BREAKING NEWS

ಸುಧಾಕರ್​ ಅವರನ್ನು ಸೋಲಿಸಿದ್ದಕ್ಕೆ ಕಾಂಗ್ರೆಸ್​ ನಾಯಕರು ಹೇಗೆಲ್ಲ ಸಂಭ್ರಮಿಸಿದರು ಗೊತ್ತಾ? : ನೂತನ ಶಾಸಕ ಪ್ರದೀಪ್ ಈಶ್ವರ್

ಚಿಕ್ಕಳ್ಳಾಪುರ : ಪ್ರಭಾವಿ ಸಚಿವ ಡಾ ಕೆ ಸುಧಾಕರ್‌ ಅವರನ್ನು ಸೋಲಿಸಿರುವ ಪ್ರದೀಪ್‌ ಈಶ್ವರ್‌, ಶಾಸಕರಾಗಿ ಆಯ್ಕೆಯಾಗಿ ರಾಜ್ಯವೇ ಹುಬ್ಬೇರಿಸುವಂತೆ ಮಾಡಿದ್ದಾರೆ. ಕಾಂಗ್ರೆಸ್​ನ ನೂತನ ಶಾಸಕ ಪ್ರದೀಪ್ ಈಶ್ವರ್ ಮಾತಿನ ಶೈಲಿಗೆ ಎಲ್ಲರು ಫಿದಾ ಆಗಿದ್ದಾರೆ. ಅಲ್ಲದೇ ಇದೀಗ ಶಾಸಕರಾಗಿ ಆಯ್ಕೆಯಾದ ಐದು ದಿನ ಆಯಿತು ಅಷ್ಟೇ ಆಗಲಿ ಕ್ಷೇತ್ರದಲ್ಲಿ ಮನೆಮನೆ ರೌಂಡ್ಸ್​ ಹಾಕುತ್ತಿದ್ದಾರೆ. ಇಂದು ಮೊದಲಿಗೆ ಮೈಲಪ್ಪನಹಳ್ಳಿ ಗ್ರಾಮದಿಂದ ಮನೆ ಮನೆಗೆ ಭೇಟಿ ಆರಂಭಿಸಿದ್ದು, ಗ್ರಾಮಸ್ಥರ ಸಮಸ್ಯೆಗಳನ್ನು ಆಲಿಸುತ್ತಿದ್ದಾರೆ. ಇನ್ನು ಇದೇ ವೇಳೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಪ್ರದೀಪ್ ಈಶ್ವರ್, ಸುಧಾಕರ್ ಸೋಲಿಸಿದ್ದಕ್ಕೆ ಸಿದ್ದರಾಮಯ್ಯ ಹಾಲುಕುಡಿದಷ್ಟು ಖುಷಿಪಟ್ಟರು ಎಂದರು.

ಚಿಕ್ಕಬಳ್ಳಾಪುರ ತಾಲ್ಲೂಕಿನ ಮೈಲಪ್ಪನಹಳ್ಳಿ ಗ್ರಾಮದಲ್ಲಿ ಪ್ರದೀಪ್ ಈಶ್ವರ್ ಮಾತನಾಡಿದ ಪ್ರದೀಪ್ ಈಶ್ವರ್, ಡಿ.ಕೆ.ಶಿವಕುಮಾರ್ ನನ್ನನ್ನು ಅಭಿನಂದಿಸಿ ಆಶೀರ್ವಾದ ಮಾಡಿದರು. ಕೆ.ಸಿ.ವೇಣುಗೋಪಾಲ್ ತಬ್ಬಿಕೊಂಡು ಸಂತೋಷ ಹಂಚಿಕೊಂಡರು. ಸುಧಾಕರ್ ವಿರುದ್ಧ ಗೆದ್ದಿದ್ದಕ್ಕೆ ನನ್ನನ್ನು ಸೆಲೆಬ್ರಿಟಿ ರೀತಿ ನೋಡುತ್ತಿದ್ದಾರೆ. ಜನರ ಪ್ರೀತಿ ಅಭಿಮಾನ ವಿಶ್ವಾಸಕ್ಕೆ ಚಿರಋಣಿ. ನಾನು ನಿರಂತರವಾಗಿ ಕ್ಷೇತ್ರದ ಜನರ ಜೊತೆ ಇರಲು ಬಯಸುತ್ತೇನೆ. ಚಿಕ್ಕಬಳ್ಳಾಪುರ ಕ್ಷೇತ್ರದ ಜನರ ಕಷ್ಟ, ಸುಖದಲ್ಲಿ ಭಾಗಿಯಾಗುತ್ತೇನೆ ಎಂದು ಹೇಳಿದರು.

