ಕೇಂದ್ರ ಮಾಜಿ ಸಚಿವ, ರೈತ ನಾಯಕ ಬಾಬಾಗೌಡ ಪಾಟೀಲ ನಿಧನ

ಬೆಂಗಳೂರು: ಬೆಳಗಾವಿ-ಕರ್ನಾಟಕ ರಾಜ್ಯದಲ್ಲಿ ರೈತ ಕ್ರಾಂತಿ ಮಾಡಿದ್ದ ಕೇಂದ್ರದ ಮಾಜಿ ಸಚಿವ, ರೈತರ ನಾಯಕ ಬಾಬಾಗೌಡ ಪಾಟೀಲ ಶುಕ್ರವಾರ ಬೆಳಿಗ್ಗೆ ನಿಧನರಾಗಿದ್ದಾರೆ.

ಕಳೆದ ಒಂದು ವಾರದಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಬೆಳಗಾವಿಯ ಕೆಎಲ್‌ಇ ಆಸ್ಪತ್ರೆಗೆ ದಾಖಲಾಗಿದ್ದರು. ಆಸ್ಪತ್ರೆಯಲ್ಲಿ ಇಂದು ಬೆಳಿಗ್ಗೆ ಕೊನೆಯುಸಿರೆಳೆದಿದ್ದಾರೆ.

ಬೆಳಗಾವಿ ಜಿಲ್ಲೆಯ ಚಿಕ್ಕಬಾಗೇವಾಡಿ ಗ್ರಾಮದವರಾದ ಪಾಟೀಲ ಅವರು ರೈತಪರ ಹೋರಾಟದಲ್ಲಿ ಸಕ್ರಿಯರಾಗಿದ್ದರು. ಅಟಲ್ ಬಿಹಾರಿ ವಾಜಪೇಯಿ ಅವರ ಸಂಪುಟದಲ್ಲಿ ಗ್ರಾಮೀಣಾಭಿವೃದ್ಧಿ ಸಚಿವರಾಗಿ ಸೇವೆ ಸಲ್ಲಿಸಿದ್ದರು.

ಬಾಬಾಗೌಡ ಪಾಟೀಲರು ರೈತ ಚಳುವಳಿಯಲ್ಲಿ ಇದ್ದಾಗ ನಾನು ಸಹ ರೈತ ಸಂಘದಲ್ಲಿ ಇದ್ದೆ. ಅವರು ಅತ್ಯುತ್ತಮ ಸಂಘಟನಾಕಾರ ಹಾಗೂ ಭಾಷಣಕಾರರಾಗಿದ್ದರು. ಬಾಬಾ ಗೌಡರು 2 ವಿಧಾನಸಭಾ ಕ್ಷೇತ್ರದಿಂದ ರೈತಸಂಘದಿಂದ ಸ್ಪರ್ಧಿಸಿ ಗೆದ್ದಿದ್ದರು ನಂತರ ಒಂದು ಸ್ಥಾನಕ್ಕೆ ರಾಜೀನಾಮೆ ನೀಡಿ ಪ್ರೊ.ನಂಜುಂಡಸ್ವಾಮಿ ಅವರನ್ನು ಗೆಲ್ಲಿಸಿಕೊಂಡು ವಿಧಾನಸಭೆಗೆ ಪ್ರವೇಶ ಮಾಡಿದರು. ಇವರು ಶಾಸಕರಾಗಿದ್ದಾಗ M K ಹುಬ್ಬಳ್ಳಿ ಸಹಕಾರ ಸಕ್ಕರೆ ಕಾರ್ಖಾನೆ ಬಾರಿ ನಷ್ಟದಲ್ಲಿತ್ತು. ಆಗ ಆ ಕಾರ್ಖಾನೆಯ ಆಡಳಿತ ಮಂಡಳಿಗೆ ಚುನಾವಣೆ ನಡೆದಾಗ ರೈತಸಂಘದ ಅಭ್ಯರ್ಥಿಗಳನ್ನು ಹಾಕಿ ಗೆಲ್ಲಿಸಿ ಆ ಸಕ್ಕರೆ ಕಾರ್ಖಾನೆ ಲಾಭಗಳಿಸುವಂತೆ ಮಾಡಿ ರೈತರಿಗೆ ಆ ಕಾಲಘಟ್ಟದಲ್ಲಿ ಇಡೀ ದೇಶದಲ್ಲಿ ಅತ್ಯಂತ ಹೆಚ್ಚಿನ ದರವನ್ನು ಪ್ರತಿಟನ್ ಕಬ್ಬಿಗೆ ರೈತರಿಗೆ ಕೊಡಿಸಿದರು. ಇದು ಅವರ ಪರಿಶ್ರಮ ಎಂದು ರೈತ ಮುಖಂಡ ಮಲ್ಲೇಶ್‌ ಸಂತಾಪ ಸೂಚಿಸಿದರು.

