ರಕ್ತದಾನ ಮಾಡುವ ಮೂಲಕ ಮಾಜಿ ಸಿಎಂ ಹುಟ್ಟುಹಬ್ಬ ಆಚರಣೆ

ಮೈಸೂರು : ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಜನ್ಮದಿನದ ಪ್ರಯುಕ್ತ ನಗರದಲ್ಲಿ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ಮತ್ತು ಅಭಿಮಾನಿಗಳಿಂದ ವಿವಿಧ ಕಾರ್ಯಕ್ರಮಗಳು ನಡೆದವು.

ಕೃಷ್ಣರಾಜ ಯುವ ಬಳಗ ವತಿಯಿಂದ ಜೀವಧಾರ ರಕ್ತನಿಧಿ ಕೇಂದ್ರದಲ್ಲಿ ಆಯೋಜಿಸಲಾಗಿದ್ದ ರಕ್ತದಾನ ಶಿಬಿರಕ್ಕೆ ಮಾಜಿ ಶಾಸಕ ಎಂ.ಕೆ.ಸೋಮಶೇಖರ್ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, ಅಪರೂಪದ ರಾಜಕಾರಣಿ ಸಿದ್ದರಾಮಯ್ಯನವರ ಹುಟ್ಟುಹಬ್ಬವನ್ನು ರಕ್ತದಾನದ ಮೂಲಕ ಆಚರಿಸುತ್ತಿರುವುದು ಅರ್ಥಪೂರ್ಣ ಕಾರ್ಯಕ್ರಮ. ಬಡವರು ಮತ್ತು ಹಿಂದುಳಿದವರಿಗಾಗಿ ಅನ್ನಭಾಗ್ಯ ಸೇರಿದಂತೆ ಅನೇಕ ಯೋಜನೆಗಳನ್ನು ಅನುಷ್ಠಾನಗೊಳಿಸಿ ಜನಮನ್ನಣೆ ಗಳಿಸಿದ ನಾಯಕರಿವರು ಎಂದು ಬಣ್ಣಿಸಿದರು.

ಮಾಜಿ ಮೇಯರ್ ಟಿ.ಬಿ. ಚಿಕ್ಕಣ್ಣ, ಪಾಲಿಕೆ ಮಾಜಿ ಸದಸ್ಯರ ಎಂ. ಸುನಿಲ್, ಕಾಂಗ್ರೆಸ್ ಮುಖಂಡರಾದ  ನವೀನ್ ಕೆಂಪಿ, ಬಸಪ್ಪ, ರಾಜಾರಾಂ, ಪ್ರದೀಪ್ ಕುಮಾರ್, ವಿನಯ್, ರವಿ, ವಿನಯ್ ಕಣಗಾಲ್, ಸುನಿಲ್, ಪಾಪು, ಕಾಡನಹಳ್ಳಿ ಸ್ವಾಮಿ, ಗುಣಶೇಖರ್, ವಿಶ್ವನಾಥ್, ದೀಪಕ್ ಶಿವಣ್ಣ, ಪುನೀತ್ ಮಾರುತಿ, ಚಂದ್ರಹಾಸ, ಮಾದೇಶ್, ಜೀವಧಾರ ರಕ್ತನಿಧಿ ಮುಖ್ಯಸ್ಥ ಗಿರೀಶ್ ಮತ್ತಿತರರು ಉಪಸ್ಥಿತಿರಿದ್ದರು.

× Chat with us