ಮೈಸೂರು : ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡ ಅವರ ಸೊಸೆ ಭವಾನಿ ರೇವಣ್ಣ ಅವರ ಕಾರು ಅಪಘಾತವಾಗಿದ್ದು, ಕಾರಿಗೆ ಡಿಕ್ಕಿ ಹೊಡೆದ ಬೈಕ್ ಸವಾರನನ್ನು ಭವಾನಿ ರೇವಣ್ಣ ಅವರು ತರಾಟೆಗೆ ತೆಗೆದುಕೊಂಡಿದ್ದಾರೆ.
ನೆನ್ನೆ ಕೆಆರ್ ನಗರದ ಸಾಲಿಗ್ರಾಮದಿಂದ ಹೊಳೆ ನರಸಿಪುರದ ಕಡೆಗೆ ಹೊರಟಿದ್ದ ವೇಳೆ ರಾಮಪುರ ಗೇಟ್ ಬಳಿ ಭವಾನಿ ರೇವಣ್ಣ ಅವರ ಕಾರಿಗೆ ಎದುರಿನಿಂದ ಬಂದ ಬೈಕ್ ಸವಾರ ಡಿಕ್ಕಿ ಹೊಡೆದಿದ್ದಾನೆ. ಇದರಿಂದ ಕಾರಿನ ಮುಂಭಾಗ ಸ್ವಲ್ಪ ಸ್ಕ್ಯಾಚ್ ಆಗಿದೆ. ಇದರಿಂದ ರೊಚ್ಚಿಗೆದ್ದ ಭವಾನಿ ರೇವಣ್ಣ ಬೈಕ್ ಸವಾರನನ್ನು ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ.
ಸಾಯುವ ಹಾಗಿದ್ದರೆ ಬಸ್ಸಿಗೆ ಸಿಕ್ಕಾಕೊಂಡು ಸಾಯಬೇಕಿತ್ತು. ನೀನು ಸಾಯೋಕೆ ನನ್ನ ಕಾರೇ ಬೇಕಿತ್ತಾ ? ಡ್ಯಾಮೆಜ್ ಮಾಡೋಕೆ ನೀನ್ಯಾವೊನು. ಅವನು ಸತ್ರೆ ಸಾಯಲಿ. ನನ್ನ ಗಾಡಿ ಯಾರು ರಿಪೇರಿ ಮಾಡಿಸಿಕೊಡ್ತಾರೆ. ಈಗ ರಿಪೇರಿ ಮಾಡಿಸೋಕೆ ಐವತ್ತು ಲಕ್ಷ ಬೇಕು. ಒಂದುವರೆ ಕೋಟಿ ರೂಪಯಿಯ ಕಾರು ನನ್ನದು, ಅವನ ಗಾಡಿ ಸುಟ್ಟುಹಾಕಿ ಎಂದು ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಾರೆ.
ಈ ವೇಳೆ ಸ್ಥಳದಲ್ಲಿದ್ದವರು ಅಕ್ಕ ಗಾಡಿ ತೆಗೀರಿ ಹೋಗೋಣ ಎಂದಿದ್ದಾರೆ. ಇದಕ್ಕೆ ಭವಾನಿ ರೇವಣ್ಣ ಅವರು ಗಾಡಿ ತಗೊಂಡು ಏನ್ ಮಾಡೋಣ ರೀಪೇರಿ ಮಾಡೋಕೆ ಐವತ್ತು ಲಕ್ಷ ಬೇಕು ಕೊಡ್ತೀಯಾ ನೀನು ? ದುಡ್ಡು ಕೊಡುವ ಹಾಗಿದ್ದರೆ ನ್ಯಾನ ಮಾಡೋಕೆ ಬನ್ನಿ ಎಂದು ಸಂಯಮ ಮೀರಿ ಮಾತನಾಡಿದ್ದಾರೆ.
ಸಧ್ಯ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಫುಲ್ ವೈರಲ್ ಆಗುತ್ತಿದ್ದು, ಭವಾನಿ ರೇವಣ್ಣ ಅವರ ಆಕ್ರೋಶದ ನುಡಿಗಳನ್ನು ಸಾರ್ವಜನಿಕರು ಖಂಡಿಸಿದ್ದಾರೆ. ಆ ಬಡಜೀವಕ್ಕಿಂತ ಇವರ ಕಾರೇ ಹೆಚ್ಚಾಯ್ತಾ ಸಾರ್ವಜನಿಕ ಜೀವನದಲ್ಲಿರುವ ಇರುವ ಇವರ ಈ ರೀತಿಯ ಮಾತುಗಳು ಎಷ್ಟರ ಮಟ್ಟಿಗೆ ಸರಿ ಎಂದು ಪ್ರಶ್ನಿಸಿದ್ದಾರೆ.
ಮಂಡ್ಯ: ಶ್ರೀಕ್ಷೇತ್ರ ಆದಿಚುಂಚನಗಿರಿಯಲ್ಲಿ 100 ಕೋಟಿಗೂ ಅಧಿಕ ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಶ್ರೀಗುರು ಭೈರವೈಕ್ಯ ಮಂದಿರ ನಾಳೆ ಲೋಕಾರ್ಪಣೆಗೆ ಸಜ್ಜಾಗಿದೆ. ಪ್ರಧಾನಿ…
ನವದೆಹಲಿ: ದೇಶಾದ್ಯಂತ ರಣ ಬಿಸಿಲ ಝಳ ಹೆಚ್ಚುತ್ತಿದ್ದು, ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳಲ್ಲಿ ಒಂದು ವಾರಗಳ ಕಾಲ ತಾಪಮಾನ ಹೆಚ್ಚಾಗಲಿದೆ…
ಇಸ್ಲಾಮಾಬಾದ್: ಮಧ್ಯಪ್ರಾಚ್ಯ ಹಾಗೂ ಕೊಲ್ಲಿ ರಾಷ್ಟ್ರಗಳಲ್ಲಿ ನಡೆಯುತ್ತಿರುವ ಯುದ್ಧವನ್ನು ನಿಲ್ಲಿಸಲು ಇರಾನ್ ಮತ್ತು ಅಮೇರಿಕಾ ನಡುವೆ 2ನೇ ಸುತ್ತಿನ ಮಾತುಕತೆಗೆ…
ನವದೆಹಲಿ: ಇಂದು ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ 135ನೇ ಜನ್ಮ ಜಯಂತಿ. ಇದರ ಅಂಗವಾಗಿ ರಾಷ್ಟ್ರಪತಿ ದ್ರೌಪದಿ ಮುರ್ಮು, ಉಪರಾಷ್ಟ್ರಪತಿ…
ನವದೆಹಲಿ: ಈ ವರ್ಷ ದೇಶದಲ್ಲಿ ವಾಡಿಕೆಗಿಂತ ಕಡಿಮೆ ಮುಂಗಾರು ಮಳೆಯಾಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.…
ಬೆಂಗಳೂರು: ಸಿಎಂ ರಾಜಕೀಯ ಕಾರ್ಯದರ್ಶಿ ಹುದ್ದೆಗೆ ಎಂಎಲ್‌ಸಿ ನಜೀರ್ ಅಹಮ್ಮದ್ ಅವರು ರಾಜೀನಾಮೆ ನೀಡಿದ್ದಾರೆ. ನಜೀರ್ ಅಹಮ್ಮದ್ ಅವರು ಸಿಎಂ…