ಪಿರಿಯಾಪಟ್ಟಣ ತಾಲ್ಲೂಕಿನ ಅಳ್ಳೂರು ಬಳಿ ದುರ್ಘಟನೆ, ಆರೋಪಿ ರೈತನ ಬಂಧನ
ಮೈಸೂರು: ಸತತ 13 ವರ್ಷಗಳ ಕಾಲ ಅಂಬಾರಿ ಹೊತ್ತು ಮುನ್ನಡೆದಿದ್ದ ಬಲರಾಮ ಗುಂಡೇಟು ತಗುಲಿ ಗಾಯಗೊಂಡಿದ್ದಾನೆ. ಕಾಡಾನೆ ಎಂದು ಭಾವಿಸಿ ರೈತರೊಬ್ಬರು ಹಾರಿಸಿದ ಗುಂಡು ದಸರಾ ಆನೆಯ ಹೊಟ್ಟೆ ಭಾಗಕ್ಕೆ ತಗುಲಿದೆ. ಅದೃಷ್ಟವಶಾತ್ ಬಲರಾಮ ಪ್ರಾಣಾಪಾಯದಿಂದ ಪಾರಾಗಿದ್ದಾನೆ.
ಹುಣಸೂರು ವನ್ಯಜೀವಿ ವಲಯದ ಪಿರಿಯಾಪಟ್ಟಣ ತಾಲ್ಲೂಕಿನ ಅಳ್ಳೂರು ಬಳಿ ಗುರುವಾರ ರಾತ್ರಿ ಈ ಘಟನೆ ಸಂಭವಿಸಿದೆ. ಆರೋಪಿ ಸುರೇಶ್ ನನ್ನು ಬಂಧಿಸಲಾಗಿದ್ದು, ಕೋರ್ಟ್ ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿದೆ.
ಗುರುವಾರ ಮೇಯಲು ಬಿಟ್ಟ ಆನೆ ಶಿಬಿರಕ್ಕೆ ಮರಳಿರಲಿಲ್ಲ. ಹುಡುಕಿಕೊಂಡು ಹೋದಾಗ ಬಲರಾಮ ಗಾಯಗೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದ. ತಕ್ಷಣ ಆನೆಯನ್ನು ಭೀಮನಕಟ್ಟೆ ಶಿಬಿರಕ್ಕೆ ಕರೆ ತಂದು ಪ್ರಾಥಮಿಕ ಚಿಕಿತ್ಸೆ ನೀಡಲಾಯಿತು. ಕಾಡತೂಸು ಬಳಸಿ ಗುಂಡು ಹಾರಿಸಲಾಗಿದ್ದು ಬಲರಾಮನ ಹೊಟ್ಟೆಯ ಭಾಗಕ್ಕೆ ಗುಂಡೇಟು ತಗುಲಿದೆ. ಗುಂಡಿನ ಭಾಗಗಳನ್ನು ದೇಹದಿಂದ ತೆಗೆಯಲಾಗಿದ್ದು ಆತಂಕಪಡುವ ಅಗತ್ಯವಿಲ್ಲ ಹುಣಸೂರು ವನ್ಯಜೀವಿ ವಿಭಾಗದ ಡಿಸಿಎಫ್ ಹರ್ಷಕುಮಾರ್ ಚಿಕ್ಕನರಗುಂದ ಆಂದೋಲನಕ್ಕೆ ತಿಳಿಸಿದ್ದಾರೆ.
ಮೈಸೂರು ಜಿಲ್ಲೆ ಹುಣಸೂರು ತಾಲೂಕಿನ ಮತ್ತಿಗೋಡು ಶಿಬಿರದಲ್ಲಿದ್ದ ಗೋಪಾಲಸ್ವಾಮಿ ಹೆಸರಿನ ಆನೆ ಕಳೆದ ತಿಂಗಳು (ನವೆಂಬರ್ 23) ಕಾಡಾನೆ ದಾಳಿಯಿಂದ ಮೃತಪಟ್ಟ ಬೆನ್ನಿಗೇ ಈ ದುರ್ಘಟನೆ ಸಂಭವಿಸಿದೆ.
ಅತ್ಯಂತ ಶಾಂತ ಸ್ವಭಾವದ 64 ವರ್ಷ ವಯಸ್ಸಿನ ಬಲರಾಮ ಈ ಬಾರಿಯೂ ದಸರಾ ಮಹೋತ್ಸವದಲ್ಲಿ ಪಾಲ್ಗೊಂಡಿತ್ತು. 1996ರಿಂದ ದಸರಾದಲ್ಲಿ ನಿರಂತರವಾಗಿ ಪಾಲ್ಗೊಳ್ಳುತ್ತಿರುವ ಬಲರಾಮ 1999ರಿಂದ 2011ರ ತನಕ ನಿರಂತರವಾಗಿ 13 ವರ್ಷಗಳ ಕಾಲ ಅಂಬಾರಿ ಹೊತ್ತು ಮುನ್ನಡೆದಿದ್ದ.
