ಕೊರೊನಾ ಸಂಕಷ್ಟದಲ್ಲಿ ದೇಶದ 80 ಕೋಟಿ ಜನರಿಗೆ ಉಚಿತ ಪಡಿತರ ವಿತರಣೆ: ಪ್ರಧಾನಿ ಮೋದಿ

ಭೋಪಾಲ್: ಕೊರೊನಾ ಸಂಕಷ್ಟದ ವೇಳೆ ದೇಶದ 80 ಕೋಟಿ ಜನರಿಗೆ ಉಚಿತ ಪಡಿತರ ವಿತರಿಸಲಾಗುತ್ತಿದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ತಿಳಿಸಿದ್ದಾರೆ.

ಮಧ್ಯಪ್ರದೇಶದ ರಾಜಧಾನಿ ಭೋಪಾಲ್‌ನಲ್ಲಿ ಪ್ರಧಾನಮಂತ್ರಿ ಗರೀಬ್ ಕಲ್ಯಾಣ ಅನ್ನ ಯೋಜನೆ(ಪಿಎಂ-ಜಿಕೆವೈ)ಯ ಫಲಾನುಭವಿಗಳೊಂದಿಗೆ ಇಂದು ವಿಡಿಯೊ ಕಾನ್ಛರೆನ್ ಸಂವಾದದಲ್ಲಿ ಪ್ರಧಾನಿ ಮಾತನಾಡಿದರು.

ಮಧ್ಯಪ್ರದೇಶದ 5 ಕೋಟಿ ಜನರಿಗೂ ಪಿಎಂ-ಜಿಕೆವೈ ಅಡಿ ಉಚಿತ ಪಡಿತರ ವಿತರಿಸಲಾಗಿದೆ. ದೇಶದ ಒಟ್ಟು 80 ಕೋಟಿ ಮಂದಿ ಈ ಸೌಲಭ್ಯ ಪಡೆಯಲಿದ್ದಾರೆ ಎಂದು ಅವರು ಹೇಳಿದರು.

ಮನುಕುಲ ಕಂಡು ಕೇಳರಿಯದಂಥ ದೊಡ್ಡ ವಿಪತ್ತನ್ನು ಈ ಶತಮಾನದಲ್ಲಿ ಕೋವಿಡ್ ತಂದೊಡ್ಡಿದೆ. ಜನರು ಕೊರೊನಾ ಮುನ್ನೆಚ್ಚರಿಕೆ ಕ್ರಮಗಳನ್ನು ಕಡ್ಡಾಯವಾಗಿ ಅನುಸರಿಸಬೇಕು ಎಂದು ಮೋದಿ ಸಲಹೆ ಮಾಡಿದರು.

ಕೊರೊನಾ ಪಿಡುಗಿನಿಂದ ಎದುರಾಗಿರುವ ಸಂಕಷ್ಟವನ್ನು ಎದುರಿಸಲು ಕೇಂದ್ರ ಸರ್ಕಾರ ರೂಪಿಸಿರುವ ಕಾರ್ಯಕ್ರಮಗಳಲ್ಲಿ ಬಡವರು ಮತ್ತು ಆರ್ಥಿಕ ದುರ್ಬಲರಿಗೆ ಹೆಚ್ಚು ಆದ್ಯತೆ ನೀಡಲಾಗಿದೆ. ಅನೇಕ ಯೋಜನೆಗಳಲ್ಲಿ ಈ ವರ್ಗಕ್ಕೆ ಆಹಾರ ಮತ್ತು ಉದ್ಯೋಗ ಭದ್ರತೆಗೆ ಅಧಿಕ ಪ್ರಾಶಸ್ತ್ಯ ನೀಡಲಾಗಿದೆ ಎಂದು ಅವರು ತಿಳಿಸಿದರು.

× Chat with us