ಹಾಸನ: ಗ್ರಾಮದಲ್ಲಿ ಒಂಟಿ ಸಲಗ ದಾಂಧಲೆ, ಹೈರಾಣಾದ ಜನ

ಹಾಸನ: ಜಿಲ್ಲೆಯಲ್ಲಿ ಕಾಡಾನೆಗಳ ಹಾವಳಿಯಿಂದಾಗಿ ರೈತರು ಹಾಗೂ ಸ್ಥಳೀಯರು ಹೈರಾಣಾಗಿದ್ದಾರೆ.

ಸಕಲೇಶಪುರ ತಾಲ್ಲೂಕಿನ ಮಠಸಾಗರ ಗ್ರಾಮದ ಮನೆಯೊಂದರ ಮುಂದೆ ಕಾಡಾನೆಯೊಂದು ಬಂದು ದಾಂಧಲೆ ಮಾಡಿದೆ. ಅಲ್ಲದೇ, ಮನೆಯ ಕಾಂಪೌಂಡ್ ಬಳಿ ಬಂದು ಒಂಟಿ ಆನೆ ಜನರನ್ನು ಅಟ್ಟಾಡಿಸಿದೆ. ಆನೆ ಮನೆ ಹತ್ತಿರ ಬರುತ್ತಿದ್ದಂತೆ ಅಲ್ಲಿಂದ ಜನ ಓಡಿದ್ದಾರೆ. ಈ ಸಂಬಂಧದ ಫೋಟೊ ವೈರಲ್‌ ಆಗಿದೆ.

ನಿತ್ಯವೂ ಊರಿನ ಕಾಫಿ ತೋಟಗಳಿಗೆ ಕಾಡಾನೆಗಳು ಲಗ್ಗೆ ಇಡುತ್ತಿವೆ. ಹೀಗಾಗಿ, ಕಾಡಾನೆ ಹಾವಳಿ ತಡೆಯಲು ಜನರು ಒತ್ತಾಯಿಸಿದ್ದಾರೆ.

× Chat with us