ಮಾಜಿ ಶಾಸಕನ ಪುತ್ರಿ ವಿವಾಹ; ವರನಿಗೆ ಉಡುಗೊರೆ ಮಹಾಪೂರ… ಮೌಲ್ಯ ಎಷ್ಟು ಗೊತ್ತೆ?

ತಮಿಳುನಾಡು: ಕೋವಿಡ್ ಸಂದರ್ಭದಲ್ಲಿ ಎಲ್ಲೆಡೆ ಸರಳ ವಿವಾಹಗಳು ಜರುಗುತ್ತಿವೆ. ಆದರೆ, ಗಣ್ಯರು, ಪ್ರಭಾವಿಗಳ ಮಕ್ಕಳ ವಿವಾಹ ಮಹೋತ್ಸವಗಳು ಅದ್ಧೂರಿಯಾಗಿ ನಡೆಯುತ್ತಿದ್ದು, ಇದಕ್ಕೆ ಅಪವಾದ ಎಂಬಂತೆ ತೋರುತ್ತಿದೆ. ಅದೇ ರೀತಿ ಮಾಜಿ ಶಾಸಕರೊಬ್ಬರ ಪುತ್ರಿಯ ಅದ್ಧೂರಿ ವಿವಾಹದ ಫೋಟೋಗಳು ಈಗ ವೈರಲ್ ಆಗಿವೆ.

ಮಧುರೈನಲ್ಲಿ ನಡೆದ ಮಾಜಿ ಶಾಸಕ ತಮಿಳರಸು ಪುತ್ರಿಯ ವಿವಾಹ ಸಂದರ್ಭದಲ್ಲಿ ವರನಿಗೆ ಅತಿಥಿಗಳಿಂದ ಉಡುಗೊರೆಗಳ ಮಹಾಪೂರವೇ ಹರಿದುಬಂದಿದೆ. ಉಡುಗೊರೆಯಾಗಿ ನೀಡಿದ್ದಾರೆ ಎನ್ನಲಾದ ವಸ್ತುಗಳ ಫೋಟೋ ಮತ್ತು ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಮದುವೆ ಸಭಾಂಗಣದ ಒಂದು ಭಾಗದಲ್ಲಿ ಪ್ಲಾಸ್ಟಿಕ್, ಬೆಳ್ಳಿ ಮತ್ತು ಚಿನ್ನದ ಪಾತ್ರೆಗಳು, ಟಿವಿ, ಮಿಕ್ಸರ್​ಗಳು, ಎಲೆಕ್ಟ್ರಾನಿಕ್ ವಸ್ತುಗಳು, ದ್ವಿಚಕ್ರ ವಾಹನ, ಕಾರು ಮತ್ತು ಟ್ರ್ಯಾಕ್ಟರ್​ಗಳನ್ನು ವರನಿಗೆ ಉಡುಗೊರೆಯಾಗಿ ನೀಡಿದ್ದಾರೆ. ಈ ವಸ್ತುಗಳ ಮೌಲ್ಯ ಎರಡು ಕೋಟಿ ರೂಪಾಯಿಗೂ ಹೆಚ್ಚಿರಬಹುದು ಎಂದು ಅಂದಾಜಿಸಲಾಗಿದೆ.

× Chat with us