ಹಿಮಚ್ಛಾದಿತ ಲೇಹ್ ಸೌಂದರ್ಯವನ್ನು ಸವಿಯುವುದು ಪ್ರವಾಸಿಗರಿಗೆ ಇನ್ನು ಸುಲಭ. ಈ ಹಿಂದೆ ಕಿರಿದಾದ ರಸ್ತೆಗಳಲ್ಲಿ ಸಾಗುತ್ತಿದ್ದ ಪ್ರವಾಸಿಗರು, ಇನ್ನು ಮುಂದೆ ಯಾವುದೇ ಭಯವಿಲ್ಲದೇ ಬಸ್‌ನಲ್ಲಿ ಸುರಕ್ಷಿತವಾಗಿ ಪ್ರಕೃತಿಯ ಸೌಂದರ್ಯ ಸವಿಯುತ್ತಾ ದೆಹಲಿಯಿಂದ ಕೇಂದ್ರಾಡಳಿತ ಪ್ರದೇಶವಾದ ಲಡಾಖ್‌ನ ಲೇಹ್ ತಲುಪಬಹುದು.
ಜೂ.15ರಂದು ಬಸ್ ಸೇವೆ ಆರಂಭ
ಹಿಮಾಚಲ ರಸ್ತೆ ಸಾರಿಗೆ ನಿಗಮ(ಎಚ್‌ಆರ್‌ಟಿಸಿ)ವು ದೆಹಲಿಯಿಂದ ಲೇಹ್‌ಗೆ ಜೂ.15ರಿಂದ ಬಸ್ ಸೇವೆ ಆರಂಭಿಸಲಿದೆ. ಈ ಹಿಂದೆ ಪ್ರವಾಸಿಗರು ದೆಹಲಿ ತಲುಪಿ, ಅಲ್ಲಿಂದ ವಿಮಾನದ ಮೂಲಕ ಅಥವಾ ಟ್ಯಾಕ್ಸಿ ಅಥವಾ ಕಾರಿನ ಮೂಲಕ ಕಿರಿದಾದ ರಸ್ತೆಯಲ್ಲಿ ಲೇಹ್ ತಲುಪಬೇಕಿತ್ತು. ಕೆಲವರು ಬುಲೆಟ್ ರೀತಿಯ ಬೈಕ್‌ಗಳಲ್ಲೂ ಹೋಗುತ್ತಿದ್ದರು. ಈಗ ಮೊಟ್ಟ ಮೊದಲ ಬಾರಿಗೆ ದೆಹಲಿಯಿಂದ ಲೇಹ್‌ಗೆ ನೇರ ಬಸ್ ಸೇವೆ ಆರಂಭಿಸಲಾಗುತ್ತಿದೆ. ಇದಕ್ಕಾಗಿ ರಸ್ತೆಯನ್ನು ವಿಸ್ತರಿಸಲಾಗಿದೆ.
ಮನಮೋಹಕ ಪ್ರಕೃತಿ ಸವಿಯುವ ಅವಕಾಶ
ಈ ಬಸ್ ಮಾರ್ಗವು ಮನಾಲಿ-ಲೇಹ್ ಹೆದ್ದಾರಿ ಮೂಲಕ ಸಾಗಲಿದೆ. ಈ ಮಾರ್ಗದಲ್ಲಿ ಪ್ರಕೃತಿ ಮನಮೋಹಕವಾಗಿದ್ದು, ನೋಡುಗರಿಗೆ ರಸಾನುಭವ ಉಣಿಸಲಿದೆ. ಹಿಮಾಲಯ ಪರ್ವತ ಶ್ರೇಣಿಗಳ ಮೂಲಕ ಹಾದುಹಾಗುವ ಈ ಮಾರ್ಗವು, ಬರಲಚಾ ಪಾಸ್, ನಕೀಲ ಪಾಸ್, ತಗ್ಲಾಂಗ್ ಲಾ ಪಾಸ್ ಸೇರಿದಂತೆ ಅನೇಕ ಮಾರ್ಗಗಳ ಮೂಲಕ ಸಾಗಲಿದೆ. ತಗ್ಲಾಂಗ್ ಲಾ ಪಾಸ್ ಸಮುದ್ರ ಮಟ್ಟದಿಂದ 17,582 ಅಡಿ ಎತ್ತರದಲ್ಲಿದೆ.