ನನ್ನ ಕಾರು ಅಡ್ಡ ನಿಲ್ಲಿಸಿ ಜನ ಸೆಲ್ಫೀ ತೆಗೆದುಕೊಳ್ಳುತ್ತಿದ್ದಾರೆ. ಮಾಜಿ ಶಾಸಕರಂತೆ ನಾನು ಅಹಂಕಾರ ಪಡುವವನಲ್ಲ. ನಾನು ನಿರಂತರ ಜನರ ಜೊತೆ ಇರಲು ಬಯಸುತ್ತೇನೆ . ಜನರ ಕಷ್ಟ ಸುಖಗಳಿಗೆ ಬಾಗಿಯಾಗುತ್ತೇನೆ. ಮಾದರಿ ಶಾಸಕನಾಗಲು ಅಧ್ಯಯನ ನಡೆಸಿದ್ದೇನೆ ಎಂದು ಎಂದರು.

ಇಡೀ ರಾಜ್ಯ ಚಿಕ್ಕಬಳ್ಳಾಪುರ ಕ್ಷೇತ್ರದ ಕಡೆ ನೋಡುತ್ತಿದೆ. ಕಾರಣ ಪ್ರಭಾವಿ ಸಚಿವ ಡಾ ಕೆ ಸುಧಾಕರ್‌ ಅವರನ್ನು ಸೋಲಿಸಿರುವ ಪ್ರದೀಪ್‌ ಈಶ್ವರ್‌. ಏಳೆಂಟು ವರ್ಷಗಳ ಹಿಂದೆ ನಗರದಲ್ಲಿ ಸಾಮಾನ್ಯನಾಗಿ ಓಡಾಡಿಕೊಂಡಿದ್ದ ಹುಡುಗ ಪ್ರಭಾವಿ ಸಚಿವರನ್ನು ಮಣಿಸಿ ಶಾಸಕರಾಗಿ ಆಯ್ಕೆಯಾಗಿ ರಾಜ್ಯವೇ ಹುಬ್ಬೇರಿಸುವಂತೆ ಮಾಡಿದ್ದಾರೆ.

ತಮ್ಮ ತೆಲುಗು ಡೈಲಾಗ್‌ಗಳಿಂದಲೇ ಚುನಾವಣಾ ಪ್ರಚಾರದ ವೇಳೆ ಪ್ರದೀಪ್‌ ಈಶ್ವರ್‌ ಗಮನ ಸೆಳೆದಿದ್ದರು. ಸಚಿವ ಡಾ. ಕೆ ಸುಧಾಕರ್‌ ಅವರಿಗೆ ಚುನಾವಣಾ ಕಣದಲ್ಲಿ ತಕ್ಕ ತಿರುಗೇಟು ನೀಡಿದ್ದರು. ಅದರ ಪರಿಣಾಮವೇ ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದಲ್ಲಿ ಈ ಬಾರಿ ಇಡೀ ರಾಜ್ಯವೇ ನೋಡುವಂತಹ ಫಲಿತಾಂಶ ಹೊರಬಿದ್ದಿದೆ. ಚಿಕ್ಕಬಳ್ಳಾಪುರದ ಜನ ಈ ಬಾರಿ ಬದಲಾವಣೆ ಬಯಸಿ ಪ್ರದೀಪ್‌ ಈಶ್ವರ್‌ ಅವರನ್ನು ಗೆಲ್ಲಿಸಿದ್ದಾರೆ.

lokesh

Recent Posts

ರೈಲ್ವೆ ಮೇಲ್ಸೇತುವೆ; ಭೂ ದರ ಕಗ್ಗಂಟು ಬಗೆಹರಿಯುವುದೇ?

