ಮೈಸೂರು: ಕೋವಿಡ್‌ನಿಂದ ಮೃತಪಟ್ಟ ಮಹಿಳೆಯ ಚಿನ್ನಾಭರಣ ನಾಪತ್ತೆ!

ಮೈಸೂರು: ಕೋವಿಡ್‌ಗೆ ತುತ್ತಾಗಿ ಆಸ್ಪತ್ರೆಯಲ್ಲಿ ಸಾವಿಗೀಡಾದ ಮಹಿಳೆಯೊಬ್ಬರ ಚಿನ್ನಾಭರಣ ಎಗರಿಸಿರುವ ಪ್ರಕರಣ ನಗರದಲ್ಲಿ ಬೆಳಕಿಗೆ ಬಂದಿದೆ.

ಮೈಸೂರಿನ ಎಂ.ಕೆ. ಯಶವಂತ್ ಕುಮಾರ್ ಅವರು ಈ ಸಂಬಂಧ ದೂರು ದಾಖಲಿಸಿದ್ದಾರೆ.

ಯಶವಂತ್‌ ಅವರ ತಾಯಿ ತಾಯಿ ಗೌರಮ್ಮ ಕೋವಿಡ್‌ನಿಂದಾಗಿ ಜೆ.ಪಿ. ನಗರದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದರು.

ಗೌರಮ್ಮ ಅವರು ಆಸ್ಪತ್ರೆ ಸೇರಿದಾಗ 4 ಚಿನ್ನದ ಬಳೆ, ಒಂದು ಉಂಗುರ, 2 ಓಲೆ ಮತ್ತು ಕೊರಳಿನಲ್ಲಿ ಒಂದು ಚಿನ್ನದ ಸರ ಧರಿಸಿದ್ದರು. ಬಿಲ್ ಪಾವತಿಸಿದ ನಂತರ ನಿಮ್ಮ ತಾಯಿಯವರ ಒಡವೆಗಳನ್ನು ನೀಡುತ್ತೇವೆಂದು ಆಸ್ಪತ್ರೆಯ ಸಿಬ್ಬಂದಿ ಯಶವಂತ್ ಕುಮಾರ್​ಗೆ ತಿಳಿಸಿದ್ದರು. ಆದರೆ, 25 ಗ್ರಾಂ ತೂಕದ ಚಿನ್ನದ ಸರವನ್ನು ಬಿಟ್ಟು ಎಲ್ಲವನ್ನೂ ಹಿಂತಿರುಗಿಸಿದ್ದಾರೆ. ಸರದ ಬಗ್ಗೆ ಕೇಳಿದಾಗ ನಮಗೆ ಗೊತ್ತಿಲ್ಲ ಎನ್ನುತ್ತಿದ್ದಾರೆ ಆಸ್ಪತ್ರೆಯ ಸಿಬ್ಬಂದಿ. ಈ ಸಂಬಂಧ ವಿದ್ಯಾರಣ್ಯಪುರಂ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

× Chat with us