ಕ್ರಿಕೆಟ್‌ಗೆ ದಕ್ಷಿಣ ಆಫ್ರಿಕಾದ ವೇಗಿ ಬೌಲರ್‌ ಡೇಲ್‌ ಸ್ಟೇಯ್ನ್‌ ನಿವೃತ್ತಿ ಘೋಷಣೆ

ಹೊಸದಿಲ್ಲಿ: ಎಲ್ಲ ಮಾದರಿಯ ಕ್ರಿಕೆಟ್‌ಗೆ ದಕ್ಷಿಣ ಆಫ್ರಿಕಾದ ವೇಗದ ಬೌಲರ್ ಡೇಲ್ ಸ್ಟೇಯ್ನ್ ನಿವೃತ್ತಿ ಘೋಷಿಸಿದ್ದಾರೆ.

38 ವರ್ಷದ ಸ್ಟೇಯ್ನ್‌ ನಿವೃತ್ತಿ ವಿಚಾರವನ್ನು ಟ್ವಿಟರ್‌ ಮೂಲಕ ಘೋಷಣೆ ಹೊರಡಿಸಿದ್ದಾರೆ.
ಡೇಲ್ ಸ್ಟೇಯ್ನ್ ಅವರು 93 ಟೆಸ್ಟ್‌ ಪಂದ್ಯಗಳಿಂದ 22.95 ಸರಾಸರಿಯಲ್ಲಿ 439 ವಿಕೆಟ್ ಪಡೆದಿದ್ದಾರೆ.

ಫೆಬ್ರುವರು 2019ರಲ್ಲಿ ಕೊನೆಯ ಬಾರಿಗೆ ಟೆಸ್ಟ್ ಪಂದ್ಯ ಆಡಿದ್ದ ಸ್ಟೇಯ್ನ್, ಅದೇ ವರ್ಷದ ಆಗಸ್ಟ್‌ನಲ್ಲಿ ಟೆಸ್ಟ್‌ ಕ್ರಿಕೆಟ್‌ನಿಂದ ನಿವೃತ್ತಿ ಘೋಷಿಸಿದ್ದರು. ಕಳೆದ ವರ್ಷದ ಫೆಬ್ರುವರಿಯಲ್ಲಿ ಕೊನೆಯ ಬಾರಿಗೆ ಏಕದಿನ ಪಂದ್ಯ ಆಡಿದ್ದರು.

125 ಏಕದಿನ ಪಂದ್ಯಗಳಲ್ಲಿ 196 ವಿಕೆಟ್ ಹಾಗೂ 47 ಟಿ20 ಪಂದ್ಯಗಳಿಂದ 64 ವಿಕೆಟ್ ಉರುಳಿಸಿದ್ದಾರೆ.

× Chat with us