ನ್ಯೂ ಇಯರ್‌, ಕ್ರಿಸ್ಮಸ್‌ ಪಾರ್ಟಿ ಪ್ಲಾನ್‌ ಮಾಡಿದ್ದೀರಾ… ನಿಮಗೊಂದು ಶಾಕಿಂಗ್‌ ನ್ಯೂಸ್‌

ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಸೋಂಕು ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ, ಈ ಬಾರಿಯ ಕ್ರಿಸ್ಮಸ್ ಮತ್ತು ಹೊಸ ವರ್ಷದ ಸಾರ್ವಜನಿಕ ಆಚರಣೆಗೆ ಬ್ರೇಕ್ ಹಾಕಿದ್ದು, ಸರಳ ಮತ್ತು ಭಕ್ತಿಪೂರ್ವಕವಾಗಿ ಆಚರಿಸುವಂತೆ ತಿಳಿಸಿದೆ.

ಈ ಕುರಿತು ಸುತ್ತೋಲೆಯನ್ನ ಹೊರಡಿಸಿರುವ ರಾಜ್ಯ ಸರ್ಕಾರ, ಆಚರಣೆ ಸಂದರ್ಭದಲ್ಲಿ ಸಾಮಾಜಿಕ ಅಂತರವಿಲ್ಲದೇ ಹೆಚ್ಚಿನ ಜನರು ಸೇರುವ ಪಾರ್ಟಿಗಳನ್ನು ನಿಷೇಧಿಸಿದೆ. ಸಾರ್ವಜನಿಕ ಸ್ಥಳಗಳಲ್ಲಿ ಹೆಚ್ಚು ಜನ ಸೇರುವಂತಿಲ್ಲ ಎಂದು ಕಟ್ಟುನಿಟ್ಟಾಗಿ ಆದೇಶ ನೀಡಿದೆ. ಇನ್ನು ದೀಪಾವಳಿಗೆ ಹಸಿರು ಪಟಾಕಿಗಳನ್ನ ಮಾತ್ರ ಹಚ್ಚಲು ಹೊರಡಿಲಾಗಿದ್ದ ಸರ್ಕಾರದ ಆದೇಶದ ಜೊತೆಗೆ ಮಾರ್ಗಸೂಚಿಗಳನ್ನ ಪಾಲಿಸಬೇಕು ಎಂದಿದೆ.

ಚರ್ಚ್ ಗಳಲ್ಲಿ ಒಮ್ಮೆಗೆ 10 ಕ್ಕಿಂತ ಹೆಚ್ಚು ಜನ ಸೇರುವಂತಿಲ್ಲ. ಆಯೋಜಕರು ಮುಂಜಾಗ್ರತೆ ಕ್ರಮ ಕೈಗೊಳ್ಳಬೇಕು ಎಂದು ಹೇಳಲಾಗಿದೆ.
ಹಬ್ಬ ಆಚರಣೆ ವೇಳೆಯಲ್ಲಿ ಹಸ್ತಲಾಘವ, ಆಲಿಂಗನ ಮಾಡುವಂತಿಲ್ಲ. ಡಿಸೆಂಬರ್ 30 ರಿಂದ ಜನವರಿ 2 ರವರೆಗೆ ಹೆಚ್ಚು ಜನ ಸೇರುವಂತಿಲ್ಲ. ರೆಸ್ಟೋರೆಂಟ್, ಪಬ್ ಮತ್ತು ಕ್ಲಬ್ ಗಳಲ್ಲಿ ಹೆಚ್ಚು ಜನ ಸೇರಬಾರದು. ವಿಶೇಷ ಯೋಜಿತ ಒಟ್ಟುಗೂಡುವಿಕೆಗೆ ಅವಕಾಶ ಇರುವುದಿಲ್ಲ. ವಿಶೇಷವಾದ ಡಿಜೆ, ಡ್ಯಾನ್ಸ್ ಮತ್ತು ಪಾರ್ಟಿಗಳನ್ನು ನಡೆಸುವಂತಿಲ್ಲ. ಪಬ್, ರೆಸ್ಟೋರೆಂಟ್ ತೆರೆಯಲು ನಿರ್ಬಂಧವಿಲ್ಲ ಎನ್ನಲಾಗಿದೆ.

ಯಾವುದೇ ಪಾರ್ಟಿ ಆಯೋಜನೆ ಮಾಡುವಂತಿಲ್ಲ. ಸಾರ್ವಜನಿಕವಾಗಿ ಸೆಲೆಬ್ರೇಷನ್ ಗೆ ಬ್ರೇಕ್ ಹಾಕಲಾಗಿದೆ. ೬೫ ವರ್ಷ ಮೇಲ್ಪಟ್ಟ ಹಿರಿಯರು ಮತ್ತು 10 ವರ್ಷದೊಳಗಿನ ಮಕ್ಕಳು ಮನೆಯಲ್ಲಿ ಇರಬೇಕು ಎನ್ನಲಾಗಿದೆ.

× Chat with us