ಚಾಮರಾಜನಗರ: ಚಾ.ನಗರ-ನಂಜನಗೂಡು ಹೆದ್ದಾರಿಯಲ್ಲಿರುವ ಪಣ್ಯದಹುಂಡಿ ಬಳಿ ರೈಲ್ವೆ ಮೇಲ್ಸೇತುವೆ ನಿರ್ಮಾಣಕ್ಕೆ ಸ್ವಾಧಿನಪಡಿಸಿಕೊಂಡಿರುವ ಭೂಮಿಯ ದರ ನಿಗದಿ ಕಗ್ಗಂಟಿನ ವಿಚಾರ ಅಂತಿಮ…

2 hours ago

ಜನವರಿಗೆ ಚಾ.ಬೆಟ್ಟದ ಅಭಿವೃದ್ಧಿ ಕಾಮಗಾರಿ ಶುರು

ಮೈಸೂರು: ಪ್ರಸಿದ್ಧ ಯಾತ್ರಾ ಸ್ಥಳ ಚಾಮುಂಡಿ ಬೆಟ್ಟದ ಸಮಗ್ರ ಅಭಿವೃದ್ಧಿ ಕಾಮಗಾರಿಯು ಕೇಂದ್ರ ಸರ್ಕಾರದ ಪ್ರಸಾದ ಯೋಜನೆಯಡಿ ಜನವರಿ ಮೊದಲ…

2 hours ago

ಕೋಳಿ ಮೊಟ್ಟೆಗೆ ಬರ: ಏರಿದ ದರ

ಗಿರೀಶ್ ಹುಣಸೂರು ಬಿಡಿ ಮೊಟ್ಟೆಗೆ ೭.೫೦ ರೂ.; ರಫ್ತು ಹೆಚ್ಚಳದಿಂದ ಭಾರೀ ಹೊಡೆತ  ಮೈಸೂರು: ಮಾಗಿ ಚಳಿಗಾಲ ಆರಂಭ, ಚಂಡಮಾರುತದಿಂದ ಹವಾಮಾನ…

3 hours ago

ಹಣ ದ್ವಿಗುಣಗೊಳಿಸುವುದಾಗಿ ೨೮ ಲಕ್ಷ ರೂ. ವಂಚನೆ; ದೂರು ದಾಖಲು

ಕೊಳ್ಳೇಗಾಲ: ಹಣ ದ್ವಿಗುಣಗೊಳಿಸಿಕೊಡುವುದಾಗಿ ಆಮಿಷ ಒಡ್ಡಿ, ಒಟ್ಟು ೨೮.೮೮ ಲಕ್ಷ ರೂ.ಗಳನ್ನು ವಂಚಿಸಿರುವ ಬಗ್ಗೆ ಪಟ್ಟಣ ಪೊಲೀಸ್ ಠಾಣೆಯಲ್ಲಿ ಮಮತಾ…

12 hours ago

ಅಂಬಳೆ: ಚಾಮುಂಡೇಶ್ವರಿ ದೇಗುಲದಲ್ಲಿ ಕಳ್ಳತನ

ಯಳಂದೂರು:ತಾಲ್ಲೂಕಿನ ಅಂಬಳೆ ಗ್ರಾಮದಲ್ಲಿರುವ ಸುವರ್ಣಾವತಿ ನದಿ ದಡಲ್ಲಿರುವ ಐತಿಹಾಸಿಕ ಚಾಮುಂಡೇಶ್ವರಿ ದೇಗುದಲ್ಲಿ ಗುರುವಾರ ರಾತ್ರಿ ಕಳ್ಳತನ ನಡೆದಿದ್ದು, ಲಕ್ಷಾಂತರ ರೂ.…

12 hours ago