ಮರಿಯೊಂದಿಗೆ ಬಂದ ಆನೆ… ದಾಳಿ ನಡೆಸಿ ಶಾಲೆ ಗೇಟ್ ಧ್ವಂಸ!

ಸೋಮವಾರಪೇಟೆ: ತಾಯಿ ಆನೆ ಮರಿಯೊಂದಿಗೆ ಗ್ರಾಮಕ್ಕೆ ನುಗ್ಗಿ ಸರ್ಕಾರಿ ಪ್ರಾಥಮಿಕ ಶಾಲೆಯ ಗೇಟ್‌ ಅನ್ನು ಧ್ವಂಸ ಮಾಡಿರುವ ಘಟನೆ ನಡೆದಿದೆ.

ತಾಲ್ಲೂಕಿನ ಗೋಣಿಮರೂರು ಗ್ರಾಮದ ಮಾದರಿ ಸರ್ಕಾರಿ ಪ್ರಾಥಮಿಕ ಶಾಲೆಯ ಗೇಟ್‌ ಅನ್ನು ಕೆಡವಿದ್ದು, ಮಂಜಣ್ಣ ಎಂಬವರಿಗೆ ಸೇರಿದ ನೀರಿನ ಟ್ಯಾಂಕ್ ಅನ್ನು ತುಳಿದು ನಾಶಪಡಿಸಿದೆ. ನಂತರ ತೈತರೊಬ್ಬರ ಜಮೀನಿಗೆ ಲಗ್ಗೆ ಇಟ್ಟು ಸುವರ್ಣಗೆಡ್ಡೆ ಹಾಗೂ ಬಾಳೆ ಫಸಲನ್ನು ನಾಶಗೊಳಿಸಿದೆ.

ಅರಣ್ಯ ಇಲಾಖೆಯವರು ಇತ್ತ ಗಮನಹರಿಸಿ ಪುಂಡಾನೆಗಳನ್ನು ಕಾಡಿನತ್ತ ಓಡಿಸಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

× Chat with us