ಎಚ್‌.ಡಿ.ಕೋಟೆ: ಕಾಡಾನೆ ದಾಳಿಗೆ ಅರಣ್ಯ ವಾಚರ್‌ ಬಲಿ

ಎಚ್‌.ಡಿ.ಕೋಟೆ: ಕಾಡಾನೆ ದಾಳಿಗೆ ಅರಣ್ಯ ಇಲಾಖೆ ವಾಚರ್‌ ಸಾವಿಗೀಡಾಗಿರುವ ಘಟನೆ ತಾಲ್ಲೂಕಿನಲ್ಲಿ ನಡೆದಿದೆ.

ನಂಜಯ್ಯನ ಕಾಲೊನಿಯ ನಿವಾಸಿ ಹನುಮಂತಯ್ಯ (56) ಮೃತ ದುರ್ದೈವಿ.

ಅರಣ್ಯದಂಚಿನಲ್ಲಿ ರಾತ್ರಿ ಮೂವರು ವಾಚರ್‌ಗಳು ಕಾವಲಿನಲ್ಲಿದ್ದರು. ಈ ವೇಳೆ ಕಾಡಾನೆ ಹಠಾತ್ ಎದುರಾಗಿದೆ. ಇದರಿಂದಾಗಿ ವಾಚರ್‌ಗಳು ದಿಕ್ಕಾಪಾಲಾಗಿ ಓಡಿದ್ದಾರೆ. ಈ ವೇಳೆ ಹನುಮಂತಯ್ಯ ಕುಸಿದು ಬಿದ್ದಿದ್ದು, ಅವರ ಮೇಲೆ ಆನೆ ದಾಳಿ ನಡೆಸಿದೆ.

ಈ ಸಂಬಂಧ ಎಚ್.ಡಿ.ಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

× Chat with us