ಜಾಲಿ ಮೂಡ್‌ನಲ್ಲಿದ್ದ ಲಿಂಬಾವಳಿಗೆ ಹುಲಿ ದರ್ಶನ!

ಚಾಮರಾಜನಗರ: ಬಂಡೀಪುರ ರಾಷ್ಟ್ರೀಯ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಅರಣ್ಯ ಸಚಿವ ಅರವಿಂದ ಲಿಂಬಾವಳಿ ಸಫಾರಿ ಕೈಗೊಂಡು ಮನರಂಜನೆ ಪಡೆದರು. ಸಫಾರಿ ವೇಳೆ ಸಚಿವರಿಗೆ ಹುಲಿ ದರ್ಶನವಾಯಿತು.

ಕೊಳದಲ್ಲಿ ವಿಶ್ರಾಂತಿ ಪಡೆಯುತ್ತಿದ್ದ ಹುಲಿಯನ್ನು ಕಂಡ ಸಚಿವರು ತಮ್ಮ ಮೊಬೈಲ್‌ನಲ್ಲಿ ಚಿತ್ರವನ್ನು ಸೆರೆಹಿಡಿದರು.

ಇದೇ ಮೊದಲ ಬಾರಿಗೆ ಅರಣ್ಯ ಸಚಿವರು ಬಂಡೀಪುರಕ್ಕೆ ಭೇಟಿ ನೀಡಿ ಸಫಾರಿ ಕೈಗೊಂಡರು. ಬಳಿಕ ಬಂಡೀಪುರದ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು.

× Chat with us