BREAKING NEWS

ಪಠ್ಯ ಪುಸ್ತಕಗಳಿಂದ ನಮ್ಮ ಹೆಸರು ಕೈಬಿಡಿ: ಎನ್‌ಸಿಇಆರ್‌ಟಿಗೆ 33 ಶೀಕ್ಷಣ ತಜ್ಞರ ಪತ್ರ

ನವದೆಹಲಿ: ಸಮಷ್ಟಿಯಾಗಿ ಸೃಜನಶೀಲತೆಯಿಂದ ರೂಪಿಸಿದ್ದ ಪಠ್ಯಪುಸ್ತಕಗಳ ಸ್ವರೂಪವೇ ಬದಲಾಗಿದೆ. ಹೀಗಾಗಿ ನಮ್ಮ ಹೆಸರುಗಳನ್ನು ಪಠ್ಯಪುಸ್ತಕಗಳಿಂದ ಕೈಬಿಡಬೇಕು ಎಂದು 33 ಮಂದಿ ಶಿಕ್ಷಣ ತಜ್ಞರು ಗುರುವಾರ ಎನ್‌ಸಿಇಆರ್‌ಟಿಗೆ ಪತ್ರ ಬರೆದಿದ್ದಾರೆ.

ರಾಜಕೀಯ ಚಿಂತಕರಾದ ಯೋಗೇಂದ್ರ ಯಾದವ್‌ ಮತ್ತು ಸುಹಾಸ್‌ ಫಾಲ್‌ಸಿಕರ್‌ ಅವರು ಇಂತಹುದೇ ಬೇಡಿಕೆಯನ್ನು ಈಗಾಗಲೇ ಇಟ್ಟಿದ್ದಾರೆ. ಈ ಎಲ್ಲರೂ ರಾಷ್ಟ್ರೀಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಮಂಡಳಿಯ(ಎನ್‌ಸಿಇಆರ್‌ಟಿ) ಪಠ್ಯಪುಸ್ತಕ ರಚನಾ ಸಮಿತಿ ಭಾಗವಾಗಿದ್ದರು.

ಹೆಸರು ಕೈಬಿಡಲು ಕೋರಿ ಎನ್‌ಇಆರ್‌ಟಿ ನಿರ್ದೇಶಕ ದಿನೇಶ್ ಸಕ್ತಾನಿ ಅವರಿಗೆ ಪತ್ರ ಬರೆದಿರುವ ಪ್ರಮುಖರು: ಜೆಎನ್‌ಯು ಮಾಜಿ ಪ್ರೊಫೆಸರ್ ಕಾಂತಿ ಪ್ರಸಾದ್‌ ಬಾಜಪೇಯಿ, ಅಶೋಕ ವಿಶ್ವವಿದ್ಯಾಲಯದ ಮಾಜಿ ಕುಲಪತಿ ಪ್ರತಾಪ್ ಭಾನು ಮೆಹ್ರಾ, ಸಿಎಸ್‌ಡಿಎಸ್‌ನ ಮಾಜಿ ನಿರ್ದೇಶಕ ರಾಜೀವ್ ಭಾರ್ಗವ, ಜೆಎನ್‌ಯು ಮಾಜಿ ಪ್ರೊಫೆಸರ್ ನೀರಜಾ ಗೋಪಾಲ್ ಜಯಲ್, ಜೆಎನ್‌ಯು ಪ್ರೊಫೆಸರ್ ನಿವೇದಿತಾ ಮೆನನ್, ಸಿವಿಲ್ ಸೊಸೈಟಿ ವಾಚ್‌ಡಾಗ್ ಕಾಮನ್‌ ಕಾಸ್‌ ಸಂಸ್ಥೆಯ ಮುಖ್ಯಸ್ಥ ವಿಪುಲ್ ಮುದ್ದಲ್, ಹೈದರಾಬಾದ್ ವಿಶ್ವವಿದ್ಯಾಲಯದ ಮಾಜಿ ಪ್ರೊಫೆಸರ್ ಕೆ.ಸಿ.ಸೂರಿ, ಭಾರತೀಯ ಅಧ್ಯಯನ ಸಂಸ್ಥೆಯ ಮಾಜಿ ನಿರ್ದೇಶಕ ಪೀಟರ್ ರೊನಾಲ್ಡ್ ಡಿಸೋಜ.

