ಹನೂರು: ಕಾಡಾನೆ ಮೃತದೇಹ ಪತ್ತೆ!

ಹನೂರು: ಕಾಡಾನೆಯೊಂದು ಆಕಸ್ಮಿಕವಾಗಿ ಸಾವನ್ನಪ್ಪಿರುವ ಘಟನೆ ಹನೂರು ಪಟ್ಟಣದ ಹೊರವಲಯದ ಒಂಟ ಮಾಲಾಪುರದ ಗ್ರಾಮದ ಸಮೀಪ ಜರುಗಿದ್ದು, ತಡವಾಗಿ ಬೆಳಕಿಗೆ ಬಂದಿದೆ.

ಹನೂರು ಬಫರ್ ವಲಯ ವ್ಯಾಪ್ತಿಗೆ ಸೇರಿದ ಒಂಟ ಮಾಲಾಪುರ ಅರಣ್ಯ ಪ್ರದೇಶದಲ್ಲಿ ಕಳೆದ ಒಂದು ವಾರದ ಹಿಂದೆ ಕಾಡಾನೆಯೊಂದು ಮೃತಪಟ್ಟಿದೆ. ಒಂದು ವಾರದ ಹಿಂದೆ ಕಾಡಾನೆ ಮೃತಪಟ್ಟಿದ್ದರು ಸಹ ಅರಣ್ಯ ಇಲಾಖೆಯ ಸಿಬ್ಬಂದಿಗಳಿಗೆ ಮಾಹಿತಿಯೇ ಇಲ್ಲ, ಸ್ಥಳೀಯ ಗ್ರಾಮಸ್ಥರು ಆನೆ ಮೃತಪಟ್ಟಿರುವ ಬಗ್ಗೆ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದ ನಂತರ ಆರ್ ಎಫ್ ಒ ಸುಂದರ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ನಂತರ ಪಶುವೈದ್ಯಾಧಿಕಾರಿ ಸಿದ್ದರಾಜು ಆಗಮಿಸಿ ಮರಣೋತ್ತರ ಪರೀಕ್ಷೆ ನಡೆಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.

ಅರಣ್ಯ ಇಲಾಖೆಯ ನಿರ್ಲಕ್ಷ್ಯ: ಕಾಡಾನೆಯಿಂದ ಮೃತಪಟ್ಟು ಸುಮಾರು ಹತ್ತು ದಿನಗಳೇ ಕಳೆದಿದೆ. ಆದರೂ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಇದರ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಕಾಡಾನೆ ಸಾವು ಹಲವು ಸಂಶಯಗಳಿಗೆ ಎಡೆಮಾಡಿಕೊಟ್ಟಿದೆ.

× Chat with us