ದ್ರೋಣನ ಸಾವಿನ ಬಳಿಕ ಮೊದಲ ಬಾರಿ ಅರ್ಜುನ ಅಂಬಾರಿ ಹೊತ್ತು ನಡೆದಿದ್ದ. ಆದರೆ ಮಾವುತನನ್ನು ಸಾಯಿಸಿದ ಹಿನ್ನೆಲೆಯಲ್ಲಿ ಅರ್ಜುನನ ಬದಲು ಬಲರಾಮನಿಗೆ ಈ ಜವಾಬ್ದಾರಿ ಹೊರಿಸಲಾಗಿತ್ತು. ಬಲಗಣ್ಣಿನ ದೋಷವಿದ್ದರೂ ಬಲರಾಮ 13 ವರ್ಷಗಳ ಕಾಲ ಯಶಸ್ವಿಯಾಗಿ ತನ್ನ ಜವಾಬ್ದಾರಿಯನ್ನು ನಿಭಾಯಿಸಿದ್ದ. ವಯಸ್ಸಿನ ಕಾರಣಕ್ಕೆ ಅಂಬಾರಿ ಹೊಣೆಯಿಂದ ವಿಮುಕ್ತನಾದರೂ ಬಲರಾಮ ಈಗಲೂ ದಸರಾ ಗಜಪಡೆಯ ಕಾಯಂ ಸದಸ್ಯನಾಗಿ ಮುಂದುವರಿದಿದ್ದಾನೆ.
ಬೆಂಗಳೂರು: ಇಲ್ಲಿನ ಡಿ.ಜೆ.ಹಳ್ಳಿ ಬಳಿಯ ಶಾಂಪುರ ರಸ್ತೆಯಲ್ಲಿ ಕಿಡಿಗೇಡಿಯೊಬ್ಬ ಬೆಂಕಿ ಹಚ್ಚಿ ಆರು ಹಸುಗಳನ್ನು ಸಜೀವ ದಹನ ಮಾಡಿದ್ದ ಪ್ರಕರಣಕ್ಕೆ…
ನವದೆಹಲಿ: ಇದೇ ಏಪ್ರಿಲ್.15ರಿಂದ ಈ ವರ್ಷದ ಅಮರನಾಥ ಯಾತ್ರೆಗೆ ಮುಂಗಡ ನೋಂದಣಿ ಆರಂಭವಾಗಲಿದೆ. ಭಾರತದಾದ್ಯಂತ ಒಂದೇ ಸಮಯಕ್ಕೆ ಬುಕಿಂಗ್ ಪ್ರಾರಂಭವಾಗಲಿದ್ದು,…
ಕೊಡಗು: ಕಾಫಿ ತೋಟದಲ್ಲಿ ನವಜಾತ ಹೆಣ್ಣು ಶಿಶು ಪತ್ತೆಯಾಗಿರುವ ಘಟನೆ ಕೊಡಗು ಜಿಲ್ಲೆ ವಿರಾಜಪೇಟೆ ತಾಲ್ಲೂಕಿನ ಬೇತ್ರಿ ಗ್ರಾಮದಲ್ಲಿ ನಡೆದಿದೆ.…
ನವದೆಹಲಿ: ಸಂಸತ್ತಿನ ಆವರಣದಲ್ಲಿ ಕಾರಿನಿಂದ ಇಳಿದು ಬಂದ ಪ್ರಧಾನಿ ನರೇಂದ್ರ ಮೋದಿ ಅವರು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್‌ಗಾಂಧಿ…
ಮಂಡ್ಯ: ಮುಂಬರುವ ಮುಂಗಾರು ಹಂಗಾಮಿನ ಕೃಷಿ ಚಟುವಟಿಕೆಗಳಿಗೆ ರೈತರಿಗೆ ಅನುಕೂಲವಾಗುವಂತೆ ಯಾವುದೇ ಅಡಚಣೆಯಿಲ್ಲದೇ ವಿವಿಧ ಬೆಳೆಗಳಿಗೆ ಅವಶ್ಯಕವಾದ ರಸಗೊಬ್ಬರಗಳನ್ನು ನಿಯಮಾನುಸಾರ…
ಮಂಡ್ಯ: ಕನ್ನಡ ಕರ್ನಾಟಕ ಫೌಂಡೇಶನ್, ಎಂಪ್ಟಿ ಪಾಕೆಟ್ ಡ್ರೀಮ್ಸ್ ಜೊತೆಗೂಡಿ ಆಯೋಜಿಸಿದ್ದ ಆಪ್ತ ಸಂವಾದ: ಒಂದು ಪುಸ್ತಕ ಕ್ರಾಂತಿ ಕಾರ್ಯಕ್ರಮದ…