‘ಮೂಲ ಪಠ್ಯಪುಸ್ತಕ ಸಾಕಷ್ಟು ಪರಿಷ್ಕರಣೆಗೊಂಡಿದೆ. ಈಗ ವಿಭಿನ್ನ ಪಠ್ಯಪುಸ್ತಕವಾಗಿಯೇ ರೂಪುಗೊಂಡಿದೆ. ಇದನ್ನು ನಾವು ರೂಪಿಸಿದ್ದು ಎಂದು ಹೇಳಿಕೊಳ್ಳುವುದೂ ಕಷ್ಟವಾಗುತ್ತದೆ. ಈ ಕಾರಣದಿಂದ ಪಠ್ಯಪುಸ್ತಕಗಳಿಂದ ನಮ್ಮಹೆಸರು ಕೈಬಿಡಬೇಕು. ನಾವು ಸಮಷ್ಠಿಯಾಗಿ, ಸೃಜನಶೀಲತೆಯಿಂದ ಮಾಡಿದ್ದ ಪ್ರಯತ್ನವೇ ಈಗ ಅಸ್ತವ್ಯಸ್ತಗೊಂಡಿದೆ ಎಂಬುದು ನಮ್ಮ ಅಭಿಪ್ರಾಯ’ ಎಂದು ಹೇಳಿದ್ದಾರೆ.

“ವಿಸ್ಕೃತ ಚರ್ಚೆ ಹಾಗೂ ವಿವಿಧ ಕ್ಷೇತ್ರಗಳ ಪ್ರಮುಖರು, ಚಿಂತಕರು, ಭಿನ್ನ ಸಿದ್ಧಾಂತಗಳ ಹಿನ್ನೆಲೆಯುಳ್ಳವರು, ಸ್ವಾತಂತ್ರ್ಯ ಹೋರಾಟ, ಸಂವಿಧಾನ ಚೌಕಟ್ಟು, ಪ್ರಜಾಪ್ರಭುತ್ವದ ಕಾರ್ಯವಿಧಾನ, ಭಾರತ ರಾಜಕಾರಣದ ಪ್ರಮುಖಾಂಶಗಳು, ಜಾಗತಿಕ ವಿದ್ಯಮಾನಗಳು ಕುರಿತ ಅರಿವನ್ನು ಹಂಚಿಕೊಂಡಿದ್ದವರ ಜೊತೆಗೆ, ಸಮಾಲೋಚನೆ ನಡೆಸಿದ್ದರ ಫಲವಾಗಿ ಈ ಪಠ್ಯಪುಸ್ತಕಗಳು ರಚನೆಯಾಗಿದ್ದವು’ ಎಂದು ಹೇಳಿದ್ದಾರೆ.

ಕಳೆದ ವಾರ ಎನ್‌ಸಿಇಆರ್‌ಟಿಗೆ ಪತ್ರ ಬರೆದಿದ್ದ ಯೋಗೇಂದ್ರ ಯಾದವ್ ಮತ್ತು ಫಾಲ್‌ಸಿಕರ್ ಅವರು, `ಪಠ್ಯ ಪರಿಷ್ಕರಣೆ ಕಸರತ್ತು ಪುಸ್ತಕಗಳನ್ನು ಗುರುತಿಸಲಾಗದಂತೆ ಮಾಡಿದೆ. ನಮಗೆ ಹೆಮ್ಮೆ ಎನಿಸುತ್ತಿದ್ದ ಪಠ್ಯಪುಸ್ತಕಗಳು ಈಗ ಇರಿಸುಮುರಿಸು ಮೂಡಿಸುತ್ತಿವೆ’ ಎಂದು ಹೇಳಿದ್ದರು.

