ಮೈಸೂರಿನಲ್ಲಿ ಇಂದ್ರಜಿತ್‌ ಲಂಕೇಶ್‌ ತುರ್ತು ಪತ್ರಿಕಾಗೋಷ್ಠಿ ಇಂದು: ಆಂದೋಲನ ಫೇಸ್‌ಬುಕ್‌ ಲೈವ್‌ ವೀಕ್ಷಿಸಿ

ಮೈಸೂರು: ಚಿತ್ರ ನಿರ್ದೇಶಕ ಇಂದ್ರಜಿತ್‌ ಲಂಕೇಶ್‌ ಅವರು ಇಂದು (ಶುಕ್ರವಾರ) ಸಿಪಾಯಿ ಗ್ರಾಂಡ್‌ ಡೇ ಹೋಟೆಲ್‌ನಲ್ಲಿ ಬೆಳಿಗ್ಗೆ 10.30ಕ್ಕೆ ಪತ್ರಿಕಾಗೋಷ್ಠಿ ನಡೆಸಲಿದ್ದಾರೆ.

ನಟಿಯರಾದ ರಾಗಿಣಿ ದ್ವಿವೇದಿ ಮತ್ತು ಸಂಜನಾ ಗಲ್ರಾನಿ ಅವ ಡ್ರಗ್‌ ಸೇವಿಸುತ್ತಿದ್ದುದು ದೃಢಪಟ್ಟಿದೆ. ಸ್ಯಾಂಡಲ್‌ವುಡ್‌ನ ಡ್ರಗ್‌ ಮಾಫಿಯಾ ಬಗ್ಗೆ ಇಂದ್ರಜಿತ್‌ ಲಂಕೇಶ್‌ ಧ್ವನಿ ಎತ್ತಿದ್ದರು. ಇದರಿಂದ ಯುವಸಮುದಾಯ ಹಾಳಾಗುತ್ತಿದೆ ಎಂದು ಗೃಹ ಸಚಿವರಿಗೆ ದೂರನ್ನೂ ಸಹ ನೀಡಿದ್ದರು. ಈ ಕುರಿತು ಸುದ್ದಿಗೋಷ್ಠಿಯಲ್ಲಿ ಪ್ರಸ್ತಾಪಿಸುವ ಸಾಧ್ಯತೆ ಇದೆ.

ಅಲ್ಲದೇ, ಮೈಸೂರಿನಲ್ಲಿ ಇತ್ತೀಚೆಗೆ ಅಪರಾಧ ಪ್ರಕರಣಗಳು ಎಗ್ಗಿಲ್ಲದೇ ನಡೆಯುತ್ತಿದ್ದು, ಪೊಲೀಸ್‌ ಇಲಾಖೆ ಬಗ್ಗೆ ಸಾರ್ವಜನಿಕವಾಗಿ ಅಸಮಾಧಾನಗಳು ವ್ಯಕ್ತವಾಗುತ್ತಿವೆ. ಒಮ್ಮೆ ನಟ ದರ್ಶನ್‌ ಅವರು ಮೈಸೂರಿನ ಹೋಟೆಲ್‌ವೊಂದರ ವೇಟರ್‌ ಮೇಲೆ ಹಲ್ಲೆ ನಡೆಸಿದ್ದರು ಎಂದು ಆರೋಪಿಸಿದ್ದ ಇಂದ್ರಜಿತ್‌ ಲಂಕೇಶ್‌, ಮೈಸೂರು ಪೊಲೀಸ್‌ ಅಧಿಕಾರಿಗಳನ್ನೂ ತರಾಟೆಗೆ ತೆಗೆದುಕೊಂಡಿದ್ದರು. ಬಡಜನರಿಗೆ ರಕ್ಷಣೆ ನೀಡುವಲ್ಲಿ ಮೈಸೂರು ಪೊಲೀಸರು ವಿಫಲರಾಗಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದರು. ಈ ಎರಡು ಪ್ರಮುಖ ವಿಚಾರಗಳನ್ನು ಪತ್ರಿಕಾಗೋಷ್ಠಿಯಲ್ಲಿ ಇಂದ್ರಜಿತ್‌ ಲಂಕೇಶ್‌ ಪ್ರಸ್ತಾಪಿಸಲಿದ್ದಾರೆ ಎನ್ನಲಾಗುತ್ತಿದೆ.

× Chat with us