BREAKING NEWS

ಜೊಲ್ಲೆ ಕುಟುಂಬದ ಆಸ್ತಿ ಎಷ್ಟು ಗೊತ್ತಾ ?

ನಿಪ್ಪಾಣಿ : ನಿಪ್ಪಾಣಿ ಶಾಸಕಿ, ಮುಜರಾಯಿ ಸಚಿವೆ ಶಶಿಕಲಾ ಜಿಲ್ಲೆ ಅವರು ₹11.6 ಕೋಟಿ ಮೌಲ್ಯದ ಚರಾಸ್ತಿಗಳು ಹಾಗೂ ₹ 56.98 ಕೊಟಿ ಮೌಲ್ಯದ ಸ್ಥಿರಾಸ್ತಿಗಳು ಸೇರಿ ₹68.58 ಕೋಟಿ ಮೌಲ್ಯದ ಆಸ್ತಿ ಹೊಂದಿದ್ದಾರೆ. ಶಶಿಕಲಾ ಒಬ್ಬರಿಗೇ ₹1.03 ಕೋಟಿ ವಾರ್ಷಿಕ ಆದಾಯವಿದೆ.
ಶಶಿಕಲಾ ಹೆಸರಲ್ಲಿ ₹3.9 ಕೋಟಿ ಹಾಗೂ ಅವರ ಪತಿ ಅಣ್ಣಾಸಾಹೇಬ ಜೊಲ್ಲೆ ಹೆಸರಲ್ಲಿ ₹5.73 ಕೋಟಿ, ಪುತ್ರರ ಹೆಸರಲ್ಲಿ ₹1.17 ಕೋಟಿ ಹಾಗೂ ಇತರರ ಹೆಸರಲ್ಲಿ ₹26 ಲಕ್ಷ ಮೌಲ್ಯದ ಚರಾಸ್ತಿಗಳು ಇವೆ.
ಸಚಿವೆ ಹೆಸರಲ್ಲಿ ₹24.13 ಕೋಟಿಯ ಸ್ಥಿರಾಸ್ತಿ, ಪತಿ ಹೆಸರಲ್ಲಿ ₹15.04 ಕೋಟಿ, ಪುತ್ರನ ಹೆಸರಲ್ಲಿ ₹17.81 ಕೋಟಿ ಸೇರಿ ಒಟ್ಟು ₹ 56.98 ಕೋಟಿ ಮೌಲ್ಯದ ಸ್ಥಿರಾಸ್ತಿಗಳನ್ನು ಅವರ ಕುಟುಂಬ ಹೊಂದಿದೆ.ಅಲ್ಲದೇ, ₹42.81 ಲಕ್ಷ ಹಣ ಅವರ ಬ್ಯಾಂಕ್ ಖಾತೆಯಲ್ಲಿದೆ.

ಇಡೀ ಕುಟುಂಬದ ಖಾತೆಯಲ್ಲಿ ₹2.19 ಕೋಟಿ ಹಣವಿದೆ. ₹ 1.87 ಕೋಟಿ ಮೌಲ್ಯದ ವಿವಿಧ ಷೇರು ಹಾಗೂ ಬಾಂಡ್‌ಗಳನ್ನು ಅವರು ಖರೀದಿಸಿದ್ದು, ಕುಟುಂಬದಲ್ಲಿ ₹5.9 ಕೋಟಿ ಮೌಲ್ಯದ ಇಂಥ ಆಸ್ತಿ ಇದೆ. ಉಳಿತಾಯ ಹಾಗೂ ವಿಮೆಗಳ ಮೊತ್ತ ಸುಮಾರು ₹76.95 ಲಕ್ಷ.

ಶಶಿಕಲಾ ಅವರೇ ವಿವಿಧ ಬ್ಯಾಂಕುಗಳಿಂದ ₹ 80 ಲಕ್ಷ ವೈಯಕ್ತಿಕ ಸಾಲ ಹಾಗೂ ₹ 9.05 ಕೋಟಿ ವಿವಿಧ ಸಾಲಗಳನ್ನು ಪಡೆದಿದ್ದಾರೆ. ಕುಟುಂಬದ ತಲೆಯ ಮೇಲೆ ₹22.41 ಕೋಟಿ ಸಾಲವಿದೆ.

₹ 73 ಲಕ್ಷ ಮೌಲ್ಯದ ಚಿನ್ನಾಭರಣ ಹೊಂದಿದ್ದಾರೆ. ಕುಟುಂಬದಲ್ಲಿ ₹1.45 ಕೋಟಿಯ ಚಿನ್ನ ಹಾಗೂ ಬೆಳ್ಳಿ ಆರಭರಣಗಳಿವೆ. ವಿವಿಧ ಗ್ರಾಮಗಳಲ್ಲಿ ₹ 3.9 ಕೋಟಿ ಮೌಲ್ಯದ ಕೃಷಿ ಜಮೀನು ಶಶಿಕಲಾ ಹೊಂದಿದ್ದು, ₹ 11.76 ಕೋಟಿಯ ಜಮೀನು ಕುಟುಂಬಕ್ಕಿದೆ. ₹ 15.20 ಕೋಟಿಯ ವಾಣಿಜ್ಯ ಭೂಮಿಯನ್ನು ಶಶಿಕಲಾ ಹೊಂದಿದ್ದಾರೆ. ₹ 21.85 ಕೋಟಿ ಮೌಲ್ಯದ ವಾಣಿಜ್ಯ ಭೂಮಿ ಕುಟುಂಬಕ್ಕಿದೆ.

