ಜೂಜುಕೋರರ ಅಡ್ಡವಾಯ್ತು ಮಲೆ ಮಹದೇಶ್ವರ ಬೆಟ್ಟ

ಹನೂರು: ಜಿಲ್ಲೆಯ ಧಾರ್ಮಿಕ ಪ್ರಸಿದ್ಧ ಧಾರ್ಮಿಕ ಯಾತ್ರಸ್ಥಳವಾದ ಮಲೆ ಮಹದೇಶ್ವರ ಬೆಟ್ಟಕ್ಕೆ ಬರುವವರ ಸೋಗಿನಲ್ಲಿ ಇಸ್ಪೀಟ್ ಆಟವಾಡುವವರ ಸಂಖ್ಯೆ ಹೆಚ್ಚಾಗುತ್ತಿದ್ದು, ದಂಧೆಯನ್ನಾಗಿಸಿಕೊಂಡಿದ್ದಾರೆ. ಈ ಬಗ್ಗೆ ಸಾರ್ವಜನಿಕರಿಂದ ತೀವ್ರ ಆಕ್ಷೇಪ ವ್ಯಕ್ತವಾಗಿದೆ.

ಮಲೆ ಮಹದೇಶ್ವರ ಬೆಟ್ಟದ ಪ್ರಸಿದ್ಧ ಧಾರ್ಮಿಕ ಯಾತ್ರ ಸ್ಥಳವಾಳವಾಗಿದ್ದು, ಶ್ರದ್ಧಾಭಕ್ತಿಯ ಕೇಂದ್ರವಾಗಿದೆ. ಆಗಾಗಿ ಇಲ್ಲಿಗೆ ರಾಜ್ಯ ಹಾಗೂ ತಮಿಳುನಾಡಿನ ವಿವಿಧೆಡೆಯಿಂದ ಲಕ್ಷಾಂತರ ಜನರು ಆಗಮಿಸುತ್ತಾರೆ. ಆದರೆ ಇತ್ತೀಚಿನ ದಿನಗಳಲ್ಲಿ ಕೆಲವರು ಮ.ಬೆಟ್ಟದಲ್ಲಿನ ಕೆಲವು ಮನೆಗಳಲ್ಲಿ ಇಸ್ಪೀಟ್ ಆಟದಲ್ಲಿ ತೊಡಗುತ್ತಿದ್ದಾರೆ. ಇದಕ್ಕೆ ಮನೆಯವರು ಸಹ ಸಾಥ್ ನೀಡುತ್ತಿದ್ದಾರೆ. ಅಗಾಗಿ ಜೂಜಾಟ ಎಗ್ಗಿಲ್ಲದೇ ನಡೆಯುತ್ತಿದೆ. ಪರಿಣಾಮ ಶ್ರೀ ಕ್ಷೇತ್ರದ ಪಾವಿತ್ರ್ಯದ ದಕ್ಕೆಗೆ ಕಾರಣವಾಗಿದೆ ಎಂಬ ಗಂಭೀರ ಆರೋಪ ಸಾರ್ವಜನಿಕರಿಂದ ಕೇಳಿ ಬಂದಿದೆ.

ಇಸ್ಫೀಟ್ ಅಡ್ಡೆಯಾದ ಮಹದೇಶ್ವರ ಬೆಟ್ಟ; ಮ.ಬೆಟ್ಟವು ಧಾರ್ಮಿಕ ಕೇಂದ್ರವಾಗಿರುವುದರಿಂದ ಇಲ್ಲಿ ಇಸ್ಪೀಟ್‌ ಆಡಿದರೂ ಯಾರು ಕೇಳುವುದಿಲ್ಲ ಎಂಬುದನ್ನು ಅರಿತ ತಮಿಳುನಾಡು ಹಾಗೂ ಹನೂರು, ಕೊಳ್ಳೇಗಾಲ ಹಾಗೂ ಇನ್ನಿತರೆ ಈ ಭಾಗದ ಗ್ರಾಮಗಳಲ್ಲಿ ಕೆಲವು ಇಸ್ಪೀಟ್‌ ಚಾಯಾಳಿಗಳು ಮ.ಬೆಟ್ಟವನ್ನು ಇಸ್ಪೀಟ್ ಅಡಡೆಯನ್ನಾಗಿಸಿಕೊಂಡಿದ್ದಾರೆ. ಆಗಾಗಿ ಇತ್ತೀಚಿನ ದಿನಗಳಲ್ಲಿ ಜೂಜುಕೋರರು ಮ.ಬೆಟ್ಟಕ್ಕೆ ಆಗಮಿಸಿ ಮನೆಯಲ್ಲಿಯೇ ಇಸ್ಪೀಟ್ ಆಟದಲ್ಲಿ ತೊಡಗುತ್ತಿದ್ದು, ಇದಕ್ಕೆ ಮನೆಯವರು ಅವಕಾಶ ಮಾಡಿಕೊಟ್ಟು ಕಾನೂನು ಬಾಹಿರ ರೂಪದಲ್ಲಿ ಹಣ ಗಳಿಸುತ್ತಿರುವುದು ವಿಪರ್ಯಾಸವಾಗಿದೆ. ಆಗಾಗಿ ಮ.ಬೆಟ್ಟವು ಇಸ್ಪೀಟ್‌ ಅಡ್ಡೆಯ ತಾಣವಾಗುತ್ತಿದ್ದು, ಶ್ರೀ ಕ್ಷೇತ್ರದ ಪಾವಿತ್ರ್ಯತೆಗೆ ದಕ್ಕೆಯಾಗಲಿದೆ.

