ಅಕ್ರಮವಾಗಿ ಅಳವಡಿಸಿದ್ದ ವಿದ್ಯುತ್‌ಗೆ ಸಿಲುಕಿ ಕಾಡಾನೆ ಸಾವು!

ಚಾಮರಾಜನಗರ: ಅಕ್ರಮವಾಗಿ ಅಳವಡಿಸಿದ್ದ ವಿದ್ಯುತ್‌ಗೆ ಸಿಲುಕಿ ಕಾಡಾನೆ ಮೃತಪಟ್ಟಿರುವ ಘಟನೆ ಗುಂಡ್ಲುಪೇಟೆ ತಾಲ್ಲೂಕಿನ ಆಲತ್ತೂರು ಗ್ರಾಮದಲ್ಲಿ ನಡೆದಿದೆ.

ಆಲತ್ತೂರು ಗ್ರಾಮದಲ್ಲಿ ರೈತ ಜಗನ್ನಾಥ್‌ ಎಂಬವರು ತಾವು ಬೆಳಿದಿದ್ದ ನೆಲಗಡಲೆ ಬೆಳೆ ರಕ್ಷಣೆಗಾಗಿ ಅಕ್ರಮ ವಿದ್ಯುತ್ ಬಳಸಿದ್ದರು. ಅದಕ್ಕೆ ಸಿಲುಕಿ ಬಂಡೀಪುರ ಅರಣ್ಯದ ಆನೆಯೊಂದು ಮೃತಪಟ್ಟಿದೆ. ಬಂಡೀಪುರ ಹುಲಿ ಯೋಜನೆಯ ಓಂಕಾರ್ ವಲಯದ ಕಾಡಂಚಿನ ಗ್ರಾಮದಲ್ಲಿ ಈ ಘಟನೆ ನಡೆದಿದೆ.

ಘಟನಾ ಸ್ಥಳಕ್ಕೆ ಅರಣ್ಯ ಇಲಾಖೆ ಸಿಬ್ಬಂದಿಗಳು ಧಾವಿಸಿ ಕ್ರಮಕೈಗೊಂಡಿದ್ದಾರೆ.

× Chat with us