ಆದರೆ, ‘ಪಠ್ಯಪುಸ್ತಕದ ಜೊತೆಗೆ ಗುರುತಿಸಲಾದ ಹೆಸರು ಕೈಬಿಡುವ ಪ್ರಶ್ನೆ ಇಲ್ಲ. ಪಠ್ಯಪುಸ್ತಕಗಳನ್ನು ಆ ವಿಷಯದ ಜ್ಞಾನ, ಅರಿವು ಆಧರಿಸಿ ರೂಪಿಸಲಾಗುತ್ತದೆ. ಯಾವುದೇ ಹಂತದಲ್ಲಿ ವ್ಯಕ್ತಿಗತವಾಗಿ ಒಬ್ಬರು ಕರ್ತೃ ಎಂದು ಹೇಳಿಕೊಳ್ಳಲಾಗದು’ ಎಂದು ಎನ್‌ಸಿಇಆರ್‌ಟಿ ಹೇಳಿದೆ.

ಕಳೆದ ತಿಂಗಳು ಕೆಲವು ಪಠ್ಯಗಳನ್ನು ಪುಸ್ತಕಗಳಿಂದ ಕೈಬಿಟ್ಟಿದ್ದ ಎನ್‌ಸಿಇಆರ್‌ಟಿ ಕ್ರಮ ವಿವಾದಕ್ಕೆ ಆಸ್ಪದವಾಗಿತ್ತು. ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು ಪ್ರತೀಕಾರ ಮನೋಭಾವದಿಂದ ಈ ಕಸರತ್ತಿಗೆ ಕೈಹಾಕಿದೆ ಎಂದು ವಿರೋಧ ಪಕ್ಷಗಳು ತೀವ್ರ ತರಾಟೆ ತೆಗೆದುಕೊಂಡಿದ್ದವು.

ಆದರೆ, ಕೆಲ ಪಠ್ಯಗಳನ್ನು ಕಣ್ಣಪ್ಪಿನಿಂದ ಕೈಬಿಟ್ಟಿರುವ ಸಾಧ್ಯತೆ ಇದೆ ಎಂದು ಎನ್‌ಸಿಇಆರ್‌ಟಿ ನಂತರ ಹೇಳಿದ್ದರೂ, ತಜ್ಞರ ಸಮಿತಿಯ ಶಿಫಾರಸು ಆಧರಿಸಿ ಇದನ್ನು ಮಾಡಲಾಗಿದೆ ಎಂದು ಸಮರ್ಥಿಸಿಕೊಳ್ಳುವ ಮೂಲಕ ಕೈಬಿಟ್ಟಿದ್ದ ಪಠ್ಯ ಮರುಸೇರಿಸಲು ನಿರಾಕರಿಸಿತ್ತು.

andolanait

Recent Posts

ಮಹದೇಶ್ವರ ಬೆಟ್ಟ ಮುಖ್ಯರಸ್ತೆ ಬದಿಯಲ್ಲಿ ಒಂಟಿಸಲಗ ದರ್ಶನ: ಭಯಭೀತರಾದ ವಾಹನ ಸವಾರರು

ಮಹಾದೇಶ್‌ ಎಂ ಗೌಡ, ಹನೂರು ತಾಲ್ಲೂಕು ವರದಿಗಾರರು ಹನೂರು: ಶ್ರೀಕ್ಷೇತ್ರ ಮಲೆ ಮಹದೇಶ್ವರ ಬೆಟ್ಟಕ್ಕೆ ಪಾದಯಾತ್ರೆಯ ಮೂಲಕ ತೆರಳುತ್ತಿದ್ದ ಬಾಲಕನ…