ಕಡಿವಾಣಕ್ಕೆ ಒತ್ತಾಯ: ಮ.ಬೆಟ್ಟದಲ್ಲಿ ಇತ್ತೀಚಗೆ ಅಕ್ರಮ ಮದ್ಯ ಮಾರಾಟ ಹೆಚ್ಚಾದ ಹಿನ್ನಲೆ ಅಬಕಾರಿ ಇಲಾಖೆಯ ಅಧಿಕಾರಿಗಳು ಹೆಚ್ಚಿನ ನಿಗಾ ವಹಿಸಿದ ಪರಿಣಾಮ ಇದೀಗ ಅಕ್ರಮ ಮದ್ರ ಮಾರಾಟ ಕೊಂಚ ತಗ್ಗಿದೆ. ಅದರೆ ಇದೀಗ ಜೂಜೂಕೋರರ ಹಾವಳಿ ಹೆಚ್ಚಾಗಿದೆ. ಇದರಿಂದ ಶ್ರೀ ಕ್ಚೇತ್ರದಲ್ಲಿ ಇಸ್ಪೀಟ್‌ ಆಟ ಎಗ್ಗಿಲ್ಲದೇ ನಡೆಯುತ್ತಿದೆ. ಆದರೆ ಈ ಬಗ್ಗೆ ಪೊಲೀಸರಿಗೆ ತಿಳಿದಿದ್ದರೂ ಯಾವುದೇ ಕ್ರಮವಹಿಸಿಲ್ಲ. ಪರಿಣಾಮ ಜೂಜುಕೋರರ ಸಂಖ್ಯೆ ಹೆಚ್ಚಾಗುತ್ತಿದೆ. ಇದರಿಂದ ಮುಂದಿನ ದಿನಗಳಲ್ಲಿ ಆಗಮಿಸುವ ಭಕ್ತರನ್ನು ಸಹ ಇಸ್ಪೀಟ್ ಆಟಕ್ಕೆ ಎಳೆಯುವ ಸಾಧ್ಯತೆ ಹೆಚ್ಚಾಗಿದ್ದು, ಶ್ರೀ ಕ್ಷೇತ್ರಕ್ಕೆ ಧಕ್ಕೆಯಾಗುವ ಸಾಧ್ಯತೆ ಇದೆ. ಆದ್ದರಿಂದ ಸಂಬಂಧಪಟ್ಟ ಅಧಿಕಾರಿಗಳು ಇತ್ತ ಗಮನಹರಿಸಿ ಜೂಜಿಗೆ ಕಡಿವಾಣ ಹಾಕುವಂತೆ ಸಾರ್ವಜನಿಕರಿಂದ ಒತ್ತಾಯ ಕೇಳಿ ಬಂದಿದೆ.

ʻಮಲೆ ಮಹದೇಶ್ವರ ಬೆಟ್ಟದಲ್ಲಿ ಕೆಲವರು ಇಸ್ಪೀಟ್‌ ಆಡುತ್ತಿರುವುದು ಗಮನಕ್ಕೆ ಬಂದಿದ್ದು, ಈ ಬಗ್ಗೆ ಅಗತ್ಯ ಕ್ರಮ ಕೊಳ್ಳಲಾಗಿದೆ. ಈ ಸಂಬಂಧ ಕೆಲವು ಕಡೆಗಳಲ್ಲಿ 2 ಬಾರಿ ದಾಳಿ ನಡೆಸಲಾಗಿದೆ. ಆದರೆ ಯಾವುದೇ ಪ್ರಕರಣ ಕಂಡು ಬಂದಿಲ್ಲ. ಈ ಬಗ್ಗೆ ತೀವ್ರ ನಿಗಾ ವಹಿಸಿದ್ದು, ಜೂಜು ಅಡ್ಡೆಯ ಕಡಿವಾಣಕ್ಕೆ ಅಗತ್ಯ ಕ್ರಮವಹಿಸಲಾಗಿದೆʼ.
-ರಮೇಶ್, ಇನ್‌ಸ್ಪೆಕ್ಟರ್, ಮ.ಬೆಟ್ಟ

× Chat with us