ಫೇಸ್‌ಬುಕ್‌ ಜನಪ್ರಿಯ ಲೇಖಕಿ ಸೋನು ಸೌಮ್ಯ ಡೆತ್‌ನೋಟ್‌ ಬರೆದಿಟ್ಟು ಆತ್ಮಹತ್ಯೆ!

ಬೆಂಗಳೂರು: ಡೆತ್‌ನೋಟ್‌ ಬರೆದಿಟ್ಟು ಲೇಖಕಿ ಸೋನು ಸೌಮ್ಯ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಆತ್ಮಹತ್ಯೆಗೂ ಮುನ್ನ ಅವರು ರೆಕಾರ್ಡ್‌ ಮಾಡಿದ್ದ ವಿಡಿಯೊ ಮತ್ತು ಬರೆದಿದ್ದು ಎನ್ನಲಾದ ಡೆತ್‌ನೋಟ್‌ ವೈರಲ್‌ ಆಗಿದೆ.

ಸೌಮ್ಯಾಮೃತ ಕಾವ್ಯನಾಮದಿಂದ ಬರೆಯುತ್ತಿದ್ದ ಸೋನು ಅವರು ಆರಕ್ಕೂ ಹೆಚ್ಚು ಕೃತಿಗಳನ್ನು ಪ್ರಕಟಿಸಿದ್ದರು. ಬಯಕೆಯ ಆ ದಿನಗಳು (ಕಥಾಸಂಕಲನ), ಪ್ರೀತಿಯ ಪಯಣ (ಕವನಸಂಕಲನ), ನಗುವ ಹೂ ಅತ್ತಾಗ (ಕಾದಂಬರಿ), ನಾವಿಬ್ಬರೇ ಇದ್ದಾಗ (ನನ್ನ ಮತ್ತು ಆತ್ಮದ ನಡುವಿನ ಸಂಭಾಷಣೆ)- ಕಾದಂಬರಿ ಪ್ರಕಟಿತ ಕೃತಿಗಳು.

ಅವರಿಗೆ ಸಾಹಿತ್ಯ ಚಿಗುರು, ಯುವ ಚೇತನ, ಕರ್ನಾಟಕ ಯುವರತ್ನ, ಕುವೆಂಪು ಕನ್ನಡರತ್ನ, ಕನ್ನಡ ಸೇವಾರತ್ನ ಪ್ರಶಸ್ತಿಗಳು ಸಂದಿವೆ. ಅವರು 50 ಸಣ್ಣಕಥೆಗಳು, ನಾಲ್ಕು ಕಾದಂಬರಿ, ಹಲವಾರು ಲೇಖನಗಳು ಧಾರವಾಹಿ ಹಲವಾರು ಜಿಲ್ಲಾ ಪತ್ರಿಕೆಗಳಲ್ಲಿ ಪ್ರಕಟಿಸಿದ್ದಾರೆ.

× Chat with us