5 hours ago

ಸೈಬರ್ ಕ್ರೈಂ ಪೊಲೀಸರ ಕ್ಷಿಪ್ರ ಕಾರ್ಯಾಚರಣೆ: ಕಳೆದುಹೋಗಿದ್ದ 104 ಮೊಬೈಲ್ ವಶಕ್ಕೆ

ಮಡಿಕೇರಿ: ಕೊಡಗು ಜಿಲ್ಲೆಯ ಸೈಬರ್ ಕ್ರೈಂ ಪೊಲೀಸರು ಒಂದು ತಿಂಗಳ ಕಾಲ ಕ್ಷಿಪ್ರ ಕಾರ್ಯಾಚರಣೆ ಮಾಡುವ ಮೂಲಕ ನಾಗರಿಕರು ಕಳೆದುಕೊಂಡ…

5 hours ago

ಮಕ್ಕಳಿಗೆ ಜಂತುಹುಳು ಮಾತ್ರೆ ನೀಡಿದ ಶಾಸಕ ಅನಿಲ್ ಚಿಕ್ಕಮಾದು

ಎಚ್.ಡಿ.ಕೋಟೆ: ಮಾದಾಪುರ ಗ್ರಾಮದ ಚಂದ್ರಮೌಳೇಶ್ವರ ಮಲ್ಲಿಕಾರ್ಜುನ ಸ್ವಾಮಿ ಜಾತ್ರಾ ಮಹೋತ್ಸವದಲ್ಲಿ ರಾಷ್ಟ್ರೀಯ ಜಂತುಹುಳು ನಿವಾರಣಾ ದಿನದ ಪ್ರಯುಕ್ತ ಅರಣ್ಯ ಮತ್ತು…

6 hours ago

ಕಾಯಕ ಶರಣರ ಆದರ್ಶ ಮೌಲ್ಯಗಳನ್ನು ಅಳವಡಿಸಿಕೊಳ್ಳಬೇಕು: ಡಾ.ಬಿ.ವಿ.ನಂದೀಶ್

ಮಂಡ್ಯ: ಕಾಯಕ ಶರಣರು ಸಮಾಜಕ್ಕೆ ವಚನಗಳ ಮೂಲಕ ಅನೇಕ ಕೊಡುಗೆಗಳನ್ನು ನೀಡಿದ್ದಾರೆ. ಯುವ ಜನತೆಯೂ ಕಾಯಕ ಶರಣರ ಆದರ್ಶ, ಮೌಲ್ಯಗಳನ್ನು…

6 hours ago

ಮಕ್ಕಳು ಅಂತರ್ಜಾಲದ ಬಳಕೆ ಕಡಿಮೆ ಮಾಡಬೇಕು: ಬಿ.ಸಿ.ಶಿವಾನಂದ ಮೂರ್ತಿ

ಮಂಡ್ಯ: ಪ್ರಸ್ತುತ ಕಾಲದಲ್ಲಿ ಮಕ್ಕಳು ಅಂತರ್ಜಾಲ ಬಳಕೆಯನ್ನು ಹೆಚ್ಚು ಮಾಡುತ್ತಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಮುಳುಗಿ ಹೋಗಿದ್ದಾರೆ ಇದರಿಂದ ಮಕ್ಕಳ ಮನಸ್ಥಿತಿ…

6 hours ago

ಮಂಡ್ಯ ಜಿಲ್ಲೆ ಇ-ಪೌತಿ ಖಾತಾ ಆಂದೋಲನದಲ್ಲಿ ರಾಜ್ಯಕ್ಕೆ ಪ್ರಥಮ

ಮಂಡ್ಯ: ಪೌತಿ ಖಾತೆ ಪ್ರಕ್ರಿಯೆಯನ್ನು ಮಂಡ್ಯ ಜಿಲ್ಲೆಯು ಈ ಪೌತಿ ಖಾತೆಯಲ್ಲಿ ಪ್ರಥಮ ಸ್ಥಾನ ಪಡೆದಿದ್ದು, ಈ ಪೌತಿ ಖಾತೆಯನ್ನು…

6 hours ago