ನಕಲಿ ಪಾಸ್‌ಪೋರ್ಟ್‌ಗಾಗಿ ಉಗ್ರರಿಂದ ಭಾರತೀಯ ವೀಸಾ ಬಳಕೆ ಆತಂಕ!

ಕಾಬೂಲ್: ಆಫ್ಘಾನಿಸ್ತಾನ ತಾಲಿಬಾನ್ ವಶವಾದ ನಂತರ ಭಾರತಕ್ಕೆ ಅತಂಕವಾಗುವಂಥ ಅನೇಕ ವಿದ್ಯಮಾನಗಳು ನಡೆಯುತ್ತಿವೆ. ಉಗ್ರರು ನಕಲಿ ಪಾಸ್‌ಪೋರ್ಟ್‌ಗಳಿಗಾಗಿ ಭಾರತೀಯ ವೀಸಾಗಳನ್ನು ಬಳಕೆ ಮಾಡುವ ಸಾಧ್ಯತೆ ಬಗ್ಗೆ ಭಾರತೀಯ ವಲಸೆ ಸಂಸ್ಥೆಗಳು ಶಂಕೆ ವ್ಯಕ್ತಪಡಿಸಿದ್ದಾರೆ.

ಇದೇ ಕಾರಣದಿಂದ ಎಚ್ಚೆತ್ತುಕೊಂಡಿರುವ ಕೇಂದ್ರ ಸರ್ಕಾರ ಎಲ್ಲ ವೀಸಾಗಳನ್ನು ಅಸಿಂಧುಗೊಳಿಸಿದ್ದು, ಇ-ವೀಸಾಗಳನ್ನು ಕಡ್ಡಾಯಗೊಳಿಸಿದೆ.

ಆಫ್ಘಾನಿಸ್ತಾನದ ಭಾರತೀಯ ರಾಯಭಾರಿ ಕಚೇರಿ ಪರವಾಗಿ ಭಾರತೀಯ ವೀಸಾಗಳನ್ನು ವಿತರಿಸುತ್ತಿದ್ದ ಕಾಬೂಲ್‌ನ ಕಚೇರಿಯೊಂದರ ಮೇಲೆ ಉರ್ದು ಮಾತನಾಡುವ ಗುಂಪೊಂದು ಹಠಾತ್ ದಾಳಿ ನಡೆಸಿ ದಾಂಧಲೆ ಮಾಡಿತು.

ಅಲ್ಲದೇ ಭಾರತೀಯ ವೀಸಾಗಳೊಂದಿಗೆ ಆಫ್ಘಾನಿಸ್ತಾನ ಪಾಸ್‌ಪೋರ್ಟ್‌ಗಳನ್ನು ಶಂಕಿತ ಉಗ್ರರು ವಶಪಡಿಸಿಕೊಂಡರು. ಮುಂದೆ ತಾಲಿಬಾನ್ ಉಗ್ರರು ಮತ್ತು ಭಾರತದ ವಿರೋಧ ಭಯೋತ್ಪಾದಕರು ಇದನ್ನು ನಕಲಿ ಪಾಸ್‌ಪೋರ್ಟ್ ಸೃಷ್ಟಿಗೆ ಬಳಸಬಹುದು ಎಂಬ ಆತಂಕವಿದೆ.

ಕಾಬೂಲ್‌ನಲ್ಲಿರುವ ಪಾಕಿಸ್ತಾನದ ಉಗ್ರರು ಈ ಕೃತ್ಯ ಎಸಗಿರುವ ಸಾಧ್ಯತೆ ಇದೆ. ದಾಂಧಲೆ ನಡೆಸಿದವರು ಉರ್ದು ಮಾತನಾಡುತ್ತಿದುದು ಇದಕ್ಕೆ ಪುಷ್ಟಿ ನೀಡಿದೆ.

× Chat with us