ಚೆನ್ನೈ: ಪಾನಮತ್ತರು 3 ವ್ಯಕ್ತಿಗಳು ಹಣಕ್ಕಾಗಿ ಒತ್ತಾಯಿಸಿ ಟ್ರಕ್ ಚಾಲಕನ ಮೇಲೆ ಹಲ್ಲೆ ಮಾಡಿ ಹೆಡ್ಲೈಟ್ಗಳನ್ನು ಹೊಡೆದುಹಾಕಿದ್ದಾರೆ. ಇದರಿಂದ ಕೋಪಗೊಂಡ ಚಾಲಕ ಹಲ್ಲೆ ಮಾಡಿದ ಇಬ್ಬರು ವ್ಯಕ್ತಿಗಳ ಮೇಲೆ ಟ್ರಕ್ ಹತ್ತಿಸಿ ಕೊಲೆ ಮಾಡಿರುವ ಘಟನೆ ಚೆನ್ನೈನ ರೆಡ್ಹಿಲ್ಸ್ನಲ್ಲಿರುವ ಖಾಸಗಿ ಟ್ರಕ್ ಪಾರ್ಕಿಂಗ್ ಯಾರ್ಡ್ನಲ್ಲಿ ನಡೆದಿದೆ.
ಉತ್ತರ ಪ್ರದೇಶದ ಟ್ರಕ್ ಚಾಲಕ ಕನ್ಹಯ್ಯಾ(35) ಸಿಂಗ್ ಕೊಲೆ ಮಾಡಿರುವ ಆರೋಪಿ. ಕುಮಾರನ್ (36) ಮತ್ತು ಕಮಲಾ ಕಣ್ಣನ್ (35) ಮೃತಪಟ್ಟಿದ್ದು, ನವೀನ್ (25) ಗಾಯಗೊಂಡಿದ್ದಾರೆ.
ರಾತ್ರಿ 7.30ರ ಸುಮಾರಿಗೆ ಕನ್ಹಯ್ಯಾ ಸಿಂಗ್ ಮತ್ತು ಕ್ರಿಶ್ಕುಮಾರ್ (26) ಟ್ರಕ್ ಚಾಲಕರು ಅಡುಗೆ ಮಾಡಿಕೊಳ್ಳುತ್ತಿದ್ದ ಸಂದರ್ಭದಲ್ಲಿ ಮೂವರು ವ್ಯಕ್ತಿಗಳು ಅವರಿಗೆ ಕಿರುಕುಳ ನೀಡಲು ಆರಂಭಿಸಿದ್ದಾರೆ. ಅವರು ಚಾಲಕರು ಮಾಡಿದ ರೊಟ್ಟಿಗಳನ್ನು ಕಿತ್ತುಕೊಂಡು ಕನ್ಹಯ್ಯಾ ಸಿಂಗ್ ಬಳಿಯಿದ್ದ ಹಣವನ್ನು ನೀಡುವಂತೆ ಒತ್ತಡ ಹೇರಿದ್ದಾರೆ. ಕನ್ಹಯ್ಯಾ ನಿರಾಕರಿಸಿದಾಗ, ಮೂವರು ಗಲಾಟೆ ಮಾಡಿ ಟ್ರಕ್ನ ಹೆಡ್ಲೈಟ್ಗಳನ್ನು ಹಾಕಿ ದಾಂಧಲೆ ನಡೆಸಿದ್ದಾರೆ. ಮೂವರು ಸೇರಿ ಟ್ರಕ್ ಚಾಲಕರನ್ನು ಥಳಿಸಿದ್ದಾರೆ.
ಹಣ ಕೊಡುವವರೆಗೂ ಬಿಡುವುದಿಲ್ಲ ಎಂದು ಟ್ರಕ್ನ ಹಿಂದೆಯೇ ಕೂತು ಮೂವರು ವ್ಯಕ್ತಿಗಳು ಮದ್ಯ ಸೇವಿಸುತ್ತಾ ಕುಳಿತಿದ್ದಾರೆ. ಎಷ್ಟೇ ಮನವಿ ಮಾಡಿದರೂ ಪಟ್ಟು ಬಿಡದೆ ಇದ್ದುದ್ದರಿಂದ ಕೋಪಗೊಂಡ ಕನ್ಹಯ್ಯಾ ಟ್ರಕ್ನ್ನು ಅವರ ಮೇಲೆ ಹತ್ತಿಸಿದ್ದಾನೆ. ಇದರಿಂದ ಕುಮಾರನ್ ಸ್ಥಳದಲ್ಲೇ ಸಾವನ್ನಪ್ಪಿದ್ದು, ಕಮಲಾ ಕಣ್ಣನ್ ತಲೆಗೆ ತೀವ್ರ ಪೆಟ್ಟಾಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ.
ಗಂಭೀರವಾಗಿ ಗಾಯಗೊಂಡಿರುವ ನವೀನ್ ಸ್ಟಾನ್ಲಿ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
- ಮುಖಪುಟ
- ಮೈಸೂರು
- ಜಿಲ್ಲೆಗಳು
- ರಾಜ್ಯ
- ದೇಶ- ವಿದೇಶ
- ರಾಜಕೀಯ
- ಅಪರಾಧ
- ಮಹಿಳೆ
- ಕೃಷಿ
- ವಿಜ್ಞಾನ ತಂತ್ರಜ್ಞಾನ
- ಕ್ರೀಡೆ
- ವಾಣಿಜ್ಯ
- ಚಿತ್ರಸಂತೆ
- ವಿಶೇಷ
- ಆಂದೋಲನ ಪುರವಣಿ
- ಎಡಿಟೋರಿಯಲ್
- ಆಂದೋಲನ 50
- ಜಾಹೀರಾತು
- Cricket
Subscribe to Updates
Get the latest creative news from FooBar about art, design and business.
Previous Articleನಾಡಗೀತೆಗೆ ಅಪಮಾನ: ಚುಂಚನಗಿರಿಶ್ರೀ ನೇತೃತ್ವದಲ್ಲಿ ಪೂರ್ವಭಾವಿ ಸಭೆ