ರಿಯೊ ಡಿ ಜನೈರೊ, ಬ್ರೆಜಿಲ್: ಮೂರು ವಿಶ್ವಕಪ್ ಟೂರ್ನಿಗಳಲ್ಲಿ ಬ್ರೆಜಿಲ್ ತಂಡವನ್ನು ಚಾಂಪಿಯನ್ ಆಗಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಪೀಲೆ (82) ಗುರುವಾರ ಕ್ಯಾನ್ಸರ್‌ನಿಂದಾಗಿ ನಿಧನರಾದರು.
ಬ್ರೆಜಿಲ್ ತಂಡವು ಮೂರು ಬಾರಿ ವಿಶ್ವಕಪ್ (1958, 1962 ಮತ್ತು 1970) ಜಯಿಸಲು ಅವರ ಆಟವು ಪ್ರಮುಖವಾಗಿತ್ತು. ಬ್ರೆಜಿಲ್ ಪರವಾಗಿ ಅತಿ ಹೆಚ್ಚು ಗೋಲು ಗಳಿಸಿದ (77) ಅವರ ದಾಖಲೆಯನ್ನು ಈಚೆಗೆ ನಡೆದ ವಿಶ್ವಕಪ್ ಟೂರ್ನಿಯಲ್ಲಿ ನೇಮರ್ ಸರಿಗಟ್ಟಿದ್ದರು.
‘ಪೆಲೆಗೆ ನೀಡುತ್ತಿರುವ ಕಿಮೊಥೆರಪಿ ಪರಿಣಾಮ ಬೀರುತ್ತಿಲ್ಲ. ಆದ್ದರಿಂದ ಅವರನ್ನು ಪ್ಯಾಲೆಟಿವ್ ಕೇರ್ ವಿಭಾಗದಲ್ಲಿ ದಾಖಲಿಸಲಾಗಿದೆ’ ಎಂದು ಪತ್ರಿಕೆಯೊಂದು ವರದಿ ಮಾಡಿತ್ತು. ಅದನ್ನು ಕುಟುಂಬದ ಸದಸ್ಯರು ಅಲ್ಲಗಳೆದಿದ್ದರು.
ನವೆಂಬರ್ ಕೊನೆಯ ವಾರದಲ್ಲಿ ಅಲ್ಬರ್ಟ್ ಐನ್‌ಸ್ಟೈನ್ ಆಸ್ಪತ್ರೆಗೆ ದಾಖಲಾಗಿದ್ದರು. ಅವರ ಕರುಳಿನ ಕ್ಯಾನ್ಸರ್ ಉಲ್ಬಣಿಸಿದ್ದು ಮೂತ್ರಪಿಂಡ ಮತ್ತು ಹೃದಯಕ್ಕೆ ಸೋಂಕು ವ್ಯಾಪಿಸಿದೆ ಎಂದು ಈಚೆಗೆ ಆಸ್ಪತ್ರೆಯ ಮೂಲಗಳು ತಿಳಿಸಿದ್ದವು. 1957ರಲ್ಲಿ ರಾಷ್ಟ್ರೀಯ ತಂಡಕ್ಕೆ ಪದಾರ್ಪಣೆ ಮಾಡಿದ್ದ ಅವರು ವೃತ್ತಿಜೀವನದಲ್ಲಿ 1000ಕ್ಕೂ ಹೆಚ್ಚು ಗೋಲುಗಳನ್ನು ದಾಖಲಿಸಿದ್ದರು. 1977ರಲ್ಲಿ ನಿವೃತ್ತರಾಗಿದ್ದರು.
