ಕ್ಷುಲ್ಲಕ ಕಾರಣಕ್ಕೆ ವ್ಯಾಪಾರಿಯೊಂದಿಗೆ ತಕರಾರು; ೧.೮ ಲಕ್ಷ ರೂ ಕಸಿದು ಪರಾರಿ!

ಮೈಸೂರು: ಬೈಕ್‌ನಲ್ಲಿ ಚಲಿಸುತ್ತಿದ್ದ ಸ್ಥಳೀಯ ವ್ಯಾಪಾರಿಯನ್ನು ಮಧ್ಯರಸ್ತೆಯಲ್ಲೇ ಅಡ್ಡಗಟ್ಟಿದ ಸುಲಿಗೆಕೋರರು, 1.8 ಲಕ್ಷ ರೂ. ಕಸಿಕೊಂಡು ಪರಾರಿಯಾಗಿರುವ ಘಟನೆ ನಗರದ ದಳವಾಯಿ ಶಾಲೆಬಳಿ ನಡೆದಿದೆ.

ನಗರದ ಬಂಡ್ಯಪಾಳ್ಯದಲ್ಲಿ ಮಾತಾಜಿ ಟ್ರೇಡಿಂಗ್‌ ನಡೆಯುತ್ತಿರುವ ಚಾಮರಾಜ ಮೊಹಲ್ಲಾದ ನಿವಾಸಿ ಪ್ರೇಮ್‌ಕುಮಾರ್‌ ಎಂಬವರು, ಬುಧವಾರ ವ್ಯಾಪಾರ ಮುಗಿಸಿಕೊಂಡುಮನೆಗೆ ತೆರಳುತ್ತಿದ್ದರು. ಅಂಗಡಿಯಿಂದಲೂ ಹಿಂಬಾಲಿಸಿದ ಸುಲಿಗೆಕೋರರು ಮೈಸೂರಿನ ದಳವಾಯಿ ಶಾಲೆ ಬಳಿ ಎರಡು ಬೈಕ್‌ಗಳಲ್ಲಿ ಅಡ್ಡಗಟ್ಟಿದ್ದಾರೆ. ತಕರಾರು ತೆಗೆದು ಆತನನ್ನು ಕೆಳಕ್ಕೆ ಬೀಳಿಸಿದ್ದಾರೆ. ಬಳಿಕ ರಸ್ತೆಬದಿಗೆ ಎಳೆದುಕೊಂಡು ಹೋಗಿ ಹಲ್ಲೆ ನಡೆಸಿದ್ದಾರೆ.

ಮತ್ತೊಬ್ಬ ಸ್ಕೂಟರ್‌ನ ಕೀ ತೆಗೆದುಕೊಂಡು ಡಿಕ್ಕಿಯಲ್ಲಿ ಇರಿಸಿದ್ದ 1.8 ಲಕ್ಷ ರೂ. ಎತ್ತಿಕೊಂಡ ಹಲ್ಲೆ ಮಾಡಿದ್ದಾನೆ. ಈ ಎಲ್ಲಾ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿವೆ. ವಿಷಯ ತಿಳಿದು ಸ್ಥಳಕ್ಕೆ ಭೇಟಿ ನೀಡಿದ ಕೆ.ಆರ್.ಠಾಣೆಯ ಪೊಲೀಸರು ಸಿಸಿ ಟಿವಿ ಕ್ಯಾಮೆರಾದಲ್ಲಿ ಸೆರೆಯಾದ ದೃಶ್ಯಗಳನ್ನು ಗಮನಿಸಿದ್ದಾರೆ. ಈ ಸಂಬಂಧ ವ್ಯಾಪಾರಿ ಪ್ರೇಮ್‌ಕುಮಾರ್‌ ದೂರು ನೀಟಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.

× Chat with us