ಶಶಿಕಲಾ ಜೊಲ್ಲೆ ನೀಡಿದ ಆಸ್ತಿ ವಿವರದಲ್ಲಿ ಆಕಳು, ಎಮ್ಮೆ, ನಾಯಿಗಳೂ ಸೇರಿವೆ. ತಮ್ಮ ಬಳಿ 10 ಹೈಬ್ರೀಡ್‌ ಹಸುಗಳು, 17 ದೇಸಿ ಹಸುಗಳು, 6 ಎಮ್ಮೆ, ಒಂದು ಕುದುರೆ ಹಾಗೂ 4 ನಾಯಿಗಳು ಇವೆ ಎಂದೂ ಅವರು ಘೋಷಿಸಿಕೊಂಡಿದ್ದಾರೆ. ಆದರೆ, ಇವುಗಳ ಮೌಲ್ಯ ನಮೂದಿಸಿಲ್ಲ.

lokesh

Recent Posts

ಮುಡಾಗೆ ಆರ್ಥಿಕ ಸಂಕಷ್ಟ; 20 ಕೋಟಿ ರೂ ನಷ್ಟ

ಮೈಸೂರು: ಬದಲಿ ನಿವೇಶನ ಹಂಚಿಕೆ, ೫೦:೫೦ ಅನುಪಾತದಲ್ಲಿ ನಿವೇಶನ ಅಕ್ರಮ ಹಂಚಿಕೆ ಹಗರಣದಿಂದಾಗಿ ಇಡೀ ರಾಜ್ಯದ ಗಮನ ಸೆಳೆದಿರುವ ಮೈಸೂರು…

39 mins ago

ಆಂದೋಲನ ಫಲಶ್ರುತಿ: ಕೊನೆಗೂ ತೆರವಾಯ್ತು ಬೃಹತ್‌ ಮರದ ಕಾಂಡ

ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಜುಂಬೂ ಸವಾರಿ ಸಾಗುವ ಮಾರ್ಗದಲ್ಲಿ ಕಳೆದ ಎರಡೂ ವರ್ಷಗಳಿಂದ ಬಿದ್ದಿದ್ದ ಬೃಹತ್ ಮರದ ಕಾಂಡವನ್ನು…

49 mins ago

ಜಂಬೂ ಸವಾರಿ ಮಾರ್ಗದಲ್ಲಿ ಸಣ್ಣ ಬದಲಾವಣೆ

ಮೈಸೂರು: ಈ ಬಾರಿಯ ದಸರಾ ಮಹೋತ್ಸವದ ಜಂಬೂ ಸವಾರಿಯನ್ನು ವೀಕ್ಷಿಸಲು ಆಗಮಿಸಿದ ಎಲ್ಲರಿಗೂ ಚಿನ್ನದ ಅಂಬಾರಿ ನೋಡುವ ಅವಕಾಶ ಸಿಗಬೇಕು…

57 mins ago

ಪೈಲ್ವಾನರ ಕಸರತ್ತಿಗೆ ಗರಡಿ ಮನೆಗಳು ಸಜ್ಜು

ಮೈಸೂರು: ಸಾಂಸ್ಕೃತಿಕ ರಾಜಧಾನಿ, ಅರಮನೆಗಳ ನಗರಿ ಎಂದು ಕರೆಯುವ ಮೈಸೂರನ್ನು ಗರಡಿ ಮನೆಗಳ ನಗರಿ ಎಂದೂ ಇತ್ತೀಚಿನ ವರ್ಷಗಳಲ್ಲಿ ಕರೆಯುವುದು…

1 hour ago

ತಿ.‌ ನರಸೀಪುರ: ಬೈಕ್ ಡಿಕ್ಕಿ ಚಿರತೆ ಸಾವು

ತಿ. ನರಸೀಪುರ: ತಾಲೂಕಿನ ಬನ್ನೂರು ಹೋಬಳಿಯ ಬಸವನಹಳ್ಳಿ ಗ್ರಾಮದ ಸಮೀಪದ ಮುಖ್ಯರಸ್ತೆಯಲ್ಲಿ ದ್ವಿಚಕ್ರ ವಾಹನ ಚಿರತೆಗೆ ಡಿಕ್ಕಿ ಹೊಡೆದ ಪರಿಣಾಮ…

9 hours ago

ತಿರುಪತಿ ಲಡ್ಡು: ತುಪ್ಪದಲ್ಲಿ ಪ್ರಾಣಿ ಕೊಬ್ಬು ಬಳಕೆ

ಅಮರಾವತಿ: ಜಗತ್‌ ಪ್ರಸಿದ್ಧ ತಿರುಪತಿ ಲಡ್ಡು ಪ್ರಸಾದದಲ್ಲಿ ಪ್ರಾಣಿಗಳ ಕೊಬ್ಬು ಹಾಗೂ ಕಳಪೆ ಗುಣಮಟ್ಟದ ಪದಾರ್ಥಗಳು ಪತ್ತೆಯಾಗಿದೆ ಎಂದು ತೆಲುಗು…

11 hours ago