ಇನ್‌ಸ್ಟಾಗ್ರಾಂನಲ್ಲಿ 100 ಮಿಲಿಯನ್‌ ಫಾಲೋವರ್ಸ್ ಹೊಂದಿದ ಮೊದಲ ಕ್ರಿಕೆಟಿಗ ಕೊಹ್ಲಿ‌

ಹೊಸದಿಲ್ಲಿ: ಸಾಮಾಜಿಕ ಮಾಧ್ಯಮ ವೇದಿಕೆ ಇನ್‌ಸ್ಟಾಗ್ರಾಂನಲ್ಲಿ ಇಡೀ ವಿಶ್ವದಲ್ಲೇ 100 ಮಿಲಿಯನ್‌ ಫಾಲೋವರ್ಸ್‌ ಹೊಂದಿರುವ ಮೊದಲ ಕ್ರಿಕೆಟಿಗ ಎಂದು ವಿರಾಟ್‌ ಕೊಹ್ಲಿ ಹೆಸರಾಗಿದ್ದಾರೆ.

ʻಇನ್‌ಸ್ಟಾಗ್ರಾಂನಲ್ಲಿ ಅತಿಹೆಚ್ಚು ಹಿಂಬಾಲಕರನ್ನು (ಫಾಲೋವರ್ಸ್‌) ಹೊಂದಿ ಖ್ಯಾತಿಗಳಿಸಿರುವ ಏಕೈಕ ಕ್ರಿಕೆಟ್‌ ತಾರೆ ವಿರಾಟ್‌ ಕೊಹ್ಲಿʼ ಎಂದು ಐಸಿಸಿ ಟ್ವೀಟ್‌ ಮಾಡಿದೆ.

ಕ್ರೀಡಾ ತಾರೆಗಳಲ್ಲಿ ಫುಟ್‌ಬಾಲ್‌ ಸ್ಟಾರ್‌ ಕ್ರಿಶ್ಚಿಯಾನೊ ರೊನಾಲ್ಡೊ 265 ಮಿಲಿಯನ್‌ ಫಾಲೋವರ್ಸ್‌ ಹೊಂದುವ ಮೂಲಕ ಮೊದಲ ಸ್ಥಾನದಲ್ಲಿದ್ದಾರೆ. ಅರ್ಜೆಂಟೀನಾ ಫುಟ್‌ಬಾಲ್‌ ತಂಡದ ನಾಯಕ ಲಿಯೊನಲ್‌ ಮೆಸ್ಸಿ (186 ಮಿಲಿಯನ್‌ ಫಾಲೋವರ್ಸ್‌), ಬ್ರೆಜಿಲ್‌ನ ನಯ್ಮರ್‌ (147 ಮಿಲಿಯನ್) ಕ್ರಮವಾಗಿ ಎರಡು ಮತ್ತು ಮೂರನೇ ಸ್ಥಾನದಲ್ಲಿದ್ದಾರೆ.

ಪಾಪ್ ಸ್ಟಾರ್ ಡೆಮಿ ಲೊವೆಟೊ (9.9ಕೋಟಿ), ಪ್ರತಿಷ್ಠಿತ ಫುಟ್‌ಬಾಲ್ ಕ್ಲಬ್‌ಗಳಾದ ರಿಯಲ್ ಮ್ಯಾಡ್ರಿಡ್ (9.5 ಕೋಟಿ) ಮತ್ತು ಬಾರ್ಸಿಲೋನಾ ಎಫ್‌ಸಿಯನ್ನು (9.4 ಕೋಟಿ) ವಿರಾಟ್ ಹಿಂದಿಕ್ಕಿದ್ದಾರೆ.

ಕೊಹ್ಲಿ ಅವರನ್ನು ಆಧುನಿಕ ಕಾಲದ ಕ್ರಿಕೆಟ್‌ನ ಹೀರೊ ಎಂದು ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಮಾಜಿ ನಾಯಕ ಸ್ಟೀವ್ ವಾ ಇತ್ತೀಚೆಗೆ ಹೊಗಳಿದ್ದರು.

× Chat with us