ಓದುವಂತೆ ಬಲವಂತ ಮಾಡಿದ ಅಪ್ಪ ಅಮ್ಮ, ಕ್ರಿಮಿನಾಶಕ ಸೇವಿಸಿ ವಿದ್ಯಾರ್ಥಿನಿ ಆತ್ಮಹತ್ಯೆ

ಕೊಳ್ಳೇಗಾಲ: ಕ್ರಿಮಿನಾಶಕ ಸೇವಿಸಿ ಯುವತಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಾಲ್ಲೂಕಿನ ಮೇಗಲದೊಡ್ಡಿ ಗ್ರಾಮದಲ್ಲಿ ಜರುಗಿದೆ.

ಮೇಗಲದೊಡ್ಡಿ ಗ್ರಾಮದ ಲೂರ್ಧ ಸ್ವಾಮಿ ಎಂಬುವವಳ ಮಗಳು ದಿವ್ಯಾ ಮೃತ ಯುವತಿ.

ಈಕೆ ಕಳೆದ ವರ್ಷ ಲಾಕ್‌ಡೌನ್‌ ಇದ್ದರಿಂದ ಕಾಲೇಜಿಗೆ ಹೋಗದೇ ಕೂಲಿ ಕೆಲಸ ಮಾಡಿಕೊಂಡಿದ್ದಳು. ಈ ವರ್ಷ ಕಾಲೇಜು ಆರಂಭವಾದ ಮೇಲೆ ಓದಲು ಹೋಗು ಎಂದು ಪೋಷಕರ ಬಲವಂತ ಮಾಡಿ ಕಾಲೇಜಿಗೆ ಕಳುಹಿಸಿದರು. ಆದರೆ ಇಂದು ಕಾಲೇಜಿಗೆ ಹೋಗಲು ಇಷ್ಟವಿಲ್ಲದೇ ಕ್ರಿಮಿನಾಶಕವನ್ನು ಸೇವಿಸಿದ್ದಾಳೆ.

ಈಕೆಯ ನರಳಾಟವನ್ನು ನೋಡಿದ ಪೋಷಕರು ತಕ್ಷಣ ಉಪವಿಭಾಗ ಸರ್ಕಾರಿ ಆಸ್ಪತ್ರೆಗೆ ಕರೆತರುವಾಗ ಮಾರ್ಗಮಧ್ಯೆ ಕೊನೆಯುಸಿರೆಳೆದಿದ್ದಾಳೆ.

ಈ ಸಂಬಂಧ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ‌ ದಾಖಲಾಗಿದೆ.

× Chat with us