ಫಾರ್ವರ್ಡ್ ಮತ್ತು ಅಟ್ಯಾಕಿಂಗ್ ಮಿಡ್‌ಫೀಲ್ಡರ್ ಆಟಗಾರರಾಗಿದ್ದ ಪೆಲೆ, 1995–1998ರ ಅವಧಿಯಲ್ಲಿ ದೇಶದ ಕ್ರೀಡಾ ಸಚಿವರಾಗಿದ್ದರು. ವಿಶ್ವಕಪ್ ಟೂರ್ನಿಗಳ 14 ಪಂದ್ಯಗಳಲ್ಲಿ 12 ಗೋಲುಗಳನ್ನು ಗಳಿಸಿದ್ದರು. ಪ್ರಮುಖವಾಗಿ ಸ್ಯಾಂಟೊಸ್ ಮತ್ತು ನ್ಯೂಯಾರ್ಕ್ ಕಾಸ್ಮೊಸ್ ಕ್ಲಬ್‌ಗಳಿಗೆ ಆಡಿದ್ದರು.
ಕೊಡಗು: ಆಸ್ತಿ ವಿಚಾರಕ್ಕೆ ಅಣ್ಣನ ಮಗನ ಮೇಲೆ ಗುಂಡಿನ ದಾಳಿ ನಡೆಸಿರುವ ಘಟನೆ ಜಿಲ್ಲೆಯ ವಿರಾಜಪೇಟೆ ತಾಲ್ಲೂಕಿನ ಕಾವಾಡಿಯಲ್ಲಿ ನಡೆದಿದೆ.…
ಬೆಳಗಾವಿ: ರಾಜ್ಯದಲ್ಲಿ ಶೀಘ್ರದಲ್ಲೇ ಅರ್ಹರಿಗೆ ಹೊಸ ಬಿಪಿಎಲ್ ಕಾರ್ಡ್ ವಿತರಣೆ ಮಾಡಲಾಗುವುದು ಎಂದು ಆಹಾರ ಇಲಾಖೆ ಸಚಿವ ಕೆ.ಎಚ್.ಮುನಿಯಪ್ಪ ಘೋಷಣೆ…
ಬೆಂಗಳೂರು: ನಾಳೆ ನಟ ದರ್ಶನ್ ಅಭಿನಯದ ಡೆವಿಲ್ ಚಿತ್ರ ರಿಲೀಸ್ ಆಗುತ್ತಿದೆ. ಈ ಹಿನ್ನೆಲೆಯಲ್ಲಿ ಜೈಲಿನಿಂದಲೇ ಅಭಿಮಾನಿಗಳಿಗೆ ನಟ ದರ್ಶನ್…
ಮೈಸೂರು: ಜಿಲ್ಲೆಯ ಹುಣಸೂರು ತಾಲ್ಲೂಕಿನ ಗೌಡನಕಟ್ಟೆಯಲ್ಲಿ ತಾಯಿಯೊಂದಿಗೆ ಸೆರೆ ಸಿಕ್ಕಿದ್ದ ನಾಲ್ಕು ಹುಲಿ ಮರಿಗಳು ಮೃತಪಟ್ಟಿವೆ ಎಂದು ತಿಳಿದುಬಂದಿದೆ. ಹುಣಸೂರು…
ಓದುಗರ ಪತ್ರ: ಅದಲು-ಬದಲು...! ಬೆಂಗಳೂರಿನಿಂದ ಬೆಳಗಾವಿಗೆ ಬಲುದೂರ ದೂರ ಬಂತು ಚಳಿಗಾಲದ ಅಧಿವೇಶನ ! ವಿಧಾನ ಸೌಧದಿಂದ ಸುವರ್ಣ ಸೌಧಕ್ಕೆ…
ಮೈಸೂರಿನ ಶ್ರೀರಾಂಪುರ ಬಡಾವಣೆ ಎರಡನೇ ಹಂತದಲ್ಲಿ ಎಸ್‌ಬಿಎಂ ಕಾಲೋನಿಯಲ್ಲಿರುವ ನಂದಿನಿ ಹಾಲಿನ ಕೇಂದ್ರದ ಎದುರಿನ ಚರಂಡಿಯಲ್ಲಿ ಕಸ ಕಡ್ಡಿಗಳು ತುಂಬಿದ್ದು,…