪ್ಲೇ ಸ್ಟೋರ್‌ನಿಂದ KSP Application ಡೌನ್​ಲೋಡ್ ಮಾಡಿಕೊಂಡು ನಿಮ್ಮ ಹೆಸರನ್ನು ರಿಜಿಸ್ಟರ್‌ ಮಾಡಿಕೊಳ್ಳಬೇಕು.
  • ಮೊಬೈಲ್‌ ದೂರನ್ನು E-Lost ನಲ್ಲಿ ವರದಿ ಮಾಡಲು KSP Application ಅನ್ನು ಓಪನ್‌ ಮಾಡಿಕೊಳ್ಳಿ. ಅಲ್ಲಿಂದ E-Lost ಆಯ್ಕೆಯನ್ನು ಸೆಲೆಕ್ಟ್ ಮಾಡಿಕೊಳ್ಳಿ.
  • ಈಗ E-Lost ವರದಿಯನ್ನು ನೊಂದಾಯಿಸಿಕೊಂಡು ಈ ಆಪ್ಶನ್‌ ಅನ್ನು ಆಯ್ಕೆ ಮಾಡಿರಿ.
  • ಬಳಿಕ ನಿಮ್ಮ ಹೆಸರು, ವಿಳಾಸ, ಜಿಲ್ಲೆ, ಮೊಬೈಲ್‌ ನಂಬರ್‌ ಹಾಗೂ ಇ-ಮೇಲ್‌ ಐಡಿ ನೊಂದಾಯಿಸಿರಿ. ನಂತರ ಮುಂದಿನ ಆಪ್ಶನ್‌ ಆಯ್ಕೆ ಮಾಡಿಕೊಳ್ಳಿ.
  • ನಿಮ್ಮ ಮೊಬೈಲ್‌ನ ಬಿಲ್‌ ಇದ್ದರೆ ಅದನ್ನು ಅಪ್‌ಲೋಡ್‌ ಮಾಡಿ ನಂತರ ನೆಕ್ಸ್ಟ್ ಒತ್ತಿರಿ
  • ಇದಾದ ಬಳಿಕ ಮೊಬೈಲ್‌ ಆಪ್ಶನ್‌ ಆಯ್ಕೆ ಮಾಡಿಕೊಳ್ಳಿ
  • ಮೊಬೈಲ್‌ ಮಾಹಿತಿಯನ್ನು ನೋಂದಾಯಿಸಿ. ಬಳಿಕ ಆಡ್‌ ಆಪ್ಶನ್‌ ಅನ್ನು ಆಯ್ಕೆ ಮಾಡಿಕೊಳ್ಳಿರಿ
  • ಕೊನೆಯಲ್ಲಿ ಮೊಬೈಲ್‌ ಕಳೆದು ಹೋದ ದಿನಾಂಕ, ಸಮಯ, ಸ್ಥಳದ ಮಾಹಿತಿಯನ್ನು ನೀಡಿ ಸಬ್ಮಿಟ್‌ ಆಪ್ಶನ್‌ ಆಯ್ಕೆ ಮಾಡಿಕೊಳ್ಳಿ. ನಿಮಗೆ ಅದರಲ್ಲಿಯೇ ರಶೀದಿಯೂ ಸಿಗಲಿದೆ. ಅದನ್ನು ಡೌನ್‌ ಲೋನ್‌ ಮಾಡಿ ಇಟ್ಟುಕೊಳ್ಳಿರಿ.

ಸಂಚಾರ್ ಸಾಥಿ ಪೋರ್ಟಲ್

ಕಳೆದ ವರ್ಷಗಳಿಂದ ಮೊಬೈಲ್ ಕಳ್ಳತನ ದೇಶದಲ್ಲಿ ಗಣನೀಯವಾಗಿ ಏರಿಕೆ ಆಗುತ್ತಿದೆ. ಇದನ್ನು ಮನಗಂಡು ಕೇಂದ್ರ ಸರ್ಕಾರ ಕೂಡ ಜನರ ಫೋನ್ ಮತ್ತು ಡೇಟಾ ಕಳ್ಳತನಕ್ಕೆ ಪರಿಹಾರ ಕಂಡುಹಿಡಿದಿದೆ. ಕೇಂದ್ರ ಸರ್ಕಾರ ಇತ್ತೀಚೆಗಷ್ಟೆ ”ಸಂಚಾರ್ ಸಾಥಿ ಪೋರ್ಟಲ್” ಅನ್ನು ಪ್ರಾರಂಭಿಸಸಿದದೆ. ಸಂಚಾರ್ ಸಾಥಿ ಪೋರ್ಟಲ್ ಅಡಿಯಲ್ಲಿ, ಬಳಕೆದಾರರು ತಮ್ಮ ಫೋನ್ ಅನ್ನು ಎಲ್ಲಿದೆ ಎಂದು ಹುಡುಕಬಹುದು ಅಥವಾ ಸ್ವಿಚ್ ಆಫ್ ಮಾಡಬಹುದು. ಆ್ಯಪಲ್‌ ಐಫೋನ್​ನಲ್ಲಿರುವ ಫೈಂಡ್ ಮೈ ಫೋನ್ ವೈಶಿಷ್ಟ್ಯದಂತೆ ಇದು ಆಂಡ್ರಾಯ್ಡ್ ಫೋನ್​ನಲ್ಲಿ ಕಾರ್ಯನಿರ್ವಹಿಸಲಿದೆ.

