ರಾಜ್ಯ ಒಕ್ಕಲಿಗರ ಸಂಘದ ಅಧ್ಯಕ್ಷ ಸ್ಥಾನಕ್ಕೆ ಮಾಜಿ ನಿರ್ದೇಶಕ ಡಾ.ಕೆ.ಮಹದೇವ್ ಸ್ಪರ್ಧೆ

ಮೈಸೂರು: ರಾಜ್ಯ ಒಕ್ಕಲಿಗರ ಸಂಘದ ಚುನಾವಣೆ ಸದ್ಯದಲ್ಲಿಯೇ ನಡೆಯಲಿದ್ದು , ಸಂಘದ ಮಾಜಿ ನಿರ್ದೇಶಕ ಡಾ.ಕೆ.ಮಹದೇವ್ ಅಧ್ಯಕ್ಷ ಸ್ಥಾನಕ್ಕಾಗಿ ಚುನಾವಣೆಯಲ್ಲಿ ಸ್ಪರ್ಧಿಸಿದ್ದಾರೆ .

ಮೈಸೂರು ಪತ್ರಕರ್ತರ ಭವನದಲ್ಲಿಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, 2008 ರಲ್ಲಿ 8 ಕೋಟಿ ರೂ. ಸಾಲ ಹಿಂದಿರುಗಿಸಿ ಸಂಘವನ್ನು ಸಾಲಮುಕ್ತವೆಂದು ಘೋಷಣೆ ಮಾಡಿದ್ದೇನೆ. 25 ವರ್ಷಗಳಿಂದ ನೂತನ ಸದಸ್ಯತ್ವದ ಬೇಡಿಕೆ ಈಡೇರಿದೆ . ಅದೂ ಕೂಡ ಪಾರದರ್ಶಕವಾಗಿ ಬ್ಯಾಂಕ್ ಗಳ ಮೂಲಕ 5 ವರ್ಷಗಳ ಹೊಸ ಸದಸ್ಯತ್ವಕ್ಕೆ ಅವಕಾಶ ಮಾಡಿಕೊಟ್ಟಿದ್ದೇವೆ . ಪ್ರತಿಯೊಂದು ಜಿಲ್ಲೆಯಲ್ಲಿಯೂ ಹೆಣ್ಣು ಮಕ್ಕಳಿಗೆ ಉಚಿತ ವಸತಿ ವಿದ್ಯಾರ್ಥಿನಿಲಯಗಳನ್ನು ಕಟ್ಟಲು ಜಮೀನನ್ನು 10 ಕೋಟಿ ರೂ. ವೆಚ್ಚದಲ್ಲಿ ಖರೀದಿಸಲಾಗಿದೆ ಎಂದರು .

ನನ್ನ ನೇತೃತ್ವದ ತಂಡದಲ್ಲಿ ಸ್ಪರ್ಧಿಸಿರುವ ಡಾ.ಎಂ.ಜಿ.ಮಂಜೇಗೌಡ , ಕೆ.ವಿ.ಶ್ರೀಧರ್ ಅವರಿಗೂ ಮತವನ್ನು ನೀಡಿ ಜಯಶೀಲರಾಗುವಂತೆ ಮಾಡಬೇಕೆಂದು ಮನವಿ ಮಾಡಿದರು .

× Chat with us