ಪ್ರಯಾಣದ ಸಮಯ
ಪ್ರತಿ ದಿನ ಮಧ್ಯಾಹ್ನ 3.30ಕ್ಕೆ ದೆಹಲಿ ಅಂತಾರಾಜ್ಯ ಬಸ್ ನಿಲ್ದಾಣದಿಂದ ಹೊರಡುವ ಬಸ್, ಮಾರ್ಗಮಧ್ಯೆ ಕಿಲಾಂಗ್‌ನಲ್ಲಿ ಹಾಲ್ಟ್ ಆಗಲಿದ್ದು, ಮಾರನೇ ದಿನ ಸಂಜೆ 6 ಗಂಟೆಗೆ ಲೇಹ್ ತಲುಪಲಿದೆ. ಸುಖಾಸನಗಳು, ಹವಾನಿಯಂತ್ರಿತ ವ್ಯವಸ್ಥೆ ಮತ್ತು ಶೌಚಾಲಯ ವ್ಯವಸ್ಥೆಯೂ ಬಸ್‌ನಲ್ಲಿರಲಿವೆ.
……………….
ಬಸ್ ಟಿಕೆಟ್ ದರವೆಷ್ಟು?– 1,500 ರೂ.
ದೆಹಲಿಯಿಂದ ಲೇಹ್‌ಗೆ ಇರುವ ದೂರ– 1,072 ಕಿ.ಮೀ.
ತಗ್ಲಾಂಗ್ ಲಾ ಪಾಸ್ ಎಷ್ಟು ಎತ್ತರದಲ್ಲಿದೆ?- 17,582 ಅಡಿ
ಮಂಡ್ಯ: ನಾಗಮಂಗಲ ತಾಲೂಕು ಯರಗಟ್ಟಿ ಗೇಟ್ ಬಳಿ ಶುಕ್ರವಾರ ರಾತ್ರಿ ಅಪಘಾತಕ್ಕೊಳಗಾದ ಸ್ಕಾರ್ಪಿಯೋ ಕಾರಿನಲ್ಲಿ ಮೃತಪಟ್ಟಿರುವ ಹತ್ತಕ್ಕೂ ಹೆಚ್ಚು ಕರುಗಳು…
ಮದ್ದೂರು: ದುಷ್ಕರ್ಮಿಗಳು ದೇವಾಲಯಗಳ ಬಾಗಿಲು ಮುರಿದು ಸರಣಿ ಕಳ್ಳತನ ಮಾಡಿರುವ ಘಟನೆ ತಾಲ್ಲೂಕಿನ ಕೆಸ್ತೂರು ಪೊಲೀಸ್ ಠಾಣೆ ವ್ಯಾಪ್ತಿಯ ಅಡಗನಹಳ್ಳಿ…
ಮೈಸೂರು : ಎನ್‌ಸಿಬಿ ಪೊಲೀಸರು ನಗರದ ಹೆಬ್ಬಾಳು ಕೈಗಾರಿಕಾ ಪ್ರದೇಶದ ರಾಸಾಯನಿಕ ತಯಾರಿಕಾ ಘಟಕದ ಮೇಲೆ ದಾಳಿ ನಡೆಸಿದ ನಂತರ…
ಚಿಕ್ಕಬಳ್ಳಾಪುರ : ಶಿಡ್ಲಘಟ್ಟ ನಗರಸಭೆ ಪೌರಾಯುಕ್ತೆ ಅಮೃತಾ ಗೌಡ ಅವರಿಗೆ ಬೆದರಿಕೆ ಹಾಕಿದ್ದ ಪ್ರಕರಣದಲ್ಲಿ ಆರೋಪಿ ರಾಜೀವ್ ಗೌಡಗೆ ಜಾಮೀನು…
ಬೆಂಗಳೂರು : ದಕ್ಷಿಣ ಭಾರತದ ಪ್ರಮುಖ ರಿಯಲ್ ಎಸ್ಟೇಟ್ ಕಂಪನಿ ಕಾನ್ಫಿಡೆಂಟ್ ಗ್ರೂಪ್‌ನ ಸ್ಥಾಪಕ ಮತ್ತು ಚೇರ್ಮನ್ ಡಾ.ಸಿ.ಜೆ. ರಾಯ್…
ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮತ್ತು ಇತರ ಸಚಿವರನ್ನು ಗುರಿಯಾಗಿಸಿಕೊಂಡು ‘ಮಾನಹಾನಿಕರ’ ಪೋಸ್ಟ್‌ನ್ನು ಬಿಜೆಪಿಯ ‘ಎಕ್ಸ್’ ಖಾತೆಯಲ್ಲಿ…