ಜೋಳದ ಬೆಳೆ ಕಾವಲಿಗೆ ಅಕ್ರಮ ವಿದ್ಯುತ್: ಆಹಾರ ಅರಸಿ ಬಂದಿದ್ದ ಆನೆ ಬಲಿ

ಹನೂರು: ಆಹಾರ ಅರಸಿ ಬಂದಿದ್ದ ಆನೆಯೊಂದು ಬೆಳೆ ಕಾವಲಿಗೆ ಅಳವಡಿಸಿದ್ದ ವಿದ್ಯುತ್ ತಂತಿ ಸ್ಪರ್ಶಿಸಿ ಮೃತಪಟ್ಟಿರುವ ಘಟನೆ ಹನೂರು ತಾಲೂಕಿನ ಆಂಡಿಪಾಳ್ಯ ಗ್ರಾಮದಲ್ಲಿ ನಡೆದಿದೆ.

ಅಂಡಿಪಾಳ್ಯಗ್ರಾಮದ ಭಾಗ್ಯಮ್ಮ ಎಂಬರಿಗೆ ಸೇರಿದ ಜಮೀನಿನಲ್ಲಿ ಮೆಕ್ಕೆಜೋಳ ಬೆಳೆ ಕಾವಲಿಗೆ ಅಳವಡಿಸಿದ್ದ ಅಕ್ರಮ ವಿದ್ಯುತ್ ಪ್ರವಹಿಸಿ ಅಂದಾಜು 20 ವರ್ಷದ ಗಂಡಾನೆ ಭಾನುವಾರ ಮುಂಜಾನೆ ಮೃತಪಟ್ಟಿದೆ. ಕಾಡಂಚಿನ ಗ್ರಾಮಗಳಲ್ಲಿ ಬೆಳೆ ರಕ್ಷಣೆಗಾಗಿ ಅಕ್ರಮ ವಿದ್ಯುತ್ ಹರಿಬಿಡುವುದು ಸರ್ವೇ ಸಾಮಾನ್ಯವಾಗಿದೆ ಎಂಬ ಆರೋಪ ಕೇಳಿಬಂದಿದ್ದು ಚೆಸ್ಕಾಂ ಸಿಬ್ಬಂದಿಗಳು ಸಮಪರ್ಕವಾಗಿ ಭೇಟಿ ನೀಡದಿರುವುದರಿಂದ ಈ ರೀತಿಯ ಪ್ರಕರಣ ಮರುಕಳಿಸುತ್ತಿವೆ ಎನ್ನಲಾಗಿದೆ.

ಸದ್ಯ, ಬಿಳಿಗಿರಿರಂಗನ ಬೆಟ್ಟ ದೇವಾಲಯ ಹುಲಿ ಸಂರಕ್ಷಿತ ಪ್ರದೇಶದ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು ಆರೋಪಿ ಭಾಗ್ಯಮ್ಮ ತಲೆ ಮರೆಸಿಕೊಂಡಿದ್ದಾರೆ.

ಸ್ಥಳಕ್ಕೆ ಬಿಆರ್‌ಟಿ ಉಪ ಸಂರಕ್ಷಣಾಧಿಕಾರಿ ಪ್ರಭುಹಾಗೂ ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ. ಈ ವೇಳೆ ಪರಿಸರ ಪ್ರೇಮಿ ಹಾಗೂಪಿ ಜಿ ಪಾಳ್ಯ ಗ್ರಾಮ ಪಂಚಾಯಿತಿ ನೂತನ ಅಧ್ಯಕ್ಷ ಎನ್.ಕೃಷ್ಣಮೂರ್ತಿ ಭೇಟಿ ನೀಡಿ ಪೂಜೆ ಸಲ್ಲಿಸಿದ್ದಾರೆ.

× Chat with us