ಮೈಸೂರು: ಶೂಟೌಟ್‌ನಲ್ಲಿ ಸಾವಿಗೀಡಾದ ಯುವಕನ ಕುಟುಂಬಸ್ಥರಿಗೆ ಜಿಟಿಡಿ ನೆರವು

ಮೈಸೂರು: ನಗರದಲ್ಲಿ ಚಿನ್ನದಂಗಡಿಯಲ್ಲಿ ದರೋಡೆ ಮಾಡುವಾಗ ನಡೆದ ಶೂಟೌಟ್‌ಗೆ ಬಲಿಯಾದ ಯುವಕನ ಮನೆಗೆ ಶಾಸಕ ಜಿ.ಟಿ.ದೇವೇಗೌಡ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.

ಇದೇ ವೇಳೆ ಕುಟುಂಬದವರಿಗೆ 50,000 ರೂ. ಚೆಕ್‌ ಸಹಾಯಧನ ನೀಡಿದರು.

ಇದೇ ವೇಳೆ ಗೆಜ್ಜಗಳ್ಳಿ ಲೋಕೇಶ್‌, ಸಿಂದುವಳ್ಳಿ ಗ್ರಾಪಂ ಮಾಜಿ ಅಧ್ಯಕ್ಷ ಕೃಷ್ಣಯ್ಯ, ಅಧ್ಯಕ್ಷೆ ಮಹದೇವಮ್ಮ ಎಸ್‌.ರಂಗನಾಯಕ, ಸಿಂದುವಳ್ಳಿ ಗ್ರಾಪಂ ಮಾಜಿ ಸದಸ್ಯರು ಜೊತೆಯಲ್ಲಿದ್ದರು.

ಈಚೆಗೆ ವಿದ್ಯಾರಣ್ಯಪುರಂನ ಚಿನ್ನದಂಗಡಿಯಲ್ಲಿ ದರೋಡೆ ವೇಳೆ ನಡೆದ ಶೂಟೌಟ್‌ನಲ್ಲಿ ದಡದಹಳ್ಳಿ ನಿವಾಸಿ ಚಂದ್ರು ಸಾವಿಗೀಡಾಗಿದ್ದರು.

× Chat with us