ನಂಜುಂಡಸ್ವಾಮಿ ಹಾಗೂ ಬಾಬಾ ಗೌಡರಿಗೆ ಭಿನ್ನಾಭಿಪ್ರಾಯ ಬಂದು ಅವರು ರೈತಸಂಘಕ್ಕೆ ರಾಜೀನಾಮೆ ನೀಡಿ ಬಿಜೆಪಿ ಪಕ್ಷಕ್ಕೆ ಸೇರಿಕೊಂಡರು ನಂತರ ಬೆಳಗಾವಿ ಲೋಕಸಭಾ ಕ್ಷೇತ್ರಕ್ಕೆ ಸ್ಪರ್ಧೆ ಮಾಡಿ ಗೆದ್ದು ವಾಜಪೇಯಿ ಸರ್ಕಾರದಲ್ಲಿ ಗ್ರಾಮೀಣ ಅಭಿವೃದ್ಧಿ ಖಾತೆಯ ಮಂತ್ರಿಯಾಗಿದ್ದರು ಅವರು ಅತ್ಯಂತ ಪ್ರಾಮಾಣಿಕರಾಗಿದ್ದರು ಹಾಗೂ ಸರಳ ಜೀವಿ. ಬಾಬಾ ಗೌಡರು ಕೇಂದ್ರದಲ್ಲಿ ಸಚಿವರಾಗಿದ್ದಾಗ ಗ್ರಾಮ ಸಡಕ್ ಯೋಜನೆಯನ್ನು ಜಾರಿಗೆ ತರುವುದರ ಮೂಲಕ ರಾಜ್ಯದ ಹೆದ್ದಾರಿಗಳಿಗೆ ಗ್ರಾಮೀಣ ರಸ್ತೆಗಳನ್ನು ಸಂಪರ್ಕಕ್ಕೆ ತರುವ ಸಲುವಾಗಿ ಗ್ರಾಮೀಣ ಸಡಕ್ ಯೋಜನೆಯನ್ನು ಜಾರಿಗೆ ತಂದು ಉತ್ಕೃಷ್ಟ ರಸ್ತೆಗಳನ್ನು ನಿರ್ಮಿಸಿ ಒಂದು ಕ್ರಾಂತಿಯನ್ನು ಮಾಡಿ ವಾಜಪೇಯಿ ಅವರ ಪ್ರಶಂಸೆಗೆ ಪಾತ್ರರಾಗಿದ್ದರು ಎಂದು ನೆನೆದರು.

ಗ್ರಾಮೀಣ ಸಡಕ್ ರಸ್ತೆ ಯೋಜನೆಗೆ ನಬಾರ್ಡ್ ಮೂಲಕ ಹಣಕಾಸು ವ್ಯವಸ್ಥೆಯನ್ನು ಜಾರಿಗೊಳಿಸಿದ್ದರು. ಹಾಗೆಯೇ ಗ್ರಾಮೀಣ ಪ್ರದೇಶದಲ್ಲಿ ಲವಣಾಂಶದಿಂದ ಕೂಡಿದ ನೀರನ್ನು ಬೇರ್ಪಡಿಸಿ ಶುದ್ಧ ನೀರನ್ನು ಹಳ್ಳಿಗಳಿಗೆ ಸರಬರಾಜು ಮಾಡಲು ರಾಜ್ಯ ಸರ್ಕಾರಗಳಿಗೆ ಅಪಾರ ಹಣವನ್ನು ನೀಡಿದ್ದರು. ಇಂದಿನ ಕಾಲಘಟ್ಟದಲ್ಲಿ ನಡೆಯುತ್ತಿರುವ ಭ್ರಷ್ಟಾಚಾರ ದ ವಿರುದ್ಧ ಬೆಂಕಿ ಕಾರುತ್ತಿದ್ದರು ಈಗ ರಾಜ್ಯದಲ್ಲಿ ನಾವು ನೋಡುತ್ತಿರುವ ಕುಟುಂಬ ವ್ಯಾಮೋಹ ಭ್ರಷ್ಟಾಚಾರ ಮೊದಲು ಗಳ ಬಗ್ಗೆ ಈಗಲೂ ಸಹ ಬಹಳ ಕೋಪಗೊಂಡಿದ್ದರು. ಈ ದೇಶಕ್ಕೆ ಭ್ರಷ್ಟಾಚಾರವೇ ದೊಡ್ಡ ಶತ್ರು ಭ್ರಷ್ಟಾಚಾರ ಪಾಕಿಸ್ತಾನ ಹಾಗೂ ಚೀನಾ ಕಿಂತ ದೊಡ್ಡ ಶತ್ರು. ಯುವಜನತೆ ದೇಶದ ಮತದಾರರು ಭ್ರಷ್ಟಾಚಾರದ ವಿರುದ್ಧ ಹೋರಾಟ ಮಾಡದಿದ್ದಲ್ಲಿ ಈ ದೇಶಕ್ಕೆ ಉಳಿಗಾಲ ಇಲ್ಲ ಎಂದು ಹೇಳುತ್ತಿದ್ದರು. ಬದುಕಿನಲ್ಲಿ ಅತ್ಯಂತ ಸರಳ ಜೀವಿಯಾಗಿದ್ದರು. ನಾನು ರೈತ ಸಂಘಟನೆಯಲ್ಲಿ ಇದ್ದಾಗ ಅವರಿಗೆ ಅತ್ಯಂತ ನಿಕಟ ಸಂಪರ್ಕ ಹೊಂದಿದೆ. ಇತ್ತೀಚಿಗೆ ಅವರೊಂದಿಗೆ ಫೋನ್ನಲ್ಲಿ ಸಂಪರ್ಕ ಮಾಡಿ ಆರೋಗ್ಯ ವಿಚಾರಿಸಿದೆ ದ್ದೆ .ಇಂದು ಅವರು ಕರೋನಾ ರೋಗಕ್ಕೆ ತುತ್ತಾಗಿ ನಿಧನರಾಗಿದ್ದಾರೆ. ಇವರ ಸಾವಿನಿಂದ ರೈತ ಕುಲಕ್ಕೆ ಅಪಾರ ಹಾನಿಯಾಗಿದೆ. ಅವರ ಆತ್ಮಕ್ಕೆ ಚಿರಶಾಂತಿ ಸಿಗಲೆಂದು ದೇವರಲ್ಲಿ ಪ್ರಾರ್ಥಿಸುತ್ತೇನೆ ಎಂದು ಸ್ಮರಿಸಿದರು.

× Chat with us