andolanait

Recent Posts

ಅರಮನೆ ಮುಂಭಾಗ ಹೀಲಿಯಂ ಸಿಲಿಂಡರ್ ಸ್ಪೋಟ : ಓರ್ವ ಸಾವು, ನಾಲ್ವರು ಗಂಭೀರ

ಮೈಸೂರು : ಪ್ರವಾಸಿಗರ ದಂಡೇ ನೆರೆಯುತ್ತಿದ್ದ ಸ್ಥಳದಲ್ಲೇ ಹೀಲಿಯಂ ಬಲೂನ್‌ಗಾಗಿ ಬಳಸುತ್ತಿದ್ದ ಗ್ಯಾಸ್‌ ಸಿಲಿಂಡರ್‌ ಸ್ಫೋಟಗೊಂಡು ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿ,…

4 hours ago

ರಸ್ತೆಯಲ್ಲಿ ರಾಗಿ ಒಕ್ಕಣೆ | ಮುಗುಚಿ ಬಿದ್ದ ಕಾರು ; ಓರ್ವ ಸಾವು

ಕೆ.ಆರ್.ಪೇಟೆ : ರಸ್ತೆಯಲ್ಲಿ ರಾಗಿ ಒಕ್ಕಣೆ ಮಾಡುತ್ತಿದ್ದ ಸಂದರ್ಭದಲ್ಲಿ ರಾಗಿಯ ಮೇಲೆ ಕಾರು ಚಲಿಸಿದಾಗ ಕಾರು ಮಗುಚಿ ಬಿದ್ದ ಪರಿಣಾಮ…

6 hours ago

ಕಾರು ಮುಖಾಮುಖಿ ಡಿಕ್ಕಿ : ಮೂವರಿಗೆ ಗಾಯ

ಮೈಸೂರು : ಎರಡು ಕಾರುಗಳ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದ್ದು, ಅದೃಷ್ಟವಶಾತ್ ಯಾವುದೇ ಹೆಚ್ಚಿನ ಅನಾಹುತ ಸಂಭವಿಸಿಲ್ಲ. ವಿಜಯನಗರದ ಕೊಡವ…

7 hours ago

ಮೈಸೂರು | ಜಿಲ್ಲೆಯಾದ್ಯಂತ ಕ್ರಿಸ್‌ಮಸ್‌ ಸಂಭ್ರಮಾಚರಣೆ

ಮೈಸೂರು : ಮೈಸೂರು ಜಿಲ್ಲೆಯಾದ್ಯಂತ ಕ್ರೈಸ್ತ ಭಾಂದವರು ಕ್ರಿಸ್‌ಮಸ್‌ ಹಬ್ಬವನ್ನು ಸಡಗರ, ಸಂಭ್ರಮದಿಂದ ಆಚರಿಸಿದರು. ಕ್ರಿಸ್‌ಮಸ್ ಹಿನ್ನೆಲೆಯಲ್ಲಿ ನಗರದ ಐತಿಹಾಸಿಕ…

7 hours ago

ಕೆ.ಆರ್.ಪೇಟೆ | ವೇತನದಲ್ಲಿ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಪ್ರವಾಸ ಕಲ್ಪಿಸಿದ ಶಿಕ್ಷಕ

ಕೆ.ಆರ್.ಪೇಟೆ : ತಾಲ್ಲೂಕಿನ ತೆಂಡೇಕೆರೆ ಸರ್ಕಾರಿ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ಬಿ.ಎಸ್.ರಾಜು ಅವರು ತಮ್ಮ ಒಂದು ತಿಂಗಳ ವೇತನದಲ್ಲಿ…

7 hours ago

ತುರ್ತು ನಿರ್ಗಮನದ ಬಾಗಿಲು ಇಲ್ಲದಿದ್ದರೆ ಎಫ್‌ಸಿ ಇಲ್ಲ ; ಸಚಿವ ರಾಮಲಿಂಗಾ ರೆಡ್ಡಿ ಖಡಕ್ ಸೂಚನೆ

ಬೆಂಗಳೂರು : ಸಾರ್ವಜನಿಕ ಸಾರಿಗೆಗಾಗಿ ಬಳಸುವ ವಾಹನಗಳಿಗೆ ತುರ್ತು ನಿರ್ಗಮನದ ಬಾಗಿಲುಗಳು ಇಲ್ಲದೆ ಇದ್ದರೆ ಭೌತಿಕ ಕ್ಷಮತೆಯ ದೃಢೀಕರಣ ಪತ್ರ…

7 hours ago