ಶಿವಮೊಗ್ಗದಲ್ಲಿ ಭಾರೀ ಸ್ಫೋಟ: ಭೂಕಂಪದ ಅನುಭವ

ಶಿವಮೊಗ್ಗ: ಶಿವಮೊಗ್ಗ ಜಿಲ್ಲೆಯಾದ್ಯಂತ ರಾತ್ರಿ ಭೀಕರ ಸದ್ದು ಕೇಳಿ ಬಂದ ಹಿನ್ನೆಲೆಯಲ್ಲಿ ಜನ ಗಾಬರಿಯಾಗಿ ಹೊರಗೆ ಓಡಿಬಂದಿದ್ದಾರೆ.

ಜಿಲ್ಲೆಯ ಹಲವು ಗ್ರಾಮಗಳಲ್ಲಿ ರಾತ್ರಿ 10.25ರ ಸುಮಾರಿನಲ್ಲಿ ಭೂಮಿ ಕಂಪಿಸಿದ ಅನುಭವವಾಗಿದೆ. ಒಳಗೆ ಸ್ಫೋಟವಾದ ಸದ್ದು ಕೇಳಿ ಜನರು ಗಾಬರಿಯಾಗಿ ಮನೆಗಳಿಂದ ಹೊರಗೆ ಓಡಿಬಂದಿದ್ದಾರೆ.

ಸ್ಫೋಟದ ರಭಸಕ್ಕೆ ಕೆಲವು ಮನೆಗಳ ಕಿಟಕಿ ಗಾಜುಗಳು ಸಹ ಒಡೆದುಹೋಗಿವೆ. ಭದ್ರಾವತಿಯಲ್ಲಿ ರೈಲ್ವೆ ಕ್ರಶರ್‌ ಸ್ಫೋಟಗೊಂಡು ಈ ಶಬ್ದಕೇಳಿದೆ ಎಂದು ಹೇಳಲಾಗುತ್ತಿದೆ. ಭೂವಿಜ್ಞಾನ ಇಲಾಖೆಯು ಇನ್ನೂ ಈ ಕುರಿತು ಸ್ಪಷ್ಟನೆ ನೀಡಿಲ್ಲ.

ಇದೇ ಮೊದಲಲ್ಲ: ಶಿವಮೊಗ್ಗದಲ್ಲಿ ಈ ರೀತಿಯ ಕಂಪನದ ಅನುಭವವಾಗುತ್ತಿರುವುದು ಇದೇ ಮೊದಲಲ್ಲ. 2019ರಲ್ಲಿ ವರಾಹಿ ಜಲ ವಿದ್ಯುತ್‌ ಯೋಜನಾ ಪ್ರದೇಶದ ಸುತ್ತಮುತ್ತ ಈ ರೀತಿಯ ಸ್ಫೋಟದ ಸದ್ದು ಕೇಳಿಬಂದಿತ್ತು.

ಚಿಕ್ಕಮಗಳೂರಿನಲ್ಲಿ ಕಂಪನದ ಅನುಭವ: ಚಿಕ್ಕಮಗಳೂರಿನಲ್ಲೂ ಸ್ಫೋಟದ ಅನುಭವವಾಗಿದ್ದು, ಕಂಪನದ ಅನುಭವವಾಗಿದೆ. ಶಿವಮೊಗ್ಗ ಜಿಲ್ಲೆಯ ಗಡಿಗೆ ಹೊಂದಿಕೊಂಡಿರುವ ಭಾಗಗಳಲ್ಲಿ ಸ್ಫೋಟದ ಸದ್ದು ಕೇಳಿಬಂದಿದೆ.

× Chat with us